“ಮತ್ತವನ ಬೆರಳುಗಳ ಸ್ಪರ್ಶಸುಖ ಸಿಗದೆನಗೆ ” ಎಂದು ಕೂದಲ ಕಿತ್ತುಕೊಳುತ ಕುಂಚ ಮಿಲಮಿಲನೆ ಹೊರಳಾಡಿ ಮೌನದೊಳೆ ಮರುಗುತಿದೆ ಸಂಕಟವು ಮೀರುತಿರಲಳಲಿನಂಚ! “ಅರ್ಥಕೇ ನಿಲಿಸೆನ್ನನಗಲಿದನು ಚಿರಕಾಲ ನಡುನೀರಿನೊಳೆ ಕೈಯ್ಯಬಿಟ್ಟನೆಂ”ದು ಎನಗಕಾಲದ ಮರಣವೇತಕೆನ್ನುತ ವಿಧಿಯ ದೂರುತಿದೆ ಅರೆಮುಗಿದ ಚಿತ್ರವೊಂದು! ***...

ಎದ್ದೇಳಿ ಎದ್ದೇಳಿ ಸೋದರರೇ ಕನ್ನಡದಾ ವೀರಯೋಧರರೇ ಕನ್ನಡದಾ ಮಣ್ಣಲ್ಲಿ ಮಣ್ಣಾಗಿ ಕನ್ನಡದಾ ನೆಲದ ಹಸಿರಾಗಿ || ಬಡಿದೆಬ್ಬಿಸುತಿಹಳು ತಾಯಿ ಮೊರೆ ಕೇಳಿ ಕನ್ನಡದಾದೀಪ ಹಚ್ಚಿ ಬೆಳಗಿ ನುಡಿಯೊಂದ ಕೇಳಿ ಒಲವಿಂದೇ ತೂಕಡಿಸದಿರಿ ತೂಕಡಿಸದಿರಿ ಮತ್ತೆ ತಾಯೆ ...

ಲೋಕದ ಮನೆ ಇದು ಕರ್‍ಮ ಭೂಮಿ ಕರ್‍ಮಕ್ಕೆ ಮೂಲಾಧಾರ ಮನವು ಹೌದು ಮನಸ್ಸನ್ನು ಬಿಡದಂತೆ ನಿಗ್ರಹಿಸು ಜೋಕೆ ಮನವು ಹೇಳಿದಂತೆ ನಿ ಓಡಲೇಕೆ! ಕಷ್ಟವೊ ಸುಖವೊ ಸಾಂತ್ವನದಿ ಸ್ವೀಕರಿಸು ಕಷ್ಟಗಳ ನಡುವೆಯೂ ಶಿವನ ಅನುಭವಿಸು ಈ ಬಾಳೇ ನಿನಗೊಂದು ಪರೀಕ್ಷಾ ಕೇಂದ...

ದಕ್ಷಿಣ ಹಿಂದೂಸ್ಥಾನದಲ್ಲಿ ಪ್ರಧಾನರಾಜ್ಯವಾಗಿರುವ ನಿಜಾಮ ರಾಷ್ಟ್ರದ ರಾಜಧಾನಿಯಾದ ಹೈದರಾಬಾದಿನ ಒಂದಾ ನೊಂದು ರಾಜಬೀದಿಯಲ್ಲಿ ಒಂದಾನೊಂದು ಉಪ್ಪರಿಗೆಯ ಮನೆ. ಆ ಮನೆಯ ದಿವಾನ್‌ ಖಾನೆಯಲ್ಲಿ ಒಬ್ಜ ತರುಣನು ಆದಿನದ ಅಂಚೆ ಯಲ್ಲಿ ಬಂದ ಕಾಗದವೊಂದನ್ನು ಹ...

ನೀನಾರು ಬಂದೆ ಅಜ್ಞಾತ ನಾಮವನು ತೊಟ್ಟುಕೊಂಡು ಯಕ್ಷಿ ಸುಪ್ತ ಜ್ವಾಲೆಗಳ ನೇತ್ರದವಳು ಘನರಾಜ ನೀಲಪಕ್ಷಿ ಮರೆತುಹೋದ ಹೊತ್ತೊಂದು ಉದಿಸಿ ಮೂಡಿಸಿದೆ ಭವ್ಯ ಆಸೆ ನಿಶಾಗುಹೆಯ ತೆರೆದಾದ ಅದ್ಭುತವ ಬರೆವ ಅಗ್ನಿರೇಷೆ ರಾಗ ಜೀರ್ಣ ಸೂತ್ರಗಳ ಬಳಕ ತೊರೆದಿತ್ತು...

ಹೊಸಕಾಲದ ಕವಿಯೊಬ್ಬನೆ ನಾನು! ಹೊಸೆಯುವೆನೆಂತಹ ಕವನಗಳನ್ನು! ೧ ಪ್ರತಿಭಾದೇವಿಯ ದಯೆ ಬೇಕಿಲ್ಲ ; ಅವಳಿಗೆ ಮಣಿಯುವ ಕವಿ ನಾನಲ್ಲ ! ಎಡಗೈಯಲಿ ನಿಂತಿಹಳಾ ಹುಡುಗಿ, ನನ್ನ ನೋಡಿದರೆ ಅವಳೆದೆ ನಡುಗಿ- ಚಳಿಯುರಿಯಲಿ ಗದಗುಟ್ಟುವಳು ; ಉಳಿದವರಿಗೆ ದೊಡ್ಡವಳ...

ಆಸೆಯು ಮುಂದೆ ನಿರಾಸೆಯು ಹಿಂದೆ| ಆಮಿಷದಿಂದೆ ಬೇಸರ ಮುಂದೆ| ತಿಳಿದೂ ಅದರ ಹಿಂದೆ ಹೋದರೆ ನಾವೂ ಕುರಿ ಮಂದೆ|| ಬೆಳಕ ಜೊತೆಯಲಿ ನೆರಳಿರುವಂತೆ ದೀಪದ ಕೆಳಗಡೆ ಕತ್ತಲಿರುವಂತೆ ಆಸೆಯು ತುಂಬಾ ಚಿಕ್ಕದಿರಬೇಕು| ನಾಳೆಯ ಕಾಣಲಷ್ಟೇ ಆಸೆಯು ಬೇಕು ದುರಾಸೆಯ ...

ನಟ್ಟನಡು ರಾತ್ರಿಯಲಿ ಹುತ್ತಗಟ್ಟಿತು ಕತ್ತಲು ತುಟ್ಟತುದಿ ಕೋವಿಯಲಿ ಹೆಡೆಯ ಎತ್ತಿತು ಸುತ್ತಲು ಬುಸ್ಸೆನ್ನುವ ಭಾವದಲ್ಲಿ ಸತ್ತ ಸಂಬಂಧಗಳು ವಿಷನಾಗರ ನಾಲಗೆಯಲ್ಲಿ ನಕ್ಷತ್ರಗಳ ನುಂಗಿದವು ಗೋರಿಯೊಳಗೆ ತಂಗಿದವು ಆಕಾಶದ ಹಣೆಯಲ್ಲಿ ಕುಂಕುಮದ ಚಂದಿರನ ಒ...

ಇಟಾಲಿಯನ್ ನಾಟಕಕಾರನೂ ಕಾದಂಬರಿಕಾರನೂ ಆದ Luigi Pirandello ೧೮೬೭ರಲ್ಲಿ ಸಿಸಿಲಿಯದ Agrigento ನಲ್ಲಿ ಜನಿಸಿದ. ವಿದ್ಯಾಭ್ಯಾಸವನ್ನು ರೋಮನಲ್ಲಿ ಮುಗಿಸಿBonn ಯುನಿವರ್ಸಿಟಿಯಿಂದ ಡಾಕ್ಟರೇಟ ಪಡೆದು ಇಟಾಲಿಯನ್ ಉಪನ್ಯಾಸಕನಾಗಿ ನೇಮಕವಾಗಿದ್ದ. ಆತ...

ಮಗು : ಚಾಳೀಸು ಧರಿಸಿ ಕೈಯಲಿ ಕೋಲನ್ನು ಹಿಡಿದಿಹ ಯೋಗಿ ಯಾರಮ್ಮ? ತಾಯಿ : ಅವರು ನಮ್ಮಯ ಗಾಂಧಿ ತಾತ ನಮ್ಮ ದೇಶದ ಪಿತಾಮಹ ಮಗು : ಗಾಂಧಿ ಟೋಪಿ ಖಾದಿ ಜುಬ್ಬ ವಾಜ್‌ಕೋಟಿನಲಿ ಇದೆ ಗುಲಾಬಿ? ತಾಯಿ : ಅಯ್ಯೋ ಮರಿ ನಿನಗೆ ಗೊತ್ತಿಲ್ವೆ? ಚಾಚಾ ನೆಹರು ಪ್...

ಪ್ರಕೃತಿಯಲಿ ಸೌಂದರ್ಯ ಕಾಣದೆಯೆ ಕುರುಡಾಗಿ ವಿಕೃತಿಯನೆ ನೋಡಿದೆನು ಅದು ಸತ್ಯವೆಂದು ಸುಕೃತಿಗಳನೊಪ್ಪದೆಯೆ ಎನ್ನದೇ ಸರಿಯೆಂದು ಆಕೃತಿಯ ದುಷ್ಕೃತಿಗೆ ಬಲಿಗೊಟ್ಟೆನಯ್ಯ. ನಾನು ದೊಡ್ಡವನೆಂದು ಹೆಮ್ಮೆಯಲಿ ಮೆರೆಯುತ್ತ ಮಾನಾಪಮಾನಮಂ ಲೆಕ್ಕಿಸದೆ ನಡೆದು ...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...