ಲೋಕದ ಮನೆ

ಲೋಕದ ಮನೆ ಇದು ಕರ್‍ಮ ಭೂಮಿ
ಕರ್‍ಮಕ್ಕೆ ಮೂಲಾಧಾರ ಮನವು ಹೌದು
ಮನಸ್ಸನ್ನು ಬಿಡದಂತೆ ನಿಗ್ರಹಿಸು ಜೋಕೆ
ಮನವು ಹೇಳಿದಂತೆ ನಿ ಓಡಲೇಕೆ!

ಕಷ್ಟವೊ ಸುಖವೊ ಸಾಂತ್ವನದಿ ಸ್ವೀಕರಿಸು
ಕಷ್ಟಗಳ ನಡುವೆಯೂ ಶಿವನ ಅನುಭವಿಸು
ಈ ಬಾಳೇ ನಿನಗೊಂದು ಪರೀಕ್ಷಾ ಕೇಂದ್ರ
ಉತ್ತೀರ್‍ಣನಾದರಾಯ್ತು ನೀ ನಾಗುವೆ ಇಂದ್ರ

ಪ್ರತಿಯೊಂದು ಮಾಡುವಾಗ ಯೋಚನೆ ಇರಲಿ
ಆ ದೇವರನ್ನು ಕಾಣುವ ಯೋಜನೆ ಇರಲಿ
ನಿನ್ನವರೆಲ್ಲ ನಿನ್ನ ದೇಹಕ್ಕೆ ಸಂಬಂಧವಿರಲಿ
ನಿನ್ನಾತ್ಮ ಮಾತ್ರ ಭಗವನಗೆ ಅರ್‍ಪಿಸಿರಲಿ

ಧ್ಯಾನ ಮಾಡು ನಿತ್ಯ ಶಿವನ ಪರಾಕಾಷ್ಠೆಯಲಿ
ನಿನ್ನ ಪ್ರ್‍ಆರ್‍ಥನೆಯಲ್ಲಿ ಸರ್‍ವರ ಕಲ್ಯಾಣವಿರಲಿ
ಮನದಲಿ ನೂರೆಂಟು ಚಿಂತೆಗಳು ಬೇಡ
ಆ ಕೆಟ್ಟ ವಿಕಾರಗಳಿಗೆ ಅವಕಾಶಬೇಡ

ನಡೆ ನುಡಿಯು ನಿನ್ನದು ಶುದ್ಧವಿರಲಿ
ನಿರ್‍ಭಾವ ನಿರಹಂಕಾರ ನಿನ್ನದಾಗಿರಲಿ
ಲಭಿಸುವವು ಆಗ ಶಾಂತಿ ಆನಂದ
ಮಾಣಿಕ್ಯ ವಿಠಲನೇ ಭಗವದಾನಂದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೧೩
Next post ಎದ್ದೇಳಿ ಎದ್ದೇಳಿ ಸೋದರರೇ

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…