ಪಂಚಮಿಯ ಹೊಸಹುಡಿಗಿ

ಮಳೆಯ ಮುದುಕನ ದೂಕಿ ಚಳಿಯ ಮುದಿಕಿಯ ನೂಕಿ
ಪಂಚಮಿಯ ಹೊಸಹುಡಿಗಿ ಬಂದಳಲ್ಲೊ
ಭರಭಽರ ಜೋಕಾಲಿ ಸರಭಽರ ಹೊಸಬಗರಿ
ಪಾತಽರಗಿತ್ತೀಯ ತಂದಳಲ್ಲೊ

ಹುಡಿಗಿ ಅಂದರ ಹುಡಿಗಿ ಹಂಡೆ ಮಾಟದ ಬೆಡಗಿ
ನಾಗರಕ ಥೈಥಳಕು ಹೊಚ್ಚತಾಳೊ
ಸೆರಗು ಎತ್ತೋ ಏನೋ ಸೀರಿ ಸುತ್ತಾ ಸೂರೊ
ಗುಂಡ ಕಲ್ಲಿನ ಎದಿಯ ಮುಚ್ಚತಾಳೊ

ನಾಚೀಗಿ ಗೀಚೀಗಿ ಈ ಚನ್ನಿ ಕಲಿತಿಲ್ಲಾ
ನಾಚೀಗಿ ಹೂಮಾಡಿ ಹೆಣೆಯತಾಳೊ
ಹುಳಿಯ ಹುಣಿಸಿಯ ಹೂವು ಹೊಗರು ಮಾವಿನ ಕಾಯಿ
ಬನತುಂಬ ಹಕ್ಯಾಗಿ ಹಾರತಾಳೊ

ಗಿಡದಾಗ ತಂಬೂರಿ ನೆಲದಾಗ ಜಗ್ಗಲಗಿ
ಸಂತ್ಯಾಗ ಹೊಸತೇರು ಎಳಿಯತಾಳೊ
ಮುದುಕರಾ ಎದಿಯಾಗ ದನಕರಾ ಹೊಗಿಸ್ಯಾಳೊ
ಹುಡುಗರಾ ಕುರಿಮಾಡಿ ಕಾಯತಾಳೊ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮಾನತೆ ಮತ್ತು ಕೌಟಂಬಿಕ ಸಾಮರಸ್ಯ
Next post ಗೊಂಬೆಯಾಟ

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…