ಕೋಲು ಕೋಲನ ಕೋಲಿನಾ ಈ ಹೂವಿನಾ ಕೋಲೇ
ಕೋಲೂ ಕೋಲೂ ಕೋಲನಾ | ಈ ಹೂವಿನಾ ಕೋಲೇ
ತಾತಾಯೆಂಬೋದು ತಂದಿ
ಚಿನ್ನಾಯೆಂಬೋದು ತಾಯಿ
ತಾಯಿ ತಂದಿ ಸತ್ತಮ್ಯಾಲೆ ತಬಲೀ ಕಾಣೋ ಮಾವಾಯ್ಯಾ
ಕೋಲೂ ಕೋಲನ ಕೋಲೋ | ಈ ಹೂವಿನಾ ಕೋಲು ||
ಹಳ್ಳಿವಳಗೀ ಜನ
ಹಳ್ಳೆಯ ಹೊಯ್ದಕೊಂಡು
ಕೊಳ್ಳಗೆ ಬೆಳಕಿನೊಳಗೇ
ತಿನ್ನತಾರೋ ಮಾವಯ್ಯಾ
ಕೋಲು ಕೋಲನ್ನ ಕೋಲಿನಾ | ಈ ಹೂವಿನ ಕೋಲೇ
ಕಾರಗೆಣಿಸು ಹೊಲವಾ
ಕಾವಲತ್ತು ಜಾಣಾ
ಹೋಗಿ ಹೊಲವಾ ಹೊಕ್ಯುವಲ್ಲೊ ಸಿವನೇ
ಹೊಲದಾವಾ ಮಡಿಕಾರು ಬಂಡಿ ಓಡಿ ಬಂದಾ
ಓಡಿ ಓಡಿ ಬಂದಾ ಹುಡ್ಗನ ಗೋಣಾ ಕೊಯ್ದಾ
ಆ ಪಾಪ ನಾನೇ ನೋಡಬಾರದು
ಹುಡ್ಗನ ತಾಯಿ-ತಂದೆ ಓಡಿ ಓಡಿ ಬಂದು
ಹಿಡೀ ಮಣ್ಣ ಕೊಟ್ಟೋ
ಅತ್ತು ಕರದೂ ಮಾಡಿ
ಹುಡ್ಗನ ಗುಡ್ಡಿ ಮ್ಯಾಲ ಬೀಳಿ ಸಸಿ ಹುಟ್ಟಿ
ಆಟಾತ್ ಈಟಾತ್ ಆಳ ದೊಡ್ಡದಾತೂ
ಆದ ಗಿಡವಾ ಕಡಸೀ ಬಂಡೀಸಾಲೀ ಮಾಡ್ಸಿ
ನಾಡ ನಡುವೇ ಕಡಸೀ ಅಚ್ಚವೇ ಮಾಡ್ಸೀ
ಹರೀಗಳ ಕಡಸೀ ಕೋಲಗಳ ಮಾಡೀ
ಅವು ಕೋಲ ಗೋಳಾ ಬಂಡೀ ಮ್ಯಾಲೆ ಹೇರಿ
ಸ್ವಾಮ್ಯಾ ಶಿವನಾ ಅನ್ನೋ ಯತ್ತನ್ನ ಕಟ್ಟಿ
ಚಹಾ ಅಂದ್ರ ಬಂಡೀ ಸಾಗಿನಲ್ಲ ದೋಶವೇ
ಯಾವ ಬೂಮಿ ತಾಯೀ ಬಂಡೀ ತರ
ನನ್ಗೆ ವಂದೆ ಹಬ್ಬಾ || ಹೇಳಿಕೊಡೊಚೆನ್ನಾ ||
ನಿನ್ಗೆ ವಂದ್ ಹಬ್ಬಾ ಶೀಗಿ ಹಣವೇ ಹಬ್ಬಾ
ಚಹಾ ಅಂದ ಬಂಡೀ ಸಾಗಿತಲ್ಲೋ ಸಿವನೇ ||
ಹತ್ತಂಬಾಳ ಹಲಗೇ ಬಡ್ಡಿ (ಅಣೀ)
ಇವತ ಚವಿರಾ ಚವರಾ ಬೀಸಿ
ನಮ್ಮನ್ನ ಹಿಂಡ್ತಿ ನೀರೀಗೆ ಹೋಗೀ
ಇನ್ನೂ ಬರಲಿಲ್ಲಾ ಇನ್ನೂ ಬರಲಿಲ್ಲಾ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.