ಶಬ್ದ ಸಾಗರವುಕ್ಕಿಬರುತಲಿದೆ, ಓ, ತಮ್ಮ, ನಿನ್ನತುಲ ಕೀರ್ತಿಯನು ವರ್ಣಿಸಲು ಮುನ್ನುಗ್ಗಿ! ಮುನ್ನಗೈದಾ ಸುಕೃತಕಿಂದು ಫಲ ದೊರಕಿದುದು ಕನ್ನಡದ ನಾಡಗುಡಿ ತಲೆಯೆತ್ತಿ ಮೆರೆವಂತೆ ಚೆನ್ನ, ನಿನ್ನಾತಪದ ಸಿದ್ಧಿ ಸಾಧಿಸುವಂತೆ ವರ್ಣನಾತೀತ ಯಶ ಪಾದ ರೇಣುವಿನಂತೆ ಪೂರ್ಣ ಪಾವನ ಪ್ರೇಮದಾವರಣವನು ಹೊತ್ತು ಪುಣ್ಯ ಪುರುಷನ ...

ದಕ್ಕನ್ ದೇಶಪರ ಬಾದಶಾ ರತನರಾಜ ದೌಲತಕಿ ಇಬಾದತ್ ದೇಖೈ ಚಲೋ  ಕರ್ಬಲಮೆ ಕಠಿಣ || ಪ || ಶಮರೆ ಲಯೀನ ಅಜಾಬ ಸುಮ್ ಅಮರ್ ಖುದಾಕಾ ಹುವಾ ಉಸೀಪರ್ ಕಮರಕೀಂಚೆ ತಲವಾರ ವಾರ || ೧ || ಶಿಶುನಾಳಶಾಹಿರ ಪರ ನೂರ ಓ ಅಸಲ ಖೋಲ ಖುರಾನ ದೇಖಲೇ ಚಕಮಕನಕವೋ ಚಾರ ಪಾಂ...

ಮನೆ ಮುಂದೆ ಸಾರಣೆ ಮಾಡಿಲ್ಲ ಚೆಂದವಾಗಿ ರಂಗೋಲಿ ಬಿಡಿಸಿಲ್ಲ. ನಲ್ಲಿ ನೀರು ಹಿಡಿಯಲೂ ಬಂದಿಲ್ಲ ಹೊತ್ತು ಮೀರುತ್ತಿದ್ದರೂ ಕಾಣುತ್ತಿಲ್ಲ! ಅವನು ಸಾಕಿದ ನಾಯಿ ಮಾತ್ರ ಕುಂಯ್‌ಗುಟ್ಟುತ್ತಾ ಮನೆ ಒಳಗೂ ಹೊರಗೂ ಅಡ್ಡಾಡುತ್ತಿತ್ತು. ಚೆಂಬಸಪ್ಪ ಹಂಗೆಲ್ಲಾ...

ಐನಿಂಬು ಕರಸನಪ್ಸ ಹಮಾರೇಕೋ ಗಿರಾಯಾ ಅಂಬೇ ಶರಾಬ ಇಷ್ಕೆ ಪಿಯಾಲೌಮೆ ಭರಾಯಾ || ಪ || ದಿನ್‌ರಾತ ಕಲಿ ಮೈಸುಹೆ ಮನ್‍ಬಾತ  ಕರಾಯಾ ಸುನ್ ಹಾತಲೇ ಮುರಶಶ್ಶಿ ಮೊಹಮದಕೋ  ಸರಾಯಾ || ೧ || ದಿಲ್‌ಗುಲ್ ಲ೯ ಧರಿಯಾ ಬಾಗಮೆ ರುಹಜಾತ  ಚರಾಯಾ ಚಲ್‌ದೇಖಜಾ ಶಿಶು...

ಮುಳುಗುತಿಹ ನೇಸರನು ಮುದಿಸಿಂಹನಂತಾಗಿ ಪಶ್ಚಿಮಾದ್ರಿಯ ಗವಿಯ ಸೇರುತಿಹನು; ತನ್ನ ಸರ್ವಾಧಿಕಾರತ್ವ ಕೊನೆಗೊಳ್ಳುತಿರೆ ಲೋಗರೆಡೆ ಕೆಕ್ಕರಿಸಿ ನೋಡುತಿಹನು. ಸಂಜೆ ಕಕ್ಕರಮಬ್ಬು ಗಗನ ಸಿಂಹಾಸನದಿ ಕಪ್ಪು ಬಾವುಟವೆತ್ತಿ ತೋರಿಸಿಹುದು; ಪಕ್ಷಿಸಂಕುಲ ಕೆಲೆದ...

ಗುರು ಬ್ರಹ್ಮ – ಗುರು ವಿಷ್ಣು ಗುರು ಸಕಲ ಚರ್‍ಯ ಜೀವಿಗಳ ಸನ್ಮಾರ್ಗ – ಸುವಿಚಾರಗಲ ತ್ಯಾಗಮಯ – ಸಾಕಾರಮೂರ್ತಿ ಬದುಕಲಿ – ಬೇಯುತಲಿ… ಭವಕ್ಕೆಲ್ಲಾ – ಭಾವಜೀವಿಯಾಗಿ ಎಳೆ ಜೀವ ಸಮೂಹಕ್ಕೆಲ್ಲಾ ಸುಮವಾಗಿಸಿ...

ಸ್ವಾಮಿ ನಿಮ್ಮ ನಾಮ ಓಂ ಯಾ ಇಮಾಮ ಶಾ ಹುಸೇನ || ಪ || ಕಾಮಿತಫಲ ಕರ್ಬಲ ನೆಲ ತಾಮಸಕುಲ ಆ ಮಹಾಬಲ ಭೂಮಿಪ ಬರೆದು ಧಾಮಲಛಲ ಕೋಮಲ ಛಲ || ಅ. ಪ. || ಧರಿಗೆ ಅವರ ಮದೀನ ಶಹರ ಇರುವರಲ್ಲೆ ಚರಿಯರ ಮರೆಯುವದು ಸಿರಿ ಹಜರತ್ ದೊರಿ ಗರ್ಭದಮರಿ ಪ್ರಭು ಅವತಾರ ಪ...

ಜೀವನದ ಗತದಲ್ಲೇ ಹೂತು ಹೋಗಿ ಗತಕ್ಕೆ ಮಾತ್ರ ಸೀಮಿತವಾದ ಹಲವಾರು ಸಂಬಂಧಗಳು ನೆನಪಿನ ಮೂಲಕ ಪ್ರಾಮುಖ್ಯ ಪಡೆದುಕೊಂಡು ಪ್ರಾಧಾನ್ಯ ಸ್ಥಾಪಿಸಿಕೊಳ್ಳುವ ಸಂದರ್ಭಗಳು ಅನೇಕ. ಅವುಗಳು ಪ್ರಸಕ್ತಕ್ಕೆ ಜೀವವಿಲ್ಲದ ಎಲುಬುಗೂಡಿನಂತೆ. ಶ್ರಾದ್ಧದಂತೆ, ಅಷ್ಟೆ....

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...