“ಮತ್ತವನ ಬೆರಳುಗಳ ಸ್ಪರ್ಶಸುಖ ಸಿಗದೆನಗೆ ” ಎಂದು ಕೂದಲ ಕಿತ್ತುಕೊಳುತ ಕುಂಚ ಮಿಲಮಿಲನೆ ಹೊರಳಾಡಿ ಮೌನದೊಳೆ ಮರುಗುತಿದೆ ಸಂಕಟವು ಮೀರುತಿರಲಳಲಿನಂಚ! “ಅರ್ಥಕೇ ನಿಲಿಸೆನ್ನನಗಲಿದನು ಚಿರಕಾಲ ನಡುನೀರಿನೊಳೆ ಕೈಯ್ಯಬಿಟ್ಟನೆಂ”ದು ಎನಗಕಾಲದ ಮರಣವೇತಕೆನ್ನುತ ವಿಧಿಯ ದೂರುತಿದೆ ಅರೆಮುಗಿದ ಚಿತ್ರವೊಂದು! ***...

ಮುಳ್ಳುಗಳ ಮಧ್ಯದಲ್ಲಿಯೇ ಗುಲಾಬಿ ಹುಟ್ಟುತ್ತದೆ ನಿಜ. ಪ್ರೀತಿ ಹೂ ಅರಳುವ ಕ್ರಿಯೆ ನಿರಂತರ ನಡೆಯುತ್ತಲೇ ಇರುತ್ತದೆ ನೋಡು. ಅಮವಾಸ್ಯೆ ಕತ್ತಲಲ್ಲಿ ಏಕಾಕಿ ಕಾಡಿನಲ್ಲಿ ಪಯಣಿಸುತ್ತೇನೆ ನಿಜ, ರಾತ್ರಿ ಕಳೆದುಹೋದ ಸೂರ್ಯ ಮತ್ತೇ ಹುಟ್ಟುತ್ತಲೇ ಇರುತ್ತ...

ಸಾಲು ಮೆಟ್ಟಲುಗಳನೇರಲು ಹೊರಟರೆ ಸಾಲಭಂಜಿಕೆಗಳು ತಡೆದಾವೆ ಸಾಲಭಂಜಿಕೆಗಳು ತಡೆದಾವೆ ನಮ್ಮ ವಿಗಡವಿಕ್ರಮರಾಯನ ಕೇಳ್ಯಾವೆ ಒಂದೊಂದು ಸಾಲಿಗೆ ಒಂದೊಂದು ಪ್ರಶ್ನೆ ಇಪ್ಪತ್ತು ಬೊಂಬೆಗಳು ಕೇಳಿದರೆ ಒಂದೊಂದು ಬೊಂಬೆಗು ಒಂದೊಂದು ಉತ್ತರ ಜಾಣ ವಿಕ್ರಮರಾಯ ಹ...

ಗಂಡು ಮಕ್ಕಳ ವ್ಯಾಮೋಹ ಅತೀತವಾಗುತ್ತಿದೆ. ಗಂಡೆಂದರೆ ವಂಶವನ್ನು ಬೆಳೆಸುತ್ತಾನೆ. ಸಂಸಾರವನ್ನು ಸಾಕಿ ಸಲಹುತ್ತಾನೆ ಎಂಬಿತ್ಯಾದಿ ಕಾರಣಗಳನ್ನಿಡಲಾಗುತ್ತದೆ. ಹೆಣ್ಣಾದರೆ ಮದುವೆ, ಮುಂಜಿ, ವಡವೆ ವಸ್ತ್ರ, ವರದಕ್ಷಿಣೆ, ಕೊಡಬೇಕಾಗುತ್ತದೆ. ಅದಕ್ಕಾಗಿ ...

ಮೊನ್ನಿಽನ ಬರದಾಗ ಕುಸುಬಿಽಯ ಮಾರಿದರಲ್ಲ| ಕೋಲು ಕೋಲೆಣ್ಣ ಕೋಲ ||೧|| ಅಣ್ಣಾಗಾದರು ಮಕ್ಕಳಿಲ್ಲ ತಮ್ಮಽಗಾದರೂ ಮಕ್ಕಳಽವ| ಕೋ ||೨|| * * * ಏ ಅಣ್ಣಾ ಏ ಅಣ್ಣಾ ಸೊಲಗಿ ಜ್ವಾಳಾ ಕಡಾ ಕೊಡು| ಕೋ ||೩|| ಸೊಲ್ಲಿಗಿ ಜ್ವಾಳಾ ಕಡನೆ ಕೊಟ್ಟಽರ ನಟ್ಟ ಕಡಿಯ...

