
ಇನ್ನು ಹೆರವರ ನೊಗಕೆ ಮಣಿವರಾವಲ್ಲ! ಜಗದಿ ತಲೆಯೆತ್ತಿ ಹೆಬ್ಬಾಳಲೆದ್ದಿಹೆವು, ಕಳಕೊಂಡ ಬಿಡುಗಡೆಯ ಮರಳಿ ಗೆದ್ದಪೆವು ನಡೆ ಮುಂದೆ, ಹಿಂದವಿನ್ನಡಿಮೆಯನ್ನೊಲ್ಲ! ನಡೆ ಮುಂದೆ, ಹಿಂದವಿನ್ನಡಿಮೆಯನ್ನೊಲ್ಲ! ದೇವರೆಮ್ಮಯ ತಂದೆ, ಭಾರತಂ ತಾಯೆ, ತಾಯ ಮೈಸೆರ...
ಎದ್ದೇಳು ಕನ್ನಡಿಗ ನಿದ್ರೆಯನು ತೊರೆದು ಕಣ್ತೆರೆದು ನೋಡೋ ಕನ್ನಡದ ದೈನ್ಯತೆಯ ಹೋರಾಡು ನೀನು ಕರುನಾಡ ಧೀಮಂತ ಆಗುವೆಯೋ ನೀನು ಕಲಿಯುಗದ ಹನುಮಂತ ಪರಭಾಷಾ ಹಾವಳಿಯು ಕನ್ನಡವ ಮುತ್ತಿರಲು ನಿನಗಿನ್ನು ಈ ನಿದಿರೆ ಏತಕೋ ಕನ್ನಡ ತಾಯ್ನುಡಿಗೆ ಕರುನಾಡ ಮುನ...
ಲಲಿತ ಕಲೆಗಳ ಬೀಡು ಈ ನಮ್ಮ ಕನ್ನಡ ನಾಡು ಕನ್ನಡಾಂಬೆಯ ಚರಿತೆಯಬೀಡು ಈ ನಮ್ಮ ಕನ್ನಡ ನಾಡು|| ನವರಸ ನವರಾಗ ರಂಜನಿಯ ಶಿಲ್ಪಕಲೆಗಳ ಸಸ್ಯ ಶ್ಯಾಮಲ ಶ್ರೀ ಗಂಧ ಕಾನನ ಸಹ್ಯಾದ್ರಿ ಶೃಂಗಾರ ರಸ ಸಂಸ್ಕೃ ತಿಯ ತವರೂರು ಈ ನಮ್ಮ ಕನ್ನಡ ನಾಡು|| ರನ್ನ ಜನ್ನ ಪ...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ನಿದ್ದೆಯೊಳದ್ದಿರುವನು ಈ ರಾವುತ, ಬಂದ ಇವನು ಹೇಗೆ? ಅಪರಿಚಿತರು ಜೊತೆ ಬೆರೆದೆವೆ ನನ್ನೀ ತಣ್ಣನೆದೆಯ ಮೇಲೆ? ನಿಟ್ಟುಸಿರಿಡಲು ಉಳಿದಿದೆ ಏನು ವಿಚಿತ್ರ ರಾತ್ರಿಯಿದು; ದೈವಾನುಗ್ರಹ ರಕ್ಷಿಸಿತವನನು ಕೇಡನೆಲ್ಲ ತಡೆದು, ...
ಚಿನ್ನೂ… ಇಷ್ಟೆಲ್ಲಾ ನಡೆದ ಮೇಲೂ ನನಗೆ ನಿದ್ದೆ ಬರಲು ಹೇಗೆ ಸಾಧ್ಯ ಹೇಳು? ಮಧ್ಯೆ ಮಧ್ಯೆ ರಾತ್ರಿಯ ವೇಳೆಯಲ್ಲೇ ಹೆಚ್ಚಾಗಿ ಬರುತ್ತಿದ್ದ ರೋಗಿಗಳು… ಹೆರಿಗೆ, ಸಿಝೇರಿಯನ್ ಶಸ್ತ್ರಕ್ರಿಯೆ, ಹೆಚ್ಚೇ ಇರುತ್ತಿತ್ತು. ಒಂದೊಂದು ದಿನಾ ಪ್...
