ವಾಗ್ದೇವಿ – ೩೪

ವಾಗ್ದೇವಿ – ೩೪

ವಾಗ್ದೇವಿಗೆ ಭೀಮಾಜಿಯ ಅನುಗ್ರಹದಿಂದ ಶಾಬಯ್ಯನ ಕಟಾಕ್ಷವು ಪರಿಪೂರ್ಣವಾಗಿ ದೊರಕಿತು. ಅವಳು ಮನಸ್ಸಿನಲ್ಲಿ ಮಾಡಿಕೊಂಡ ಪ್ರಧಾ ನವಾದ ಸಂಕಲ್ಪಸಿದ್ಧಿಗೆ ಆ ಇಬ್ಬರು ಅಧಿಕಾರಸ್ತರ ಕೃಪೆಯೇ ಮುಖ್ಯವಾದ ದ್ಹೆಂದು ಮುಂದಿನ ಚರಿತ್ರೆಯಿಂದ ವಾಚಕರಿಗೆ ತಿಳಿಯುವದು. ಕೆಪ್ಪಮಾಣಿ ಯುಮಾಡಿದ ಹಲವು ಕಳವುಗಳನ್ನು ಕುರಿತು ಅವನ ಮೇಲೆ ಆದ ಪ್ರಕರಣ ಇತ್ಯರ್ಥವಾಗುವದಕ್ಕೋಸ್ಕರ ವಾಗ್ದೇವಿಗೆ ಯಾರ ಸಹಾಯವೂ ಅವಶ್ಯ ವಿರಲಿಲ್ಲ. ಅದಕ್ಕೋಸ್ಟರ ಅವಳು ಯಾರಿಗೂ ದಮ್ಮಯ್ಯ ಹಾಕಲಿಕ್ಕೆ ಹೋಗಲೂ ಇಲ್ಲ. ಆ ಒಂದು ನೆವದಿಂದ ಅವಳಿಗೆ ಅನಾಯಾಸವಾಗಿ ಪಟ್ಟಣದ ಪ್ರಮುಖ ಅಧಿಕಾರಸ್ಥರ ಪರಿಚಿತಿಯುಂಟಾಯಿತು. ಕೆಪ್ಪಮಾಣಿ ಯನ್ನು ಶಾಬಯ್ಯನ ಮುಂದಿ ಕೊತ್ವಾಲನ ಅಪಾದನೆ ಪತ್ರ ಸಹಿತ ಕಳುಹಿ ಸೋಣಾದಲ್ಲಿ ಅವನು ತಾನು ಕೆವುಡನೆಂಬ ಸಾಧನೆ ಮಾಡುವುದಕ್ಕೆ ಹೊರ ಟನು. ಎಷ್ಟು ಘಟ್ಟಯಾಗಿ ಮಾತನಾಡಿದರೂ ಕಿವಿಕೇಳದವನಂತೆ ನಿಂತು ಕೊಂಡನು. ಅವನು ನಿಜವಾಗಿ ಕಿವುಡನಲ್ಲವೆಂಬ ವಿಷಯದಲ್ಲಿ ಜಾನಕಿ ಮತ್ತು ಸುಂದರಿ ಇವರ ಸಾಕ್ಷವೂ ಯಾಕೂಬಖಾನನ ಪ್ರಮಾಣವೂ ಎಥೇ ಷ್ಟವಾದರೂ ಬುದ್ಧಿಶಾಲಿಯಾದ ಕಾರಭಾರಿಯು ನಿಜವಾದ ಕಿವುಡನಿಗೆ ಕೇಳ ವಲ್ಲದ ಸಣ್ಣ ಸ್ವರದಿಂದ ಜವಾನನೊಬ್ಬನನ್ನು ಕರೆದು ಅಪರಾಧಿಗೆ ಮೊಟ್ಟ ಮೊದಲು ಹನ್ನೆರಡು ಛಡಿಹೊಡೆ ಎಂದು ಹೇಳಿದನು.