ನನಗೂ ಆಸೆ ಕವಿತೆ ಬರೆಯಲು ಭಾರತಾಂಬೆಯ ಮೇಲೆ ಸತ್ಯವ ಮುಚ್ಚಿ ಸುಳ್ಳು ಹೇಳುವುದು ಥರವೆ? ಗೆಳತಿ ಹೇಳೆ ಭಾರತಾಂಬೆಯ ಒಬ್ಬ ಮಗ ಇರುವನು ಊರ ಒಳಗೆ ಇವನಿಗೆ ಸಹಜ ಭಾರತ ಮಹಾನ್ ನಾನು ಯಾರ ಧ್ವನಿಗೆ? ಮೈಲಿಗೆ ತೊಳೆದ ಗಂಗೆ ತುಂಗೆ ಕಾವೇರಿಗೆ ಒಂದೆ ನಮನ ಮನ...

ಗುಂಡಗುರುಳಿ ದುಂಡಾಗಿ ಹೊಗೆ ಬೆಂಕಿ ಒಳಗೇ ಅಮುಕಿ ಹಸಿರು ಚೆಲ್ಲುತ ನಿಂತ ತಾಯೇ ನಮ್ಮಮ್ಮ ಮಹತಾಯಿ ಭೂಮಿತಾಯೇ ಹಸಿರಿನ ಪಸೆ ಎಷ್ಟು ಹೊತ್ತೇ ನಿನಗೆ? ಬೆಂಕಿಯುಗುಳಿ ಒಳಗಿನ ಕಿಚ್ಚ ಹೊರ ಚೆಲ್ಲಿ ಕಾರಿಕೊಳ್ಳುವ ಬಾಯೇ ನಿನ್ನ ಒಣಗಿದ ಮೈಯ ಮಡಿಕೆ ಮಡಕೆಯ ...

ಅವನು ಯಾವಾಗಲೂ ಇಸ್ಕೊಂಡಿದ್ದಕ್ಕಿಂತ ಎರಡು ಪಟ್ಟು ವಾಪಸ್ಸು ಮಾಡುತ್ತಾನೆ ಮೂಗಿನ ಮೇಲೆ ಬೇರಳೇಕೆ? ನಾನು ಹೇಳ್ತಿರೋದು ಬೈಗುಳ ವಿಷಯ! *****...

ಉಗ್ರಪ್ಪನ ಸಸ್ಪೆನ್ಷನ್ ಜನಾರ್ದನಪುರಕ್ಕೆ ಹಿಂದಿರುಗಿದಮೇಲೆ ರಂಗಣ್ಣ ಪೊಲೀಸ್ ಇನ್ಸ್ಪೆಕ್ಟರ ಮನೆಗೆ ಹೋಗಿ ಪಾಠಶಾಲೆಯಲ್ಲಿ ನಡೆದುದನ್ನೆಲ್ಲ ತಿಳಿಸಿದನು. ಆ ಉಗ್ರಪ್ಪನ ವಿಚಾರದಲ್ಲಿ ಸಸ್ಪೆಂಡ್ ಮಾಡುವ ತೀವ್ರವಾದ ಕಾರ್ಯಕ್ರಮವನ್ನು ತೆಗೆದುಕೊಳ್ಳಬೇಕ...

ಎನ್ನ ದೇಹವೇ ಕನ್ನಡಾಲಯ ಕನ್ನಡ ಕನ್ನಡವೆನ್ನಲೇತಕೆ ಭಯ ಕನ್ನಡಕೆ ನಮೋ ನಮೋ ಎನ್ನುವೆ ಎನ್ನ ಮಂತ್ರವೊಂದೇ ಅದುವೇ ಕನ್ನಡ ಬಾಡದ ಹೂವಿನ ಮಾಲೆ ಈ ಕನ್ನಡ ನಂಬಿದರೆ ಕೈಬಿಡದೆಂದಿಗೂ ಈ ಕನ್ನಡ ಪ್ರೀತಿಯ ಕನ್ನಡವೇ ಎನ್ನುಸಿರು ತಾಯ್ತುಡಿಯಿಲ್ಲದೆನಗೆ ಬದುಕಿ...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...