ಅವರು ಗಲಾಟೆ ಮಾಡುತ್ತ ಸರಿದು ಹೋದರು ಓಣಿತುಂಬ ತೊಟ್ಟಿಲಲಿ ಮಲಗಿದ ಕಂದ ಚಟ್ಟನೇ ಚೀರಿತು, ಅಂಗಳದ ತುಂಬ ಗಿಡಗಳು ಕಾಣದಂತೆ ಧೂಳು, ತಲ್ಲಣ ಆವರಿಸಿದ ಮುಂಜಾವು. ಅವರು ಬಾಯಿ ಮಾಡುತ್ತ ಬಂದರು, ಜೊತೆಯಲಿ ತುಂಬ ಜನರ ತಂದರು, ಎಲ್ಲಾ ಹೂಗಳು ಬಳ ಬಳ ಬಿಚ್...
ಜೋಪಡಿಯ ಒಳಗಿಂದ ಖಾಲಿ ಮಡಕೆಯ ಮುಂದೆ ಅಳುವ ಕಂದನ ಕೂಗು ಕೇಳಿರುವೆ. ಸತ್ತ ನಗರದ ರಾಜರಸ್ತೆಯ ಓಣಿಯಲಿ ರಾತ್ರಿ ರಾಣಿಯರ ಬೇಹಾರ ಕಂಡಿರುವೆ. ನೆಟ್ಟ ಫಸಲಿಗೆ ಕಟ್ಟದ ಬೆಲೆ ಹೊಟ್ಟೆಗೆ ಒದ್ದೆ ಬಟ್ಟೆ, ಕಟ್ಟಿ ಮಲಗಿದ ರೈತನ ಕಣ್ಣೀರು ನೋಡಿರುವೆ. ಧರ್ಮ ಭ...
ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ, ಧರ್ಮಸಂರಕ...
ಯಾವ ಹಾಡನು ನಾ ಹಾಡಲಿ, ಇನ್ನು- ಬಾಳಿನ ಉಷೆಯನು ಎಚ್ಚರಿಸಲಿ? ಬಂಗಾರ ಬಯಲಲಿ ಸಿಂಗಾರ ಬೆಳೆಯಲಿ ತಂದು ಇಕ್ಕಿದರೊಂದು ಕಿಡಿ ಬೆಂಕಿ ! ಬೆಳೆಯಲ್ಲಿ ಉರಿ ತಾಗಿ, ಬಯಲೆಲ್ಲ ಹೊಗೆಯಾಗಿ ಉಳಿದುದೆಲ್ಲವು ಇಲ್ಲಿ – ಎದೆ ಬೆಂಕಿ ! ನೋವನರಿಯದ ಬಾಳು ಬಾ...
ಮಂಗ ನಗರ ನೋಡಲೆಂದು ಮರದಿಂದಿಳಿದು ಬಂದ ಪಾಪ! ಆಕಾಶ ಚುಂಬಿ ಆಹ ಏನೆಂಬಿ ಸೌಧಗಳ ಕಂಡ ಸೌಧಗಳ ನಡುವೆ ನಾಗರದಂತೆ ಅಲ್ಲ ಅಜಗರದಂತೆ ಬಿದ್ದ ಟಾರ್ ರೋಡುಗಳ ಕಂಡ ಟಾರ್ ರೋಡುಗಳ ಮೇಲೆ ಏನು ಭಗವಂತನ ಲೀಲೆ ಓಡಾಡುವ ಮೋಟಾರು ಆಮೆಗಳ ಕಂಡ ಆಮೆಗಳ ಗರ್ಭದೊಳಗಿಂದ...
ಗಂಡಂದಿರೈವರು ನಿನಗೆ ಪಾಂಚಲಿ ಅದ್ಹೇಗೆ ನೀ ಪಂಚಪತಿವ್ರತೆಯರಲ್ಲಿ ಒಬ್ಬಳೊ ನಾಕಾಣೆ ಯಾರದೊ ಶೃಂಗಾರವ ಕಂಡ ರೇಣುಕೆ, ಪತಿಯ ಕೋಪಕೆ ಬಲಿಯಾಗಿ ಸುತನಿಂದಲೇ ಶಿರ ಛೇದಿಸಿಕೊಂಡಳು ಇಂದ್ರನ ಮೋಸಕ್ಕೆ ಬಲಿಯಾದ ಅಹಲ್ಯೆ ಕಲ್ಲಾದಳು ಕೈಹಿಡಿದವನಿಂದಲೇ ರಾವಣ ಕದ...
ಎಲ್ಲಿಂದಲೋ ಒಂದು ಹೆಣ್ಣು, ಇನ್ನೆಲ್ಲಿಯದೋ ಒಂದು ಗಂಡು ಜತೆಗೂಡಿ, ಸಂಸಾರದಾಟ ಹೂಡಿ ಆಗುತ್ತದೆ ಒಂದು ಜೋಡಿ ಅವನು ಗಂಡ ಅವಳು ಹೆಂಡತಿ ಭಾವಿಸಿ ನೋಡಿದರೆ ಎಷ್ಟೊಂದು ಸೋಜಿಗದ ಸಂಗತಿ *****...
ನೀರುಣಿಸಿ ಸಲುಹಿದರು ಹುಳುಹತ್ತಿ ಬೆಳೆಯಲಿಲ್ಲಾ ! ತಿಳಿಯಲಿಲ್ಲೆನಗೆ ಮಣ್ಣಲ್ಲಾ ಉಸುಕೆಂದು ಈ ನೆಲಾ! ಹೃದಯ ಬಟ್ಟಲೊಳು ಭಕ್ತಿ ಹಾಲು; ದೇವನೊಲಿಯಲಿಲ್ಲಾ! ಬಟ್ಟಲೇ ಎಂಜಲಾಗಿಹುದು; ಮಾಯೆ ಈ ಹೃದಯವಲಾ! ಚಲುವಾದ ಕಾಯಾಯ್ತು; ತಿನ್ನಲಾಸೆ ಮನಕಾಯ್ತು ಮರವ...
ನನ್ನವಳದ್ದು ಎಲ್ಲಾ ಸರಿ ಆದರೆ ಬರೀ ಮೌನ; ಅದೊಂದೆ ಅವಳಲ್ಲಿ ಊನ! *****...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