“ದಮ್ಮಯ್ಯಾ ಬುದ್ಧೀ! ಅದೊಂದೂ ಬೇಡ, ನನಗೆ ಕಿವಿ ಚೆನ್ನಾಗಿ ಕೇಳುತ್ತದೆ; ಇದುವರೆಗೆ ನಾನು ಮಾಡಿದ ಕಪಟ ಕ್ಷಮಿಸಬೇಕು” ಎಂದು ಅಪರಾಧಿಯು ಬೇಡಿಕೊಂಡನು. ಶಾಬಯ್ಯನು ತನ್ನ ವೈನವು ಸಫಲವಾಯಿ ತೆಂದು ಹಿಗ್ಗಿದನು. ತರಲ್ಪಟ್ಟ ಸಾಕ್ಸವನ್ನೆಲ್ಲಾ ಬರಕೊಂಡಾದ ಮೇಲೆ ಅಪ ರಾಧಿಯು ಒಪ್ಪಿದ ಪ್ರಯುಕ್ತ ಮೊಕದ್ದಮೆಯು ಸುಲಭವಾಗಿ ಫೈಸಲಾಗುವ ಅನುಕೂಲವಾಯಿತೆಂದು ಕಾರಭಾರಿಯು ಸಂತೋಷಪಟ್ಟು, ಅಪರಾಧಿಯ ಮೇಲೆ ಕೊಂಚ ದಯವಿಟ್ಟು ಐದು ಸಂವತ್ಸರಗಳ ಪರಿಯಂತರ ಕೈದು ಶಿಕ್ಷ ಯನ್ನು ವಿಧಿಸಿದನು. ಆಭರಣಗಳನ್ನು ಆವಾವ ಮಾಲಿಕರಿಗೆ ತಿರುಗಿ ಕೊಡ ತಕ್ಕದ್ದೆಂದು ಅಪ್ಪಣೆಯಾಯಿತು. ಈ ವಾರ್ತೆಯು ಚಂಚಲನೇತ್ರರ ಮತ್ತು ವಾಗ್ದೇವಿಯ ಕಿವಿಗೆ ಬೀಳುತ್ತಲೇ ಅವರಿಬ್ಬರು ತುಂಬಾ ಹರುಷ ಪಟ್ಟರು. ಚಂಜಲನೇತ್ರರು. ಕೊತ್ವಾಲನನ್ನು ಮಠಕ್ಕೆ ಕರೆಸಿ, ಅತಿಶಯವಾದ ಬಹು ಮಾನ ಮಾಡಿದರು. ಕಾರಭಾರಿಗೆ ಕೊತ್ವಾಲನ ಪರಿಮುಖ ಊಚು ಉಡು ಗೊರೆಗಳನ್ನು ಕಳುಹಿಸಿದರು. ಯಾಕುಬಖಾನಗೆ ಒಂದು ಒಳ್ಳೇ ಜರಿಯ ಪಗಡಿಯನ್ನು ಕಟ್ಟಿಸಿ, ಸೊಂಟಕ್ಕೆ ಜೋಡು ಎಳೆ ಬೆಳ್ಳಿಯ ನೇವಳ, ಕೈಗೆ ಚಿನ್ನದ ಬಾಜಿಬಂದ್‌ ಹಾಕಿಸಿಬಿಟ್ಟು, ನಗದಿಯಿಂದ ನೂರು ರೂಪಾಯಿ ಗಳನ್ನು ಕೊಟ್ಟರು. ಯಾಕುಬಖಾನನು ಚಂಚಲನೇತ್ರರ ಔದಾರ್ಯವನ್ನು ಹೊಗಳುತ್ತಾ, ಅವರಿಂದ ತನಗೆ ಸಿಕ್ಕಿದ ಇನಾಮನ್ನು ವಾಗ್ದೇವಿಗೆ ತೋರಿ ಸಿದನು. ಅವಳು ತನ್ನ ಕೈಯಿಂದ ಅವನಿಗೆ ಐವತ್ತು ರೂಪಾಯಿ ಕೊಟ್ಟು ಮನ್ನಿಸಿದಳು. “ಅವ್ವಾ! ನಿಮ್ಮ ಸೇವೆಯನ್ನು ಯಾವಾಗ ಅಪ್ಪಣೆಯಾಯಿ ತೋ ಆವಾಗ ಜೀವದಾಶೆಯನ್ನಾದರೂ ಬಿಟ್ಟು, ಮಾಡುವುದಕ್ಕೆ ಉದ್ಯುಕ್ತ ನಾಗುವೆನು. ಅವಶ್ಯಕಂಡಾಗ ನನ್ನನ್ನು ಕರೆಸಿ ಅಜ್ಞೆಯಾಗಬೇಕು? ಎಂದು ಯಾಕುಬಖಾನನು ಸವಿಯಾದ ಮಾತುಗಳಿಂದ ತನ್ನ ಕೃತಜ್ಞತೆಯನ್ನು ನಿವೇದಿಸಿದನು.

