“ಮತ್ತವನ ಬೆರಳುಗಳ ಸ್ಪರ್ಶಸುಖ ಸಿಗದೆನಗೆ ”
ಎಂದು ಕೂದಲ ಕಿತ್ತುಕೊಳುತ ಕುಂಚ
ಮಿಲಮಿಲನೆ ಹೊರಳಾಡಿ ಮೌನದೊಳೆ ಮರುಗುತಿದೆ
ಸಂಕಟವು ಮೀರುತಿರಲಳಲಿನಂಚ!
“ಅರ್ಥಕೇ ನಿಲಿಸೆನ್ನನಗಲಿದನು ಚಿರಕಾಲ
ನಡುನೀರಿನೊಳೆ ಕೈಯ್ಯಬಿಟ್ಟನೆಂ”ದು
ಎನಗಕಾಲದ ಮರಣವೇತಕೆನ್ನುತ ವಿಧಿಯ
ದೂರುತಿದೆ ಅರೆಮುಗಿದ ಚಿತ್ರವೊಂದು!
*****

















