ಅಂಬಾರ್ದಲಾವಿಗೆ ಶಾಂಭವಿ ||ಪ||
ಶುಂಭ-ನಿಶುಂಭರ ಸಂಹಾರ ಮಾಡಿದ
ತುಂಬಿದ ಶಾರ ಮದೀನದೊಳಗ ||ಅ.ಪ.||
ಕಾತೂನ ರೂಢಿಯೊಳು ಬೆಳೆದಳು
ಪ್ರೀತಿಲಿಂದ ಭೂತಲಕೆ ಇಳಿದು
ಜಗನ್ಮಾತೆ ಮೋರುಮ ಹಬ್ಬದೊಳಗೆ ||೧||
ಆಸುರಾಧಿಪತಿಗಳ ಕೊಂದಳೋ
ದಸರೆ ಐಸುರದಿ ಹೆಸರು ಪಡೆದು ಬಹು
ಕುಶಲದಿ ಭೂವಲಯದೊಳಗೆ ಮೆರೆದು ||೨||
ಧಾಮಶಪುರದ ಯಜೀದರ
ಕ್ರಮದಿ ಕಡಿದು ಕಾಲೊಳಗೆ ತುಳಿದು ಆ
ಹಿಮಾಚಲ ಪರ್ವತ ಸೇರಿಕೊಂಡು ||೩||
ಆಕಾರ ಬೆಳಸಿ ಆನಂದದಿ
ಸಾಕಾಗದೆ ಶಿಶುನಾಳಧೀಶನೊಳು
ಬೇಕೆಂದನುತಲಿ ಲೋಕಮಾತೆ ||೪||
*****
Latest posts by ಶಿಶುನಾಳ ಶರೀಫ್ (see all)
- ಆಶಮಾಡಿ ಪಾಶಕ ಬಿದ್ದಿತೋ ಚಿಗರಿ - April 22, 2013
- ನವಾಬಿ ಮಲ್ಲಿಗಿ ಹೂವಿನ ಗಜರಾ - April 17, 2013
- ಭೂಪಾರದೊಳಗೆ ಮದೀನಶಹರದೊಳು - April 15, 2013