ಇದು ಚಲಚ್ಚಿತ್ರಗಳ ಛತ್ರ, ಕಾಣುವದಿಲ್ಲಿ ಎಲ್ಲ ಸೃಷ್ಟಿ, ವಿಚಿತ್ರ. ರವಿಯ ಪಟ್ಟದ ಮಹಿಷಿ- ಯಾದ ಛಾಯಾದೇವಿ ಇದರ ಭಾರವ ವಹಿಸಿ ಬಳಗದೊಡನೆಯೆ ಬಂದು ಪ್ರತಿಬಿಂಬಿಸುವಳಿಲ್ಲಿ ಲೋಗರಾ ದುಗುಡ-ನಲುಮೆಗಳ, ಕೇಂದ್ರಿಸುತಿಲ್ಲಿ ಕಿರಣವ್ಯೂಹವನವಳು ಉಸಿರಾಗಿ ಮಾ...
ಕಂಡೆ ಕಂಡೆ ನಿನ್ನ ಕಂಡೆ ಕಂಡುಕೊಂಡೆ ಮಧುವನಾ ನೀನೆ ರಥವು ಪ್ರೀತಿ ಪಥವು ಶಾಂತಿವನದ ಉಪವನಾ ಬೆಳಕು ಕಂಡೆ ಭಾಗ್ಯ ಕಂಡೆ ಕಳೆದ ಗಂಟು ದೊರಕಿದೆ ಶಿಖರದಿಂದ ಶಿಖರಕೇರಿ ಶಿವನ ಮುಕುರ ಸೇರಿದೆ ನನ್ನ ತಂದೆ ಜಗದ ತಂದೆ ಯುಗದ ತ೦ದೆ ಹಾಡಿದಾ ನನ್ನ ಗುಣವ ಮನದ...
ಭಕ್ತಿ ಎನ್ನುವುದು ಏಕಾಂತವೋ ಲೋಕಾಂತವೋ ಎನ್ನುವುದನ್ನು ವಿವರಿಸುವುದು ಕಷ್ಟ. ಭಕ್ತಿ ಎನ್ನುವುದು ಅಂತರಂಗದಲ್ಲಿ ನುಡಿವ ಪಿಸುದನಿಯಂತೆ. ತೀವ್ರವಾದ ಭಾವತೀವ್ರತೆಯಲ್ಲಿ ತನ್ನಾಪ್ತನಾದವರಿಗೆ ತನ್ನ ಪ್ರೇಮವನ್ನು ಸ್ವತಃ ಅನುಭವಿಸುತ್ತಾ ಹೇಳಲು ತೊದಲುವ...
ಐನೋರ್ ವೊಲದಲ್ ಚಾಕ್ರಿ ಮಾಡ್ತ ಸಂಜಿ ಆಯ್ತಂದ್ರೆ ಚಿಂತಿ ಮಾಡ್ತೀನ್- ಯೆಂಗಿರತೈತೆ ನಂಜಿ ಎದ್ಬಂದ್ರೆ. ೧ ನಂಜಿ ನೆಪ್ಪಾಯ್ತ್! ಆದಿ ಗಿಡದಾಗ್ ಊವಾ ಜಲ್ಜಲ್ದಿ ಕೂದಂಗೆಲ್ಲ ಯೆಚ್ಕೋಂತೈತೆ ಆಸೆ ಬಲೆ ಬಲ್ದಿ. ೨ ಊವಾ ಕೂದ್ರಾ ಸಂತೋಸಾನಾ ಅದನ್ ಎಲ್ ಇಡಿಸ...
“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...
“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...
ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
















