ಲಲಿತ ಕಲೆಗಳ ಬೀಡು
ಈ ನಮ್ಮ ಕನ್ನಡ ನಾಡು
ಕನ್ನಡಾಂಬೆಯ ಚರಿತೆಯಬೀಡು
ಈ ನಮ್ಮ ಕನ್ನಡ ನಾಡು||

ನವರಸ ನವರಾಗ ರಂಜನಿಯ
ಶಿಲ್ಪಕಲೆಗಳ ಸಸ್ಯ ಶ್ಯಾಮಲ
ಶ್ರೀ ಗಂಧ ಕಾನನ ಸಹ್ಯಾದ್ರಿ
ಶೃಂಗಾರ ರಸ ಸಂಸ್ಕೃ ತಿಯ ತವರೂರು
ಈ ನಮ್ಮ ಕನ್ನಡ ನಾಡು||

ರನ್ನ ಜನ್ನ ಪಂಪ ಕುವೆಂಪು
ಕುಮಾರವ್ಯಾಸ ಲಕುಮೀಶ
ಕಾವ್ಯರ್ಷಿಗಳ ನುಡಿ
ತಪಗೈದ ಪರ್ವಗಳ ಸಿರಿನಾಡು
ಈ ನಮ್ಮ ಕನ್ನಡ ನಾಡು||

ತುಂಗೆ ಭದ್ರೆ ಕಾವೇರಿ ಕೃಷ್ಣೆ
ಭೀಮೆ ಗೋದಾವರಿ ಶರಾವತಿ
ಜೀವ ಜಲತರಂಗಿಣಿಯರ

ವೀರ ವನಿತೆಯರ
ಶೂರ ಧೀರರ
ತ್ಯಾಗ ಮಹಾತ್ಮರ ವಿಶ್ವ ಚೇತನ
ಗತ ವೈಭವ ಸತ್ವಶೀಲತೆಯ ಕರುನಾಡು
ಈ ನಮ್ಮ ಕನ್ನಡ ನಾಡು||
*****