ಮಾಗಿದ ಕನಸುಗಳು

ನನ್ನ ಬಾಗಿ ಕಾಮನಬಿಲಾದ ಬೆನ್ನು
ಗುಳಿಬಿದ್ದ ಕಣ್ಣು ಸುಕ್ಕುಗಟ್ಟಿ
ಗೆರೆಮೂಡಿ ಮಾಗಿದ ಮುಖ
ನಡುಗುತ್ತಿರುವ ಕೈಗಳಲ್ಲಿ
ನನ್ನ ಕನಸಿನ ವಸಂತಗಳನ್ನು
ಭದ್ರವಾಗಿ ಹಿಡಿದಿಡಲು
ನಿರಂತರ ತವಕಿಸುತ್ತೇನೆ.

ನನ್ನವನ ಪ್ರೀತಿ ತುಂಬಿದ ಪತ್ರಗಳನ್ನು
ಹಳೆಯ ಪೆಟ್ಟಿಗೆಯಿಂದ ಹೊರತೆಗೆದು
ಪ್ರೀತಿಯಿಂದ ನಡುಗುವ ಕೈ ಸವರಿ
ಆತ್ಮೀಯವಾಗಿ ಓದಿದಾಗ ಹಸಿರಾಗುತ್ತೇನೆ.
ಎಪ್ಪತ್ತರ ಅಂಚಿನಲ್ಲಿಯೂ ನಾನು
ಇಪ್ಪತ್ತರ ಹರೆಯ ಅನುಭವಿಸುತ್ತೇನೆ.

ದಿನಗಳು ಉರುಳಿ – ನೆರಳು ಬೆಳಕಿನಾಟ
ಕಾಲದ ಭೂತದಲ್ಲಿ ಹುಗಿದ ನೆನಪುಗಳು
ನೆನಪಿನಾಳದಲಿ ಹೂತ ಅಮರ ಪತ್ರಗಳು
ನನ್ನ ಕಣ್ಣು ರೆಪ್ಪೆಯಲ್ಲಿ ಬಚ್ಚಿಟ್ಟ
ಅಸಂಖ್ಯ ಅರ್ಥಗಳು – ಕಥೆಗಳು

ಮುಚ್ಚಿದ ನನ್ನ ಕಣ್ಣುಗಳಿಂದ
ಘಮ್ಮೆಂದು ಹೊರಸೂಸುವ
ಆತ್ಮದ ಅನುಭವದ ಸುಗಂಧ ಪರಿಮಳ
ಪಕ್ಕೆಗೂಡುಗಳ ಮೇಲೆ ತೇಲುವ
ಎಲುಬಿನ ಬರೀ ಹಂದರದಲಿ
ಕನಸಿನ ನಕ್ಷತ್ರಗಳ ಲೋಕವಿದೆ
ಭವಿಷ್ಯತ್ತಿನಲಿ ಹೊಸ ನಿರ್ಮಾಣ
ಕಾಣಲು ತವಕಿಸುವ ಹಂಬಲವಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕ ನೀ ನೋಡಬೇಕೆ
Next post ಗೀತಾಚಾರ್‍ಯ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…