ದಫೆದಾರ ಯಾಗಸಪ್ಪನ ನೆನಪು ಯಾರಿಗೂ ಬರಲಿಲ್ಲ. ಶ್ರೀಪಾದಂಗ ಳಾಗಲೀ ವಾಗ್ದೇವಿಯಾಗಲೀ ತನನ್ನು ಮರಿಯಲಿಕೈ ಲ್ಲವೆಂಬ ಅವನ ನಂಬಿ ಕೆಯು ವ್ಯರ್ಥವಾಯಿತು. ಅವರು ತನ್ನನ್ನು ಕರಸಿ ಏನಾದರೂ ಕೊಡದಿದ್ದ ರೇನಾಯಿತು? ತಾನೇ ಹೋಗಿ ಅವರನ್ನು ಕಂಡುಬಿಟ್ಟರೆ ಹ್ಯಾಗಾಗುತ್ತದೆಂದು ನೋಡುವದಕ್ಕೆ ಅವನು ಒಂದು ದಿನ ಚಂಚಲನೇತ್ರರ ಭೇಟಿಯನ್ನು ಮಾಡಿ ದನು. ಅವರು ಅವನಿಗೆ ಒಂದು ರುಪಾಯಿ ಮೌಲ್ಯದ ಎಲವಸ್ತ್ರವನ್ನು ಕೊಟ್ಟು ಸುದಾರಿಸಿಬಿಟ್ಟರು. “ಶ್ರೀಪಾದಂಗಳು ಎಟ್ಟು ಕೊಟ್ಟರೂ ಬಿರ್ಮಸ್ಪ ಬರ್ಕತ ಆಗೆಕ್ಕಿಲ್ಲ, ಇನೊಂದು ಎಲವಸ್ತ್ರ ಅಂದ್ರೆ ಉಡಗೆರೆ; ಅದು ತಕ್ಕೊಂ ಬುದು ನ್ಯಾಯ ಅಂದಿ, ಧರ್ಮಸಾಸ್ತ್ರದಾಗೆ ಉಂಟು, ಆದುರ್ನೂ ವಾಗ್ದೇವಿಗೆ ಒಂದು ಗಾಯ ಕಂಡು ಕಾಟಿ ಹೋಗಿಬಿಡುತ್ತೇನೆ.” ಹೀಗೆಂದು ಅವನು ಅವ ಇದ್ದಲ್ಲಿಗೆ ಹೋದನು. ಅವಳು ನಗೆಮುಖದಿಂದ ಅವನನ್ನು ಕೂಡ್ರಿಸಿ, ಹೊಟ್ಟ ತುಂಬಾ ಅನ್ನ ಹಾಕಿಸಿ ತಣಿಸಿದ್ದಲ್ಲದೆ, ಕುಪ್ಪಸದ ಕಣಸಹಿತ ಒಂದು ಶೀರೆ, ಒಂದು ಜೋಡು ವೇಷ್ಟಿ, ನಗದಿಯಿಂದ ನಾಲ್ಕು ರೂಪಾಯಿ ಕೈಗೆ ಹಾಕಿದಳು. “ಏ ನನ್ನವ್ವಾ! ನಿಮಗೆ ದೇವರು ವಜ್ರಾಯ್ಸ ಕೊಡ್ಲಿ ನಿಮ್ಮ ಕಾಲಿಗೆ ಬಲಕೊಡ್ಲಿ; ನನ್ನ ಹೆಂಡತಿ ಉಡೋಕೆ ಶೀರೆ ಇಲ್ಲದೆ ದಿನಕೆ ಮೂರು ಗಾಯ ನಿಮ್ಮ ಮುಖ ಸುಡೋಕೆ? ಅಂದಿ ನಂಗೆ ಬೈತಾಳೆ. ಅವಳಿಗೆ ಒಂದು ಶೀರೆಯಾಯಿತು. ಖಣ ಅವಳ ಅಪ್ಪನ ಕಾಲಕ್ಕೆ ನೋಡಿಯಾಳೋ! ಅದೂನೂ ಅವಳ ಎದೆಗೆ ಹಾಕ್ತೇನೆ; ವೇಷ್ಟಿ ನಂಗೆ ಉಡೇಕೆ ಆಯಿತು. ಅಮ್ಮಾ! ಇನ್ನು ಹೋಗಿ ಬರ್ತೇನೆ” ಎಂದು ಯಾಗಪ್ಪನು ತೃಪ್ತನಾಗಿ ಹೊರಟನು.

