
ನಿನ್ನಿರುಳು ಕನಸೊಂದ ಕಂಡೆ, ಅತ್ತ ಕಡೆಯಲಿ, ಪೂರ್ವಕ್ಕೆ, ಕೊಂಚ ಓರೆಗೆ ತೋರುತಿರಲು ಎಳೆ ಚಂದ್ರ, ಕಿಟಕಿಯ ಬಳಿಯೇ ಕುಳಿತೆನ್ನ ಮುಂಗಡೆಗೆ ಕಂಬಿಗಳ ನೆರಳು ಮಲಗಿತ್ತು. ಅತ್ತಿತ್ತ ತುಸು ಬೆಳಕು, ಪಕ್ಕದಲ್ಲಾವುದೋ ಕಿರುಗತೆಯ ಬೆಳೆ ಕೂಡಿಸಿದ ಸಣ್ಣ ಕತೆ...
ಮುಗಿಲ ಹಣೆಯಲಿ ಹೊಳೆವ ಅಳಿತಾರೆಗಳು ರವಿಯು ಹಗಲಿನಲಿ ಹುಟ್ಟುತಿರೆ ಮಾಸಿಹೋಗುವ ತೆರದಿ, ಭಾವಗಳು, ಬಯಕೆಗಳು, ನೂರಾರು ಚಿಂತೆಗಳು, ಕನಸು ಮನವಾವರಿಸೆ, ಒಲವ ಸುಂದರ ರವದಿ ಮಾಯವಾಗುತಲಿಹವು, ಉರುಳಿರುವ ತಾರೆಗಳ ಗತಿಯ ಕೇಳುವುದೇಕೆ? ಹಗಲಿನೆಳಬಿಸಿಲಿನಲ...
ರಚನೆ: ೫ನೆಯ ಸೆಪ್ಟೆಂಬರ್ ೧೯೪೨, ಮೈಸೂರು ಮಾನವ ಜನ್ಮದಾಗ್ ಹುಟ್ಟಿದ್ಮೇಲೆ ಏನೇನ್ಕಂಡಿ ಜೀವನ್ದೊಳ್ಗೆ ಸಾಯೋತನ್ಕ ಗಂಡಾಗುಂಡಿ. ಲಕ್ಷ್ಮೀಪುರಂ ಸ್ಟೇಷನ್ನೊಳ್ಗೆ ಕುಳಿತ್ಕೊಂಡಿ ಬರೀತೇನೆ ಲಾವಣಿ ಒಂದು, ಜೈಲಿನ್ಕಂಡಿ. ಹಿಂದೆ ಎಂದೂ ಜೈಲಿನ್ಕಡ್ಗೆ ಸುಳ...
ಕಣ್ಣೀರಿನ ಕಡಲಿನ ಮೇಲೆ ಮಿಂಚಿದೆ ನನ್ನೀ ಬಾಳಿನ ಒಲವಿನಲೆ! ದೂರ ತೋರಿದಾ ನೀಲ ಬೆಟ್ಟಗಳ ನೀಲ ಮುಗಿಲಿನಲ್ಲಿ ಮುಳುಗು ಸೂರ್ಯನಾ ಕೆಂಪು ಕಾಡಿಗೆಯ ಬಣ್ಣ ಮಡಿಲಿನಲ್ಲಿ ತಾರೆ ಓರೆಯಲಿ ನಿಂತು ನೋಡುತಿರೆ, ಅಲೆಯು ಮೇಲೆ ಹೊಮ್ಮಿ ಚಿಣ್ಣ ಚಿಣ್ಣನೇ ದುಗುಡ ಹ...
“ಆಟದಲಿ ನಿಮಗಿರುವ ಹಿಗ್ಗು ಎಲ್ಲೆಡೆ ಹಬ್ಬಿ ನನ್ನನೂ ಆವರಿಸಿ ಸೆಳೆಯುತಿದೆ, ನಿಮ್ಮೆಡೆಗೆ ಕೂಡಿ ಆಡುವೆನೆನುವ ಆಸೆ ಎದೆಯನು ತಬ್ಬಿ ಎಳತನವನೆಬ್ಬಿಸಿದೆ. ಕಳೆದ ಕಾಲದ ಕಡೆಗೆ ನೆನವು ಹರಿಸಿದೆ ಇಂದು.” ಅದು ಹಿಂದೆ, ಬಲು ಹಿಂದೆ, ಇನ್ನು...













