ಕರ್‍ಣ

ದ್ರೋಣಾಚಾರ್ಯರು ಕೌರವ ಪಾಂಡವರಿಗೆ ಬಿಲ್ಲಿನ ವಿದ್ಯೆಯನ್ನು ಕಲಿಸುತ್ತಿದ್ದರು. ಕರ್ಣನು ಬಂದು ತನಗೂ ಕಲಿಸಬೇಕೆಂದು ಕೇಳಿಕೊಂಡನು. ಅವರು “ನೀನು ಕ್ಷತ್ರಿಯನಲ್ಲ. ನಾನು ನಿನಗೆ ವಿದ್ಯೆಯನ್ನು ಹೇಳಿ ಕೊಡುವುದಿಲ್ಲ” ಎಂದರು. ಕರ್‍ಣನು “ಬೇರೆ ಕಡೆಯಲ್ಲಿ ಕಲಿತು ಬರುವೆನು” ಎಂದು ಆಣೆಯಿಟ್ಟುಕೊಂಡನು.

ಆಗಿನ ಕಾಲದಲ್ಲಿ ಪರಶುರಾಮರನ್ನು ಬಿಟ್ಟರೆ, ದ್ರೋಣಾಚಾರ್ಯರನ್ನು ಮೀರಿಸಿದವರು ಯಾರೂ ಇರಲಿಲ್ಲ. ಅದರಿಂದ ಕರ್‍ಣನು ಅವರ ಬಳಿಗೇ ಹೋದನು. ಅವರು ಬ್ರಾಹ್ಮಣರಲ್ಲದವರಿಗೆ ವಿದ್ಯೆಯನ್ನು ಹೇಳುತ್ತಿರಲಿಲ್ಲ. ಕರ್ಣನು “ತಾನೂ ಬ್ರಾಹ್ಮಣನು” ಎಂದು ಸಟೆಯಾಡಿದನು. ಅವರು ಅದು ದಿಟಿನೆಂದು ನಂಬಿ ಅವನನ್ನು ಶಿಷ್ಯನನ್ನಾಗಿ ಸೇರಿಸಿಕೊಂಡರು.

ಆದರೆ ಈ ಕಪಟವು ಬಹಳ ಕಾಲದವರೆಗೆ ಹೊರಬೀಳಲಿಲ್ಲ. ಕರ್‍ಣನು ಬ್ರಾಹ್ಮಣನೆಂದೇ ಪರಶುರಾಮರು ವಿದ್ಯೆಯನ್ನೆಲ್ಲಾ ಹೇಳಿಕೊಟ್ಟರು. ಇನ್ನು ಕೆಲವು ದಿನವಾದರೆ ಎಲ್ಲವೂ ಮುಗಿದು ಕರ್‍ಣನು ಹಿಂತಿರುಗಬಹುದು. ಆಗ ಒಂದು ದಿನ ಅವನ ಗುಟ್ಟು ಹೊರಬಿತ್ತು. “ಕರ್‍ಣನು ಬ್ರಾಹ್ಮಣನಲ್ಲ” ಎಂಬುದು ಅವರಿಗೆ ತಿಳಿದುಹೋಯಿತು. ಸಟೆಯಾಡಿ ಮೋಸ ಮಾಡಿದನೆಂದು ಅವರಿಗೆ ಬಹಳ ಸಿಟ್ಟು ಬಂತು. “ಸುಳ್ಳು ಹೇಳಿ ಮೋಸದಿಂದ ಈ ವಿದ್ಯೆಯನ್ನು ಸಂಪಾದಿಸಿದೆ. ಇದು ನಿನಗೆ ಸಮಯದಲ್ಲಿ ಫಲಿಸದೆ ಹೋಗಲಿ” ಎಂದು ಹೇಳಿಬಿಟ್ಟರು.

ಅದರಂತೆಯೇ ಕರ್‍ಣನು ಯುದ್ಧಕ್ಕೆ ಹೋದಾಗಲೆಲ್ಲಾ ಅವನಿಗೆ ಬಾಣ ವಿದ್ಯೆಯು ಮರೆತು ಹೋಗುತ್ತಿತ್ತು. ಅದರಿಂದಲೇ ಅವನಿಗೆ ಸಾವೂ ಬಂದಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಯೋಡಾಟಾ ಬದಲಿಸಬೇಕಂತೆ
Next post ನಿಷ್ಕರುಣಿ ನೀ ಮಾಡಿದನ್ಯಾಯ ಏನನ್ನೂ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…