ಪರಮಾತ್ಮ

ಸೃಷ್ಟಿಯ ಕಣ ಕಣದ ಅಭೀಷ್ಟೆ
ನಿನ್ನ ಪಡೆಯುವ ಪರಾಕಾಷ್ಠೆ
ನನ್ನವನ ನಾನು ಸೇರಿಕೊಳ್ಳಲು
ಏಕೆ ಲಜ್ಜೆ ಬಿಮ್ಮು ಸ್ವ ಪ್ರತಿಷ್ಠೆ

ದೀಪ ಬೆಳಗಿ ಮೇಲೇಳುತ್ತಿದೆ
ತನ್ನವನ್ನ ಪಡೆಯಲು ಗಗನಕ್ಕೆ
ಜಲವು ಎಲ್ಲೆಲ್ಲೂ ಹರಿಯುತ್ತೇವೆ
ತನ್ನವನ ಸೇರಲು ಸಾಗರಕ್ಕೆ

ಗಾಳಿ ಒಳಹೊರಗು ಚಲಿಸಕಿದೆ
ತನ್ನವನನು ನೀಡಿದ ಆಣತಿಗೆ
ಭೂಮಿ ನಿರಾಧಾರವಾಗಿ ನಿಂತಿದೆ
ಅನವರತ ಆ ದೇವನ ಪ್ರೀತಿಗೆ

ಕೊಳೆಯಿರದೆ ಬೆಳಗುತಿಹ ರವಿಯಂತೆ
ನನ್ನೊಳಗು ಮಿಂಚುತಿಹ ಆತ್ಮ
ದೇವನ ಸೇರಲು ನಿತ್ಯವೂ ನಾನಾಗಿ
ಮಾಣಿಕ್ಯ ವಿಠಲ ಪರಮಾತ್ಮ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೪೨

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…