ಸವಿನುಡಿಯು ತಾಯ್‌ನುಡಿಯು
ಸಿಹಿಯಾದ ಜೇನನುಡಿಯು
ಕಸ್ತೂರಿ ಶ್ರೀಗಂಧ ಚಂದನದಾನಂದ||

ಮಲೆನಾಡ ಐಸಿರಿಯ ಸೊಬಗಲ್ಲಿ
ತೆರೆಯಾದ ಸಹ್ಯಾದ್ರಿ ಉತ್ತುಂಗ
ಲೋಕದಾಸೆರೆಯಲ್ಲಿ ಕಾಜಾಣಗಳ
ಶೃ ಶ್ರಾವಿತ ಗಾನವಿಹಾರದಲ್ಲಿ ಶ್ರುತಿಯಾಗು ಕಾಣ||

ಮನುಕುಲದ ನವನವೀನತೆಯ
ಅಂಗಳದಲಿ ಕೆಳೆಯ ಸಿರಿಯ
ತೋರಿ ಪ್ರೀತಿಯ ಸೆಲೆಯಾಗಿ
ಕಂಪ ಬೀರಿ ಹಸನಾಗಿಹನುಡಿಗೆ ಉಸಿರಾಗು ಕಾಣ||

ಬೆರೆತ ಭಾವದೊಲುಮೆಯಲಿ
ನಿಂತ ನೀ ನಿಲುವಲ್ಲಿ ಇರುವಲ್ಲಿ
ಕನ್ನಡತನವೊಂದಿದ್ದರೆ ನಿನ್ನ ನೀತಿಳಿವಂತೆ
ತಾಯ ಸಿರಿತನದಾ ಅಂಬರದಿ ಚುಕ್ಕಿಯಾಗೋ ಜಾಣ||
*****