ಏಳಿರಿ ಏಳಿರಿ, ಬಲುಬೇಗ, ಬೆಳಗಾಯಿತು ಏಳಿರಿ ಬೇಗ | ಖೂಳರ ಭಾರವನಿಳಿವುದಕೆ ಮೇಳಾಗಿ ನಡೆಯಿರಿ ನೀವೀಗ| ಬಿಳಿಯರಮದವನು ತೆಗ್ಗಿಸುತೆ, ಗೆಳೆಯರರವರನು ಮಾಡುತ್ತೆ | ತಿಳಿಸುತೆ ನಮ್ಮಯ ಸಂಸ್ಕ್ರತಿಯ, ಗಳಪದೆ ಮುಂದಡಿಹಾಕುತ್ತೆ | ಬಳವನು ನೂರ್ಮಡಿ ಹೆಚ್ಚಿಸುತೆ ಖಳತನದಿಂದತಿ ದೂರಿರುತೆ | ಬಳರಹಿತರ ನೀವ್ಕಾಯುತ್ತೆ, ...

ನಡುಹಗಲಿನಲಿ ಗಮ್ಮನೆಣಿಕೆ ಇಣಕುವದೊಂದು, “ಇಂದು ಬಂದದ್ದು ಹೋದದ್ದು ಏನು?” ಬರಿಗೈಲಿ ಮೊಳಹಾಕಿ ಬಯಲ ಸುತ್ತಿದೆನಷ್ಟೆ! “ಹಾರುತ್ತ ಹೊರಟಿರುವೆನೆತ್ತ ನಾನು?” ನಿದ್ದೆಯಿಂದೆಚ್ಚತ್ತು, ನಡು ಇರುಳಿನಲ್ಲೆದ್ದು, ಬಿಡಿಸುತಿ...

ಒಬ್ಬ ನಿಷ್ಟಾವಂತ ಸಾಧಕ ಶಾಂತಿಯನ್ನು ಹುಡುಕಿಕೊಂಡು ಹೊರಟ. ಕಾಡುಮೇಡು, ಬೆಟ್ಟಗುಡ್ಡ ಸುತ್ತಿ ನದಿ ನಾವೆಯಲ್ಲಿ ತೇಲಿ ಕೊನೆಗೆ ಒಂದು ದಟ್ಟ ಅರಣ್ಯದ ಬೆಟ್ಟದಡಿಯ ಗುಹೆಯ ಬಳಿ ಬಂದು ನಿಂತ. ಬಹಳ ಶ್ರಮಿಸಿದ್ದ. ಅವನ ಕೈಕಾಲಿನಲ್ಲಿ ತ್ರಾಣವಿರಲಿಲ್ಲ. ಎದ...

ಕಾಯಿ ಹಲಸನೆಣ್ಣೆಯೊಳು ಕರಿದು ಮಾರಲಾ ಧನದೊಳಾ ದಾಯವೇರಿದೊಡದನು ಮೌಲ್ಯ ವರ್‍ಧನೆಯೆನುವರಲಾ? ಕಾಯ ಕಷ್ಟದ ಕೃಷಿಯ ಬಯಸದೆ, ಕೃಷಿಯ ಕಷ್ಟವ ಮಯಣವೆನ್ನದೆ, ಎಣ್ಣೆ ಸವರುತ ಮಯಣ ಕಳೆಯದೆ ನಯದೊಳುಣುವರನೋಲೈಸಿದೊಡದು ಮೌಲ್ಯವರ್‍ಧನೆಯೇಂ? – ವಿಜ್ಞಾನೇ...

ಹೋಡೀಬ್ಯಾಡ ಗಂಡಪ್ಪಾ ದೇವರಿಗೊಂದ ದತ್ತಾದೇನಿ || ೧ || ಮೂಲ್ದಗೊಡೀ ಹೆಣ್ಣಾನೀ ಮೂಗ್ತೀಯಾ ವಲ್ಗಿಟ್ಟೀನೀ || ೨ || ಕಳ್ದಗಿಳ್ದದ ಹೋದೀತಂತ್ಯಾ ವಲೆ ಬೂದ್ಯಾಗಿಟ್ತಿದ್ದೇ || ೩ || ಹೌದನನ್ನಾ ಹೆಣ್ಣಾ ಹೊಯ್ಮಾಲಿ ಹೆಣ್ಣಾ || ೪ || ಹೊಡಿಬ್ಯಾಡಾ ಗಂಡಪ...

