ಏಳಿರಿ ಏಳಿರಿ, ಬಲುಬೇಗ, ಬೆಳಗಾಯಿತು ಏಳಿರಿ ಬೇಗ | ಖೂಳರ ಭಾರವನಿಳಿವುದಕೆ ಮೇಳಾಗಿ ನಡೆಯಿರಿ ನೀವೀಗ| ಬಿಳಿಯರಮದವನು ತೆಗ್ಗಿಸುತೆ, ಗೆಳೆಯರರವರನು ಮಾಡುತ್ತೆ | ತಿಳಿಸುತೆ ನಮ್ಮಯ ಸಂಸ್ಕ್ರತಿಯ, ಗಳಪದೆ ಮುಂದಡಿಹಾಕುತ್ತೆ | ಬಳವನು ನೂರ್ಮಡಿ ಹೆಚ್ಚಿಸುತೆ ಖಳತನದಿಂದತಿ ದೂರಿರುತೆ | ಬಳರಹಿತರ ನೀವ್ಕಾಯುತ್ತೆ, ...

“ಬೆಳೆಯುವ ಸಿರಿ ಮೊಳಕೆಯಲ್ಲಿ” ಎನ್ನುವಂತೇ “ಮೂರು ವರ್‍ಷದ ಬುದ್ಧಿ ನೂರು ವರ್‍ಷ” ಎನ್ನುವಂತೇ… ಸಲ್ಮಾನ್ ಖಾನ್ ಅವರ “ಬಜರಂಗಿ ಬಾಯಿಜಾನ್” ಎಂಬ ಹಿಂದಿ ಚಲನಚಿತ್ರದಲ್ಲಿ ನಟಿಸಿರುವ ಪುಟಾಣಿ ಸೂಪರ...

ಬಿಡುಗಡೆಯೆ! ದೇವರಿನಣಂ ಕಿರಿಯ ದೇವತೆಯೆ? ಭಾರತಕ್ಕೆ ಬಾರ, ನರನೆರಡನೆಯ ತಾಯೆ! ಋದ್ಧಿ ಬುದ್ಧಿಗಳಕ್ಕನೆಂದು ಸಂಭಾವಿತೆಯೆ, ನೀನೆಲ್ಲಿ ಶಾಂತಿಯಲ್ಲಿದೆ ನಿನ್ನ ಛಾಯೆ! ಯೂರೋಪದಾವ ಗುಣಕೊಲಿದಲ್ಲಿ ನೀ ನಿಂತು ಮಿಕ್ಕಿಳೆಯನವರ ತುಳಿಗಾಲ್ಗೆ ಬಾಗಿಸಿದೆ? ಆ...

ಹರಿಯುವ ಹೊಳೆಗಳ ಜುಳುಜುಳು ರವದಲಿ ಕನ್ನಡವಿದೆ ಸಿರಿಗನ್ನಡವು ತುಳುಕುವ ಕಡಲಿನ ಅಲೆ ಮೊರೆತದಲಿ ಕನ್ನಡವಿದೆ ನುಡಿಗನ್ನಡವು ಹಾಡುವ ಕೋಗಿಲೆ ಗಾನದ ಇಂಪಲಿ ಕನ್ನಡವಡಗಿದೆ ಕನ್ನಡವು ಕೂಗುವ ಕಾಜಾಣದ ಮಾಧುರ್‍ಯದಿ ಕನ್ನಡ ತುಂಬಿದೆ ಕನ್ನಡವು ಅಂಬಾ ಎನ್ನು...

ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ ಅತ್ತಿಂದಿತ್ತ ಇತ್ತಿಂದತ್ತ ಓ...

