ಏಳಿರಿ ಏಳಿರಿ, ಬಲುಬೇಗ, ಬೆಳಗಾಯಿತು ಏಳಿರಿ ಬೇಗ | ಖೂಳರ ಭಾರವನಿಳಿವುದಕೆ ಮೇಳಾಗಿ ನಡೆಯಿರಿ ನೀವೀಗ| ಬಿಳಿಯರಮದವನು ತೆಗ್ಗಿಸುತೆ, ಗೆಳೆಯರರವರನು ಮಾಡುತ್ತೆ | ತಿಳಿಸುತೆ ನಮ್ಮಯ ಸಂಸ್ಕ್ರತಿಯ, ಗಳಪದೆ ಮುಂದಡಿಹಾಕುತ್ತೆ | ಬಳವನು ನೂರ್ಮಡಿ ಹೆಚ್ಚಿಸುತೆ ಖಳತನದಿಂದತಿ ದೂರಿರುತೆ | ಬಳರಹಿತರ ನೀವ್ಕಾಯುತ್ತೆ, ...

ನನ್ ಪುಟ್ನಂಜೀನ್ ಯೆಂಡಾ ಬುಟ್ಟು ಕಣ್ತುಂಬಾನು ಕುಡದೆ. ಪದಗೊಳ್ ಆಡೋದ್ ಯೆಂಗೇಂತೇಳಿ ಔಳ್ನೇ ಪಟ್ಟಾಗಿಡದೆ. ೧ ಮೂರೊತ್ತೂನೆ ನಂಜೀಂತಂದಿ ಔಳಾಡೇ ನಂಗ್ ಮಗ್ಲು. ನಂಜಿ ವೋದ್ರೂ ನೆಪ್ ಓಗ್ನಿಲ್ಲ. ನೆಪ್ ಆಡಿಸ್ತೈತ್ ಈಗ್ಲು. ೨ ವಸ್ತು ವೋದ್ರೆ ನೆಳ್ಳೂನ...

ಹೊನ್ನುರಿಯ ಮೈ ಬಣ್ಣ, ಕೆಂಡಕಾರುವ ಕಣ್ಣ ಎಂಟೆದೆಯ ಹುಲಿರಾಯ, ನಂಟ ನೀನು. “ಕವಡು ಕಂಟಕವಿಲ್ಲದೀ ಹುಲ್ಲೆ ಸವಿ ಮೇವು” ಎನುವೆ ಅದು ತಿಂದಂಥ ಗಂಟು ಏನು? ನೀ ಪಶುವು; ನಿನಗೇನು? ಮನದ ಚೊಚ್ಚಿಲ ಮಗನು ನರಪಶುವು ನರಹಸುಗಳೆಷ್ಟೊ ತಿಂದ. ತನ...

ಒಂದು ಕನ್ನಡಿ ಧಿಡೀರನೆ ಮಾತನಾಡ ತೊಡಗಿತು. “ಎಲೆ, ಮಾನವ! ಏಕೆ ಹೀಗೆ ಪರಿತಪಿಸುತ್ತಿರುವೆ? ಕಂಡದ್ದು, ಎಲ್ಲಾ ನೋಡುವೆ, ಊಹಿಸಿ ಕೊಳ್ಳುವೆ, ಕಲ್ಪಿಸಿಕೊಳ್ಳುವೆ, ಬಾಳ ಇಡೀ ಗೋಳಾಡುವೆ, ಒದ್ದಾಡುವೆ ಛೇ ! ನಿನ್ನ ಬಾಳನೋಡಿ ನನಗೆ ಮರುಕವೆನುಸಿತ್ತಿದೆ”...

ರುಚಿಯೊಳ್ ಮಾವನು ಫಲರಾಜನೆಂದೊಡೆನಬಹುದು ಯೋಚಿಸಲಾ ಪಟ್ಟ ಹಲಸಿಗಿರಬೇಕು ದಿಟದಿ ಉಚ್ಛತನವಿದಕೆ ಸಲ್ಲುವುದು ಗಾತ್ರದಲಿ ಅಡುಗೆ ಪಾತ್ರದಲಿ ಒಕ್ಕೊರಿಯೊಳಿದರಿಂದ ಮಾಡಲುಬಹುದನೇಕ ಮೇಲೋಗರವ ಅಚ್ಚರಿಯೊಳಿದುವೆ ಓಗರಕೆ ಬದಲಹುದನೇಕ ತರಹ – ವಿಜ್ಞಾನೇ...