ಬರೆದವರು: Thomas Hardy / Tess of the d’Urbervilles ಕನ್ನಂಬಾಡಿಯು ಇನ್ನೂ ಕೃಷ್ಣರಾಜಸಾಗರವಾಗಿರಲಿಲ್ಲ. ಆದರೂ ಅಲ್ಲಿ ಆ ವೇಳಿಗೆ ಆದ ಕಟ್ಟೆಯ ಹರಹಿನ ಹಿಂದೆ ನಿಂತ ನೀರೇ ನೋಡು ವವರಿಗೆ ಆಶ್ಚರ್ಯವಾಗುವುದು. ಅಲ್ಲದೆ ಕಾವೇರಿಯ ತಿಳಿನೀ...

ಮನವೇ ಓಡದೆ ನಿ ನಿಲ್ಲು ಒಂದು ಕ್ಷಣ ಮುಂದಡಿಬೇಡ ನನ್ನನ್ನೆ ನಿ ಅನುಸರಿಸಬೇಕು ಹೀಗೆ ದಾರಿ ತಪ್ಪಿ ಓಡಬೇಡ ಹೌದು ನೀನೊಮ್ಮೆ ಆಲೋಚಿಸು ಎಷ್ಟು ಜನ್ಮ ನನ್ನೊಂದಿಗೆ ಕಳೆದೆ ಜನ್ಮ ಜನ್ಮದಲ್ಲೂ ನೀ ಮಾತ್ರ ನಿನ್ನ ಪಟ್ಟು ಬಿಡದೆ ಸಾಧಿಸಿದೆ ಎಷ್ಟೊತ್ತಿನ ವರ...

ಅಹಂ ಬ್ರಹ್ಮ ಈ ಬ್ರಹ್ಮನಿಗೆಂಥ ಹಸಿವು ಇದು ಹಿಂಗಿಸಲಾರದ ಹಸಿವು ಅನ್ನದ ಹಸಿವೀ ಬ್ರಹ್ಮನಿಗೆ ಅನ್ನ ದೊರೆತೊಡೆ ನೀರಿನ ಹಸಿವು ನೀರು ದೊರೆತೊಡೆ ಕಾಮದ ಹಸಿವು ಕಾಮ ದೊರೆತೊಡೆ ಪ್ರೇಮದ ಹಸಿವು ಅಹಂ ಬ್ರಹ್ಮ ಜ್ಞಾನದ ಹಸಿವೀ ಬ್ರಹ್ಮನಿಗೆ ಜ್ಞಾನ ದೊರೆತೊ...

(ಸೊರಗಿರುವ ಅವಳ ನಾಲ್ಕು ಮಕ್ಕಳನ್ನು ನೋಡಿ) ಮಡಿಮಡಿಹಾರುವ ಗುಡಿಯಲ್ಲಿ ತೋಪಿನ ಗುಡಿಯಲ್ಲಿ ಮುಟ್ಟಿಕೊಂಡು ಮೈಲಿಗೆಯಾದ ಹುಡಿಯಲ್ಲಿ ಮೂಲೆಯ ಹುಡಿಯಲ್ಲಿ. ನಿಡುನೀಟು ಸರದಾರ ನಸುಕಿನೊಳಗೆ ಸಂಜೆಯ ನಸುಕಿನೊಳಗೆ ಕಟ್ಟಿಕೊಂಡು ಸೊಟ್ಟಗಾದ ಬೇಲಿಮರೆಗೆ ಬಂಗ...

ದರ್‍ಗಾದ ಎರಡು ಘನ ಗಂಭೀರ ಮೀನಾರುಗಳ ಮುಂದೆ ಸಾಲು ಸಾಲು ಮನೆಗಳು ಬಾಗಿಲಿಗೆ ಕಟ್ಟಿದ ಗೋಣಿ ತಟ್ಟಿನ ಪರದೆಗಳು ಬಣ್ಣಗಳಿಲ್ಲ ಚಿತ್ತಾರಗಳಿಲ್ಲ, ಭಣಗುಟ್ಟುವ ಬದುಕನು ಸಾರಿ ಸಾರಿ ಹೇಳುತ್ತಿದ್ದವು. ಹಬ್ಬ ಹುಣ್ಣಿಮೆ ಬಂದಾಗ ಒಳಬಾಗಿಲಿಗೆ ಅಮ್ಮಿ ಕಟ್ಟು...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...