ಸವಿನುಡಿಯು ತಾಯ್‌ನುಡಿಯು ಸಿಹಿಯಾದ ಜೇನನುಡಿಯು ಕಸ್ತೂರಿ ಶ್ರೀಗಂಧ ಚಂದನದಾನಂದ|| ಮಲೆನಾಡ ಐಸಿರಿಯ ಸೊಬಗಲ್ಲಿ ತೆರೆಯಾದ ಸಹ್ಯಾದ್ರಿ ಉತ್ತುಂಗ ಲೋಕದಾಸೆರೆಯಲ್ಲಿ ಕಾಜಾಣಗಳ ಶೃ ಶ್ರಾವಿತ ಗಾನವಿಹಾರದಲ್ಲಿ ಶ್ರುತಿಯಾಗು ಕಾಣ|| ಮನುಕುಲದ ನವನವೀನತೆಯ ...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಹಕ್ಕಿ ಮಿಡುಕುತಿದೆ ಗಾಳಿಗೆ, ಯೋಚನೆ, ಎಲ್ಲಿಗೊ ಅರಿಯೆ. ಬೀಜ ತುಡಿಯುತಿದೆ ಬಸಿರಿಗೆ. ಮನಸಿನ ಮೇಲೆ, ಗೂಡಿನ ಮೇಲೆ ರತಿಯಲಿ ಬಳಲುವ ತೊಡೆಗಳ ಮೇಲೆ ಜಿನುಗಿ ಇಂಗುತಿದೆ ಅದೇ ಪ್ರಶಾಂತತೆ ಮೆಲ್ಲಗೆ ಮೆಲ್ಲಗೆ ಮೆಲ್ಲಗೆ. *...

ಕನಕಪುರಕ್ಕೆ ಬಂದ ನಂತರ ಯೋಚಿಸುವುದೊಂದೇ ನನ್ನ ಕೆಲಸವಾಗಿತ್ತು. ಯಾವ ಕೆಲಸವೂ ಅವನಿಗಿರಲಿಲ್ಲ. ಅಪ್ಪನ ಆಸ್ತಿಯಿದೆ. ದೊಡ್ಡ ಮನೆ, ದೊಡ್ಡ ತೆಂಗಿನ ತೋಟ, ಹೊಲ-ಗದ್ದೆಗಳು ಇದ್ದರೂ ಮೈ ಮುರಿದು ಯಾರೂ ದುಡಿಯುತ್ತಿರಲಿಲ್ಲ. ಅವನ ಇಬ್ಬರ ಅಣ್ಣಂದಿರು ಸಿಟ...

ಒಂದು ಹಳ್ಳಿಯ ಬಯಲು. ಕತ್ತಲಾಗಲು ಜನರ ಸಂದಣಿಯು ನೆರೆದಿಹುದು ಗೊಂಬೆಯಾಟವ ನೋಡ ಲೆಂದೆಣಿಸಿ ಇಂತಿಗೋ! ಸೂತ್ರಧಾರನು ಆಡ- ಲಸಗುವನು. ಕುಣಿಯುವವು ಗೊಂಬೆಗಳು. ವಾನರರ ನಾಯಕನು ಬಂದನಿದೊ! ಮಾರುತಿಯು ದಾನವರ ಕೆಡವಿದನು, ವ್ಯಥೆಗೊಂಡು ಕಂಡು ಸೀತೆಯ ಪಾಡ!...

ಮಳೆಯ ಮುದುಕನ ದೂಕಿ ಚಳಿಯ ಮುದಿಕಿಯ ನೂಕಿ ಪಂಚಮಿಯ ಹೊಸಹುಡಿಗಿ ಬಂದಳಲ್ಲೊ ಭರಭಽರ ಜೋಕಾಲಿ ಸರಭಽರ ಹೊಸಬಗರಿ ಪಾತಽರಗಿತ್ತೀಯ ತಂದಳಲ್ಲೊ ಹುಡಿಗಿ ಅಂದರ ಹುಡಿಗಿ ಹಂಡೆ ಮಾಟದ ಬೆಡಗಿ ನಾಗರಕ ಥೈಥಳಕು ಹೊಚ್ಚತಾಳೊ ಸೆರಗು ಎತ್ತೋ ಏನೋ ಸೀರಿ ಸುತ್ತಾ ಸೂರೊ...

ಆಕೆಯೊಬ್ಬ ವಿದ್ಯಾವಂತೆ. ಬುದ್ದಿವಂತೆ. ಆದರೀಗ ಗೃಹಿಣಿ.. ವಿವಾಹವಾಗಿ ನಾಲ್ಕೈದು ತಿಂಗಳುಗಳಷ್ಟೇ ಕಳೆದಿವೆ. ಆಕೆಯ ಆ ವಯಸ್ಸು ಸೊಗಸಾದ ಪ್ರೇಮದ ಬಯಕೆಯನ್ನು ವ್ಯಕ್ತಪಡಿಸುವ, ಪತಿಯ ಜೊತೆಜೊತೆಯಲ್ಲಿ ಬಹುಹೊತ್ತು ಇರಬೇಕೆನ್ನಿಸುವ, ರಸಮಯ ಜೀವನದ ಆಕಾಂ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...