“ಯಾಕುಬಖಾನನ ಹೆಸರು ಹೇಳೇಕೆ ನಾನು; ಇನಾಮು ಹೊಡ ಕೊಳ್ಳೇಕೆ ಅವಾ. ನನಗೆ ಒಂದು ಕಾಸಾದರೂ ಆ ತುರ್ಕ ಕೊಟ್ಟು ಸಲಾಂ ಮಾಡಿದನೇ, ಇಐ್ಲ; ಕೊತ್ವಾಲನಾದರೂ ಹೇಳಿ ಕೊಡಿಸಿದನೇ, ಇಲ್ಲ. ಕೊತ್ವಾ ಲನ ತಲೆ ನಾಕುಟ್ಟ” ಎಂದು ತನ್ನಷ್ಟಕ್ಕೆ ಮಾತಾಡಿಕೊಳ್ಳುತ್ತಾ ಯಾಗಪ್ಪನು ಹೋಗುವ ಕಾಲದಲ್ಲಿ ಎದುರಿನಿಂದ ಬರುವ ಯಾಕುಬಖಾನನು ಸಿಕ್ಕಿ ಕಿಸ್ಕನೆ ನಕ್ಕನು. “ಹೌದೇನೋ ಪೋರಾ, ನಿನ್ನ ಹೆಸರು ಖಾವಂದರಿಗೆ ನಾ ಹೇಳಿದ ಮೇಗಷ್ಟೇ ನೀನು ಇಟ್ಟು ಕಾರಬಾರ ಮಾಡೋಕೆ ಆದಿ; ಇಬ್ಲದೆಹೋಗಿದ್ರೆ ನಿನಗೆ ನಾಯಿನೂ ಮೂಸಕೆ ಇತ್ತೇ? ‘ನಾಕು ಮದ್ವೆಗೆ ಸಾಕು? ಅಟ್ಟು ಹಣಾನೂ ಅರವೆನೂ ನಿಂಗೆ ಸಿಕ್ಕಿದಾಗೂನು ಜಪೆದಾರರ ನೆನಪು ನಿಂಗೆ ಬಂತೆನೋ ಪರ್ದೇಸಿ ತಡಿ! ನಿಂಗೆ ನಾ ಮಾಡೋ ಬಗೆ ಬೇರೆ ಐತೆ. ಬಾಯಿಂದ ಪೌರಸ ಆಡ್ತೇನೆ ಅಂದಿ, ಮಾಡಿಕೊಂಡಿದ್ದೀಯಾ ಅಲ್ಲ, ಅಲ್ಲ. ವಳ್ತು ಮಾಡೆಕೆ ಕಷ್ಟ ಹಡ್ಕಿ ಮಾಡೆಕೆ ಎಟ್ಟು ಹೊತ್ತು ಬೇಕು ನೋಡುವ” ಎಂದು ದಫೆದಾರನು ಹೊಟ್ಟಿ ಕಿಚ್ಚು ತಡೆಯಲಾರದೆ ಆಡಿದ ಪರಾಕ್ರಮಕ್ಕೆ ಯಾಕುಬ ಖಾನನು ಒಂದು ಸಾಸಿವೆ ಕಾಳಿನಷ್ಟು ಗಣ್ಯಮಾಡತಕ್ಕ ಅಗತ್ಯವಿರಲಿಲ್ಲ. ಆದರೂ ತನ್ನ ಮೇಲ ಉದ್ಯೋಗಸ್ತನೂ ವಯೋವ್ಚದ್ಧನೂ ಆದ ಅವನ ನರೆ ಗಡ್ಡಕ್ಕಾದರೂ ಮರ್ಯಾದೆ ಕೊಡಬೇಕೆಂಬ ಗ್ರಹಿಕೆಯಿಂದ ಎರಡು ರುಪಾಯಿಗಳನ್ನು ಅಂಗಿ ಕಿಸೆಯಿಂದ ತೆಗೆದು– “ಇಕೊಳ್ಳಿ, ಯಾಗಪ್ಪಣ್ಣಾ! ಸ್ವಲ್ಪ ಆಯಿತೆಂದು ಮನಸ್ಸಿನಾಗೆ ಖವುಟು ಇಟ್ಟುಕೋಬ್ಯಾಡಿ. ಮುಂದೆ ನಿಮ್ಮ ಸೇವೆ ನಾನು ಮಾಡುವವನೇ ಎಂದನು. ದಫೆದಾರಗೆ ಕಾನ ಖುಶಿಯೂ ದಿಲ ಖುಶಿಯೂ ಆಯಿತು. ನಾ ಬೇಗ ನಾರ್ನಪರ್ವಸಿ ತಕ್ಕೊಂಡ ಕಾಟಿ ನನ್ನ ಬೆಳ್ಳಿ ಬಿಲ್ಲೆ ನಿನ್ನ ಎಡೆಗೆ ಹಾಕ್ತೇನೆ” ಎಂದು ದಫೆದಾರನು ಯಾಕುಬ ಖಾನಗೆ ಉಪಕಾರ ಸ್ಮರಣೆರೂಪವಾಗಿ ಆಶೆ ಹುಟ್ಟಿಸಿದನು. ಹಾಗೆಯೇ ಅವರಿಬ್ಬರೂ ತಂತಮ್ಮ ದಾರಿ ಹಿಡಿದರು.

