Home / Biligiri

Browsing Tag: Biligiri

೧ ದೂರವಾಯಿತು ಇಲ್ಲವಾಯಿತು ಇನ್ನೆನಗೆ ಭದ್ರಾವತಿ ‘ರಸದ ಮಡುವನು ತೊರೆದು ಬಂದೆನೆ’ ಎಂದು ತುಡಿವುದು ಮನ್ಮತಿ ಎಂದಿಗೋ ಇನ್ನಂಥ ತಾಣವ ನಾನು ಕಾಂಬುದು ಕಣ್ಣೊಳು? ತೊಳಲುವುದು ಮನ ಮಿಲಮಿಲನೆ ಹುಳು ಹೊರಳುವೊಲು ಹಿಡಿನುಣ್ಣೊಳು! ದೂರವಾದು...

೧ ಅಂದು ಮಾರುವ ಕಟ್ಟೆಯೊಳು ನಾನು ಗೊತ್ತುಗುರಿ- ಯಿಲ್ಲದೊಲು ತಿರುಗುತಿರೆ, ಕಂಡೆನಲ ನಾನೊಬ್ಬ ಮನುಜ ಮಾರುತಲಿಹುದ ರಾಸಿ ಒಣಕಲು ಕಬ್ಬ! ಗಾಣದೊಳು ಹಿಂಡಿದರು ಕಾಲೊಳೊತ್ತಿದರು ಕರಿ ರಸದ ಸುಳಿವಿಲ್ಲದಿಹ ಕಬ್ಬಿನಂದದ ಬೊಂಬು! ಭದ್ರಾವತಿಯಲಿರುವ ಆಲೆಮನೆ...

೧ ಹಾ! ಇನ್ನು ದೂರಮಾದೆಯ ನನಗೆ ಸಂತತಂ ಕಾಳಧೂಮವನುಗುಳ್ವ ಎಲೆಲೇ ಗಗನಚುಂಬಿ!* ಭೋರೆನುತ್ತಲಿ ವರುಣ ವೇಗದಿಂ ಜಲದಂಬಿ- ನಾ ವೃಷ್ಟಿಯಿಂ ಕಾಡಿದರು ತಾ ನಿರಂತರಂ; ಭೂವಳಯದಲ್ಲೆಲ್ಲಿರ್ದೊಡಂ ನಾಂ ಕಣಮೊಂದು ನೀರನೂ ಬಿಡದೆ ಹೀರುವೆನೆಂಬ ಪೂಣಾಂತು ಜಗವ ಸುಡ...

ಹಗಲು ನಂದಿತು, ಇರುಳು ಬಂದಿತು ನಿಶೆಯು ಹಬ್ಬಿತು ಸುತ್ತಲು ಬೆಳಕು ಮುಚ್ಚಿದ ತಾರೆಗಳ ಹೊರ- ಗೆಳೆದು ತೋರಿತು ಕತ್ತಲು! ಮರೆಯ ಕಳೆವುದು ಬೆಳಕು; ಮರೆಯೇ ಕತ್ತಲೆಂಬರಿದೇನಿದು! ಬೆಳಕು ಮುಚ್ಚಿದ ಬೆಳಕ ಬೆಳಗುತ ಕತ್ತಲೆಯೆ ಬೆಳಕಾದುದು! *****...

ಮೈ ಸೋತು ಬಳಲಿದೆ; ನಿಸರ್ಗಸಂಚಾರಿ ಮನ ಒಡಲಿಗಿಂತಲು ಜಡವು; ಹೆಪ್ಪುಗಟ್ಟಿದ ಕೊಳವು! ನಿದ್ದೆ ಎಚ್ಚರಗಳ ವಿಚಿತ್ರ ಮೇಳದ ಸೆಳವು! ಮುಚ್ಚುಗಂಗಳ ಬಿಚ್ಚಲೂ ಕಷ್ಟ; ಎದೆಯ ಬನ- ದೊಳದಾವುದೋ ಕಿಚ್ಚು- ಹೊಗೆ ಕಿಚ್ಚು! ಈ ದೇಹ ಬೆವರಿ ಗಾಳಿಯ ತೆಳುವು ಪೊರೆ ಚ...

