ಗೋರಿ

ನನ್ ಪುಟ್ನಂಜೀನ್ ಯೆಂಡಾ ಬುಟ್ಟು
ಕಣ್ತುಂಬಾನು ಕುಡದೆ.
ಪದಗೊಳ್ ಆಡೋದ್ ಯೆಂಗೇಂತೇಳಿ
ಔಳ್ನೇ ಪಟ್ಟಾಗಿಡದೆ. ೧

ಮೂರೊತ್ತೂನೆ ನಂಜೀಂತಂದಿ
ಔಳಾಡೇ ನಂಗ್ ಮಗ್ಲು.
ನಂಜಿ ವೋದ್ರೂ ನೆಪ್ ಓಗ್ನಿಲ್ಲ.
ನೆಪ್ ಆಡಿಸ್ತೈತ್ ಈಗ್ಲು. ೨

ವಸ್ತು ವೋದ್ರೆ ನೆಳ್ಳೂನೂನೆ
ಜೊತೆಯಾಗ್ ವೊಗೋದ್ ತತ್ವ.
ನಂಜಿ ವೋಗಿ ನೆಪ್ಪುಳಿಯಾದು
ನನ್ ಪುಟ್ನಂಜಿ ಮಾತ್ವ. ೩

ಯಿಂದೆ ನಾನ್ ಆಡ್ತಿದ್ದಿದ್ ಇದ್ದೋಳ್
ಬಾವ್ಟಕ್ಕೆ ಬತೇರಿ.
ಈಗ್ ನಾನ್ ಆಡ್ತಾನಿತ್ತಂದ್ರದೇ
ಇಲ್ದೋಳ್ ನೆಪ್ಪಿಗ್ ಗೋರಿ. ೪
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಳೆದೆಯ ಶೂಲ
Next post ಸಮಾನತೆ ಮತ್ತು ಕೌಟಂಬಿಕ ಸಾಮರಸ್ಯ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…