ತಿಪ್ಪಾಶಾಸ್ತ್ರಿಗೂ ವಾಗ್ದೇವಿಗೂ ದಿನೇ ದಿನೇ ಆಪ್ತಭಾವ ಕಡಿಮೆಯಾ ಗುತ್ತಾ ಬಂತು. ಶಾಸ್ತ್ರಿಗೆ ಅವಳ ಮೇಲಿನ ಮೋಹವೂ ಕೊಂಚವಾದರೂ ಕಮ್ಮಿಯಾಗಲಿಲ್ಲ. ಅವಳು ಅವನ ಮೇಲೆ ರವಷ್ಟಾದರೂ ವಿಶ್ವಾಸವಿಡಲಿಕ್ಕೆ ಮನಸ್ಸಿಲ್ಲದವಳಾದುದರಿಂದ ಅವನ ವ್ಯಸನವು ಅನುದಿನವೂ ಏರುತ್ತಾ ಬರುವದಾಯಿತು. ಗೃಹಕೃತ್ಯ ಸರಿಯಾಗಿ ನಡೆಯುವಂತೆ ತಾತ್ಪರ್ಯಕೊಟ್ಟು ನೋಡುವದಕ್ಕೆ ಜನ ಬಲವು ಕಡಿಮೆಯಾಗಿ ವಾಗ್ದೇವಿಯು ಯೋಚನೆ ಗೈಯುತ್ತಿರುವನೇಳೆ ಭೀಮನ ಹಳ್ಳಿಯಲ್ಲಿ ವಾಸವಾಗಿರುತ್ತಿದ್ದ ಅವಳ ಚಿಕ್ಕ ತಾಯಿ ನೇತ್ರಾವತಿಯ ಮಗಳು ಶೃಂಗಾರಿಗೂ ಅವಳ ಪತಿಗೂ ವಿರೋಧ ಹುಟ್ಟಿ ಪತಿ ಪತ್ನಿ ಪ್ರತ್ಯೇಕನಾದ ದೆಸೆಯಿಂದ ಆ ಸ್ತ್ರೀಯು ಜೀವನೋಪಾಯವಿಲ್ಲದೆ ಕಷ್ಟಪಡುವ ಕಾಲ ಬಂತು. ಇದು ತನ್ನ ಉದ್ದೇಶಕ್ಕೆ ಉಪಯುಕ್ತವಾದ್ದೆಂದು ವಾಗ್ದೇವಿಯು ನೆನಸಿ ಶೃಂಗಾರಿಯನ್ನು ಕರೆಕಳುಹಿಸಿ ತನ್ನಲ್ಲಿದ್ದುಕೊಳ್ಳೆಂದು ಪ್ರೀತಿಯಿಂದ ಹೇಳಿದಳು ಅವಳಿಗೆ ಆ ಅಭಿಮಂತ್ರಣವು ಅತಿ ಹಿತಕರವಾಗಿ ಕಂಡು ಬಂದು ಅದನ್ನು ಉಲ್ಲಾಸದಿಂದ ಅಂಗೀಕರಿಸಿದಳು. ಶೃಂಗಾರಿ ಎಂಬ ಹೆಸರು ಅವಳಿಗೆ ಛಂದಾಗಿ ಒಪ್ಪುವಂಥಾದ್ದೆಂದು ಅವಳ ಆವಭಾವ ರೂಪ ಲಾವಣ್ಯವನ್ನು ನೋಡಿದವರು ಹೇಳದಿರರು. ಅವಳ ಸೌಂದರ್ಯವನ್ನು ಎಷ್ಟು ಸಮಯ ಪರಿಯಂತ್ರವೂ ವರ್ಣಿಸಬಹುದು. ವಾಗ್ದೇವಿಯ ದ್ವಿತೀಯ ಸ್ಥಾನವನ್ನು ಹೊಂದಲಿಕ್ಕೆ ಶೃಂಗಾರಿಯೇ ಅರ್ಹಳೆನ್ಸಬೇಕು. ಎಷ್ಟು ಪೇಚಾ ಡಿದರೂ ಗಂಡನು ಪುನರಪಿ ಮನೆಯೊಳಗೆ ತನ್ನನ್ನು ಪ್ರವೇಶಿಸಬಿಡೆನೆಂದು ಅವಳಿಗೆ ಖಂಡಿತವಾಗಿ ಗೊತ್ತಿರುವದರಿಂದ ಅವನ ಹಂಬಲನ್ನು ಬಿಟ್ಟು ಅಕ್ಕ ವಾಗ್ದೇವಿಯ ಸೇವೆಯಲ್ಲಿ ಮನಃಪೂರ್ತಿಯಾಗಿ ಅಮರಿಕೊಂಡಳು.