ಕಣ್ಸೆಳೆವ ರೂಪು; ಕಿವಿ ಸೆಳೆವ ಸವಿಗೊರಲ ದನಿ; ಲಯವೆ ಅಡಿಯಿಡುವವೊಲು ಎಳನವಿಲ ಬಳುಕು ನಡೆ; ಅದರೊಡನೆ ಅತ್ತಿತ್ತ ಒಲೆಯುತಿಹೆ ಉದ್ದ ಜಡೆ; ಹಣೆ, ಹುಬ್ಬು, ಕಣ್ಣು, ಗಲ್ಲ, ಕೆನ್ನೆ-ಬರಿ ಚೆಲುವ ಬನಿ! ಚೀಪಿ, ಚುಂಬಿಸಿ, ಕಚ್ಚಿ ಚಪ್ಪರಿಸುತೆಡೆಗೊಡದೆ ಹ...

ಉರಿಯುತಿದೆ ಒಲೆಯೊಂದು. ಕೊರಡೊಂದು ಬೀಳುತಿದೆ. ಒಂದೆ ಚಣ ಅದರ ಧೃತಿ! ಕಣ್ಣ ಕತ್ತಲಿಪ ಹೊಗೆ! ಹೊಗೆ-ಬೆಂಕಿ; ಬೆಂಕಿ; ಕೊನೆ ದ್ರವಿಸುತಿದೆ ನೊರೆಯು ಮಿಗೆ; ಮೈ ಕೆಂಡ-ಗಾಯಗಳ ತವರಾಯ್ತು; ಕಾಣುತಿದೆ ಬೂದಿ ಬಿಳಿತೊನ್ನಿನೊಲು; ಉಫ್ಫೆನ್ನು ಬರಿ ಧೂಳು! ಮ...

ನೆನಪುಗಳೇ ಬಾರದಿರಿ! ಬಾರದಿರಿ! ಸೊಂಡಿಲಾಡಿಸುತ್ತ ಬಂದು ಮೊದಲೆ ಕದಡಿಹೋದ ಕೊಳವ ಮತ್ತೆ ಮತ್ತೆ ಕದಡುತ, ಎರಡೆ ದಿನಕೆ ತಾನೆ ಬಾಡಿ- ಹೋಗಲಿರುವ ಒಂದೊ ಎರಡೊ ಹೂವುಗಳನು ಕಿತ್ತು ಬಿಸುಟು ಘೀಳಿಡುವ ಆನೆಯಂತೆ ಬಾರದಿರಿ! ಬಾರದಿರಿ! ಮನದ ಕೊಳವು ತನಗೆ ತಾ...

ಹೇಳಲಾಗದಾವುದೋ ಒಂದು ನೋವದೊಂದೆ ಸಮನೆ ಎದೆಯ ಕೊರೆವುದು. ಹಣೆಯೊಳಿಲ್ಲವಯ್ಯ ಸುಕ್ಕು; ಹುಬ್ಬೊಳಿಲ್ಲ ಗಂಟು, ಸಿಕ್ಕು; ಇದ್ದ ಕಡೆಯೆ ಇಹುದು ಕಣ್ಣು!- ಎಲುಬುಗುಳಿಯ ಆಳಕೆ ಇಳಿದೆ ಇಲ್ಲ- ಕೆನ್ನೆಯಲ್ಲಿ ಗುಳಿಗಳಿಲ್ಲ! ತುಟಿಗು ನಗೆಗು ದ್ವೇಷವಿಲ್ಲ! ಬಿ...

೧ ನೋಡಬೇಡ ನೋಡಬೇಡ ನೋಡಬೇಡವೇ ಇಂತು ನನ್ನನು! ತೋಡಬೇಡ ತೋಡಬೇಡ ತೋಡಬೇಡವೇ, ಕಣ್ಣಿನಲ್ಲೆ, ತೋಡಬೇಡ ನನ್ನ ಎದೆಯನು! ಸಾವಿರಾರು ಅರ್ಥಗಳನು ಕಟ್ಟಿ ನಿನ್ನ ನೋಟಕಾನು ಮಿಲ ಮಿಲ ಮಿಲ ನರಳುವಂತೆ ಆಡಬೇಡವೇ ಆಡಬೇಡ ಆಡಬೇಡ ಆಡಬೇಡವೇ ಕಣ್ಣಿನಲ್ಲೆ, ಆಡಬೇಡ ನ...

ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್‌ಸ್ಪ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...