ಕೋಲು ಕೋಲನ ಕೋಲಿನಾ ಈ ಹೂವಿನಾ ಕೋಲೇ ಕೋಲೂ ಕೋಲೂ ಕೋಲನಾ | ಈ ಹೂವಿನಾ ಕೋಲೇ ತಾತಾಯೆಂಬೋದು ತಂದಿ ಚಿನ್ನಾಯೆಂಬೋದು ತಾಯಿ ತಾಯಿ ತಂದಿ ಸತ್ತಮ್ಯಾಲೆ ತಬಲೀ ಕಾಣೋ ಮಾವಾಯ್ಯಾ ಕೋಲೂ ಕೋಲನ ಕೋಲೋ | ಈ ಹೂವಿನಾ ಕೋಲು || ಹಳ್ಳಿವಳಗೀ ಜನ ಹಳ್ಳೆಯ ಹೊಯ್ದಕೊ...

ಬರೆದವರು: Thomas Hardy / Tess of the d’Urbervilles ನಂಜಪ್ಪನು ಬಂಗಲೆಯಲ್ಲಿ ಖಾವಂದರ ಆಗಮನಕ್ಕೆ ಏನೇನು ಬೇಕೋ ಎಲ್ಲವನ್ನೂ ಸಿದ್ಧ ಮಾಡಿದನು. ಹತ್ತು ಗಂಟೆಗೆ ಅಡುಗೆಯೆಲ್ಲ ಆಗಿ ಬಡಿಸುವುದಕ್ಕೆ ಸಿದ್ದವಾಗಿತ್ತು. ಸುಮಾರು ಹತ್ತೂವರೆಯ...

ಸೃಷ್ಟಿಯ ಕಣ ಕಣದ ಅಭೀಷ್ಟೆ ನಿನ್ನ ಪಡೆಯುವ ಪರಾಕಾಷ್ಠೆ ನನ್ನವನ ನಾನು ಸೇರಿಕೊಳ್ಳಲು ಏಕೆ ಲಜ್ಜೆ ಬಿಮ್ಮು ಸ್ವ ಪ್ರತಿಷ್ಠೆ ದೀಪ ಬೆಳಗಿ ಮೇಲೇಳುತ್ತಿದೆ ತನ್ನವನ್ನ ಪಡೆಯಲು ಗಗನಕ್ಕೆ ಜಲವು ಎಲ್ಲೆಲ್ಲೂ ಹರಿಯುತ್ತೇವೆ ತನ್ನವನ ಸೇರಲು ಸಾಗರಕ್ಕೆ ಗಾಳ...

ಪಗಲಿರುಳ್ಗಳೆನಿಪ್ಪ ಪಗಡೆಹಾಸನು ಹಾಸಿ ಮಾನಿಸರ ಕಾಯ್ಗಳವೊಲಲ್ಲಿರಿಸಿ ಬಿದಿ ತಾ ನಿಲ್ಲಲ್ಲಿ ನಿಲ್ಲಿಸುತ ಚಾಲಿಸುತ ಕೊಲ್ಲಿಸುತ ಲಾಟವಾಡುತ ಬಳಿಕ ಪೆಟ್ಟಿಗೆಯೊಳಿಡುವಂ. *****...

ಈ ಗಿಣಿಯೆ ಆ ಗಿಣಿಯೆ ಯೇ ಗಿಣಿಯೆ ಕಡು ಕೆಂಪಿನ ಕೊಕ್ಕಿದೆಯೆ ಹರಳಿನ ಕಣ್ಣಿದೆಯೆ ಆಚೀಚೆಗೆ ಹೊರಳಿದೆಯೆ ಕೊಂಕುವ ದುಂಡನೆ ಕತ್ತಿದೆಯೆ ಈ ಗಿಣಿಯೆ ಆ ಗಿಣಿಯೆ ಯೆ ಗಿಣಿಯೆ ಎಲ್ಲೆಲ್ಲೂ ಗಿಣಿಯೆ ಚಿನ್ನದ ಕಣಿಯೆ ಈ ಕೋಗಿಲೆ ಆ ಕೋಗಿಲೆ ಯೇ ಕೋಗಿಲೆ ಎಲೆಮರೆ...

ಬನ್ನಿ ರೇ ಸಖಿ, ಎನ್ನಿರೇ-ನಲವೊಂದೆಯೇ ಸಾರ ನಮಗು ಮುದಕು ನೇರಾ ಭವದೂರಾ. ಹಸುರೊಳು ಹೊಳೆಯುವ ಹಿಮಮಣಿಯಂತೆ ಅಲೆಮೇಲಾಡುವ ಹೊಂಬಿಸಿಲಂತೆ ಮನುಜರಾಸೆ ಮೇಲೆ ಆಗಲೆಮ್ಮ ಲೀಲೆ ಹಗುರುಬಗೆಯ ನಗೆಯ ಹೊಗರ ನೆರೆ ಹರುಷವಹುದಪಾರಾ. ಒಲಿವೆನೊಲಿವೆನೆನೆ ಒಲಿಯೆವು ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...