ತಿಪ್ಪಾಶಾಸ್ತ್ರಿಗೆ ವಾಗ್ದೇವಿಯ ಹೃದಯಮಂದಿರದಲ್ಲಿ ಮೊದಲು ದತ್ತ ಮಾಡಿರುತ್ತಿದ್ದ ಅಂತಸ್ಸು ತಪ್ಪಿಹೋದಂದಿನಿಂದ ಅವನು ನೀರಿನಿಂದ ಎತ್ತಿ ಮೇಲಕ್ಕೆ ಹಾಕಲ್ಪಟ್ಟ ಮತ್ಸ್ಯದಂತೆ ಕಳವಳಗೊಳ್ಳುತಿದ್ದನು. ಆ ಕುಯುಕ್ತಿ ಗಾರ ಶಾಸ್ತ್ರಿಯು ಮೆಲ್ಲಮೆಲ್ಲಗೆ ಶೃಂಗಾರಿಯ ಮಮತೆಯನ್ನು ಪ್ರಾಪ್ತಿಸಿ ಕೊಳ್ಳಲಿಕ್ಕೆ ಪ್ರಯತ್ನಿಸಿದನು. ಸಾಧನೆ ಮಾಡಿದವ ಸಬಳ ನುಂಗ್ಯಾನೆಂಬ ಸಾಮತಿಯಂತೆ ಬಹುಸೂಕ್ಷ್ಮ ಉಪಾಯಗಳಿಂದ ವರ್ತಿಸಿದ ತಿಪ್ಪಾಶಾಸ್ತ್ರಿಯು ಹೆಚ್ಚು ವಿಳಂಬವಿಲ್ಲದೆ ಶೃಂಗಾರಿಯ ಹೃದಯದಲ್ಲಿ ತನ್ನ ಕಾಮಿತಕ್ಕೆ ಇಂಬು ದೊರಕಿಸಿಕೊಂಡನು. ವಾಗ್ದೇವಿಯು ಇದು ಚನ್ನಾಗಿ ತಿಳದೇ ಅವರಿಬ್ಬರ ಸ್ನೇಹಲತೆಯನ್ನು ಏರಬಿಟ್ಟಳಲ್ಲದೆ ಮುರಿಯಲಿಕ್ಕೆ ಸರ್ವಥಾ ನೋಡಲಿಲ್ಲ: ಹೀಗಾದುದರಿಂದ ತಿಪ್ಪಾಶಾಸ್ತ್ರಿಗೆ ವಾಗ್ದೇವಿಯ ಮೇಲೆ ಅಭಿಮಾನ ಉಳಿ ಯಿತು. ಅವನನ್ನು ಪೂರ್ಣವಾಗಿ ತಿರಸ್ಕಾರ ಮಾಡಿಬಿಟ್ಟರೆ ಕ್ರಮೇಣ ಅವನ ಶತ್ರುತ್ವದಿಂದ ದೊಡ್ಡ ಬಾಧಕ ಬರುವದೆಂಬ ಭಯವು ನಿವಾರಣೆಯಾದ ಹಾಗಾಯಿತು. ಒಟ್ಟಾರೆ ಇದೊಂದು ದೊಡ್ಡ ಅಡಚಣಿಯಿಂದ ವಾಗ್ದೇವಿಯು ಪಾರಾದ್ದು ಅವಳ ಪುಣ್ಯವೆನ್ನಬೇಕು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಶ್ವಾವತಾರ
Next post ಸಾಧನೆಯ ದಾರಿ

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys