ಒಂದಾನೊಂದು ಊರಿನಲ್ಲಿ ಒಬ್ಬ ಕುಂಬಾರನಿದ್ದನು. ಅವನ ಹೆಸರು ಯುಧಿಷ್ಠಿರ. ಅವನು ಒಂದಾನೊಂದು ದಿನ ಬಹು ವೇಗವಾಗಿ ಓಡಿಬರುತ್ತಾ ಒಡೆದ ಮಡಕೆಯ ತುಂಡಿನ ಮೇಲೆ ಬಿದ್ದು ತಲೆಯನ್ನು ಒಡೆದುಕೊಂಡನು. ಮೈಯೆಲ್ಲಾ ರಕ್ತವಾಗಿ ಹೇಗೆ ಹೇಗೋ ಮನೆಗೆ ಬಂದು ಸೇರಿದನು. ಗಾಯಕ್ಕೆ ಎನೋ ಅಪಥ್ಯವಾಗಿ, ಅದು ಕೀವು ಕಟ್ಟಿಕೊಂಡು ವಾಸಿಯ...

ತುಂಬಿ ಬಂದ ಕಡಲಿನಲಿ ಅಲೆ ಇಡುವ ಮುತ್ತಿನಲಿ ಏಕೆ ಕಾಡುವೆ ನಿನಗೆ ಕರುಣೆ ಬೇಡವೆ? ಹುಣ್ಣಿಮೆಯ ರಾತ್ರಿಯಲಿ ಬೆಳದಿಂಗಳ ಮಳೆಯಲಿ ತೋಯಿಸಬೇಡ ನನ್ನ ನೋಯಿಸಬೇಡ ತಾರೆಯ ಕಣ್ ಹೊಡೆತದಲಿ ರಭಸದ ಎದೆ ಬಡಿತದಲಿ ಸಿಲುಕಿಸಬೇಡ ನನ್ನ ಕೈ ಬಿಡಬೇಡ ಮುಸ್ಸಂಜೆಯ ಕೆ...

ತಾಯಿಯಂತೆ ಭರಿಸುವೆ ನಾ ಈ ಇವರುಗಳ ನನ್ನನ್ನು ಹಂಚಿಕೊಂಡವರ ದೇಶದ ನೆಲವ ಇಂಚಿಂಚು ತಿಂದವರ ನನ್ನ ಮನಸ್ಸೆಂಬ ಸರೋವರದಲೀಸಾಡ ಬಂದವರ, ನನ್ನ ಒಂದೊಂದು ಮೂಲೆಯನೂ ತಮ್ಮದೆಂದು ಕೊಂಡವರ ಗಲ್ಲಿಯ ಗುರುವೊಬ್ಬ ಜಗದ್ಗುರುವಾದಂತೆ ನನ್ನ ಸಹಿಷ್ಣುತೆಯ ಅನಿವಾರ್...

‘ಅಪ್ಪಾ, ನಾನು ಹೋಗತಾ ಇದೇನೆ. ಹೇಳಿ ಹೋಗೋಣ ಅಂತ ಬಂದೆ.’ ‘ಎಲ್ಲಿಗೆ ಹೋಗತಾ ಇದೀಯ?’ ‘ಉತ್ತರ ದೇಶಕ್ಕೆ.’ ‘ಅಲ್ಲಿಗೆ ಯಾಕೆ? ಇಲ್ಲಿ ನಿನಗೆ ಬದುಕಿಲ್ಲವಾ? ಹಂದಿ ಮಾರಾಟ ಮಾಡತಾ ಇದೀಯಲ್ತಾ.’ ‘ಮಾಡತಾ ಇದ್ದೆ, ಈಗಿಲ್ಲ. ಏನೂ ಗಿಟ್ಟಿಲ್ಲ. ಹೋದವಾರ ಮನ...

ಮಳೆ ಬಿಡುವು ಕೊಟ್ಟಿದೆ ಬಿಸಿಲು ಬಿದ್ದಿದೆ ನೆಲ ಆರಿದೆ ಹಿರಿ ಹಿರಿ ಹಿಗ್ಗಿ ಓಡಿದರು ಬಯಲಿಗೆ ಕುಣಿ ಕುಣಿದು ಕುಪ್ಪಳಿಸಿದರು ಜತೆ ಜತೆಗೆ ಮೋಡದ ತೆರೆ ಸರಿಯಿತು ಗಾಳಿಗೆ ಕಂಡಿತು ಬಣ್ಣ ಬಣ್ಣದ ಮಳೆಬಿಲ್ಲು ಏಳು ವರ್ಣಗಳ ಕಸೂತಿ ಬಾಗಿದ ಬಿಂಕದ ನೋಟ ಬಲ...

`ಹುಚ್ಚು ಮನದ ಹತ್ತು ಮುಖ’ಗಳ ದರುಶನ ಪಡೆದು ‘ಚಿಗುರಿದ ಕನಸು’ಗಳ ಜತೆಗೆ ‘ಮೂಕಜ್ಜಿಯ ಕನಸು’ಗಳ ಕಂಡು ‘ಸರಸಮ್ಮನ ಸಮಾಧಿ’ ಕಟ್ಟಿ ‘ಭೂತ’, ‘ದೇವದೂತ’ರುಗಳೊಡನೆ ಓಡಾಡಿ...

ನಿಷ್ಕರುಣಿ ನೀ ಮಾಡಿದನ್ಯಾಯ ಏನನ್ನೂ ವಿವರಿಸಲು ಕೇಳದಿರು, ಕಣ್ಣಿಂದ ಇರಿಯದಿರು; ಬಳಸು ಕಟುಮಾತನ್ನು, ನೇರ ಶಕ್ತಿಗಳನ್ನು; ಬೇಡ ನಯವಂಚನೆ, ಮರೆಮಾಚಿ ಕೊಲ್ಲದಿರು, ಬೇರೆ ಕಡೆ ಕೊಟ್ಟೆ ಎದೆಯನ್ನು ಎಂದು ಮುಖಕ್ಕೇ ಬಾಯ್ಬಿಟ್ಟು ಹೇಳು. ಅದು ಬಿಟ್ಟು ನ...

ದ್ರೋಣಾಚಾರ್ಯರು ಕೌರವ ಪಾಂಡವರಿಗೆ ಬಿಲ್ಲಿನ ವಿದ್ಯೆಯನ್ನು ಕಲಿಸುತ್ತಿದ್ದರು. ಕರ್ಣನು ಬಂದು ತನಗೂ ಕಲಿಸಬೇಕೆಂದು ಕೇಳಿಕೊಂಡನು. ಅವರು “ನೀನು ಕ್ಷತ್ರಿಯನಲ್ಲ. ನಾನು ನಿನಗೆ ವಿದ್ಯೆಯನ್ನು ಹೇಳಿ ಕೊಡುವುದಿಲ್ಲ” ಎಂದರು. ಕರ್‍ಣನು &...

ಹೂವು ತೋರಣಗಳ ಛತ್ರಚಾಮರಗಳಿಂದಲಕೃತ ವೇದಿಕೆ ಕಣ್ಮನ ಸೆಳೆವ ರೆಶ್ಮೆ ಪಂಚೆಯುಡುಗೆ ತೊಡುಗೆ ವಜ್ರವೈಡೂರ್‍ಯಗಳ ಕಿರೀಟಧರಿಸಿದ ಶ್ರೀರಾಮಚಂದ್ರ ಸುಶೋಭಿತ ಚಂದ್ರವದನೆ ಸೀತೆಯ ಪಟ್ಟಾಭಿಷೇಕ ಮನಮೋಹಕ ಚಿತ್ತಾಕರ್‍ಷಕ ಕ್ಯಾಲಂಡರದೊಳಗಿನ ದೃಶ್ಯಕಾವ್ಯ. ದೇವದ...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...