ಹರಿನಾಥ ಬಾಬು ವಿ

#ಕವಿತೆ

ಮಗಳು ಬರೆದ ಕವಿತೆ

0

ಮಗಳು ಎಳೆಯ ಮುಗುಳು ಎದೆಯ ಮೇಲೆ ಮಲಗಿರುವಳು ಸದ್ದು ಮಾಡಿದ ಎದೆಯ ಪ್ರಶ್ನಿಸುತ್ತಾಳೆ ಮೆಲ್ಲಗೆ ಯಾರು ನೀನು? ಎದೆಯ ಬಡಿತ ಹಮ್ಮಿನಿಂದ ಕ್ರೈಸ್ತನೆಂದಿತು ಸಣ್ಣಗೆ ಕಂಪಿಸಿದಳು ಮುಸ್ಲಿಮನೆಂದಿತು ಗರ್ವದಲಿ ಒಳಗೇ ದುಃಖಿಸಿದಳು ಹಿಂದುವೆಂದಿತು ಹೆಮ್ಮೆಯಲಿ ಜೋರಾಗಿ ಅತ್ತುಬಿಟ್ಟಳು ಕಣ್ಣೀರಿನಲಿ ತೊಯ್ದ ಹೃದಯ ಮನುಷ್ಯನೆಂದಿತು, ಕೊನೆಗೆ ಅಳುಕುತಲಿ ಮೂಡಿತು ಮುಗ್ಧ ಮುಖದಲಿ ಬುದ್ಧನ ಬೆಳದಿಂಗಳು ಅಪ್ಪಿ ಹೂ […]

#ಕವಿತೆ

ಕಣಜಿರಿಗೆ ಹುಳು ಮತ್ತು ನಾನು

0

ಹಿತ್ತಲ ಬಾಗಿಲು ಬಹು ದಿನಗಳಿಂದ ಮುಚ್ಚಿಯೇ ಇತ್ತು ಇಂದು ಅದೇಕೋ ಬಿಸಿಲು ಹೆಚ್ಚಾಯಿತೆಂದು ತೆಗೆಯಬೇಕಾಯಿತು ಉಸಿರುಗಟ್ಟಿದಂತಿದ್ದ ಆ ಕೋಣೆಯೊಳಗೆ ಸ್ವಲ್ಪ ಗಾಳಿ ಸ್ಚಲ್ಪ ಬೆಳಕು ಸುಳಿದಾಡಿದಂತೆನಿಸಿ ಜೀವ ನಿರಾಳವಾಯ್ತು ಕಂಪ್ಯೂಟರ್ ಪರದೆಯನ್ನೇ ವಿಶ್ವವೆಂಬಂತೆ ದಿಟ್ಟಿಸಿ ಸೋತ ಕಣ್ಣುಗಳಿಗೆ ಹೊಸ ಬೆಳಕು ಹೂಳೆದಂತಾಯ್ತು ಗಂಟು ಹಿಡಿದ ಕಾಲುಗಳಿಗೆ ನಡಿಗೆಯ ಕಲಿಸುವಂತೆ ಮೆಲ್ಲಗೆ ಹೆಜ್ಜೆಗಳಿಟ್ಟು ಹೊರನಡೆದು ಕಿಟಕಿಯೆಡೆಗೆ ಮುಖ […]

#ಕವಿತೆ

ಎರಡು ದಂಡೆಗಳ ನಡುವೆ

0

ಹೊಳೆಯ ಆ ದಂಡೆಯಲಿ ಸುಂದರ ಜನ ಕಣ್ಣ ಕುಕ್ಕುತ್ತಾರೆ ತುಂಬಿ ಹರಿವ ಹೊಳೆ ಸಿಹಿ ನೀರು ಅವರ ಹೊಲಗದ್ದೆಗಳಿಗೆ ಅಲ್ಲಿ ಮೀಯುವ ಮೀನು ಅವರ ಗಂಗಾಳಕೆ ಆ ಹಸಿರು ಕಾಡು ಅಲ್ಲಿ ಜಿಗಿದಾಡುವ ಜಿಂಕೆ ಕುಣಿವ ನವಿಲು ಉಲಿವ ಹಕ್ಕಿಗಳು ಅವರ ಸಂತೋಷಕೆ ಕಣ್ಣು ಕುಕ್ಕುತ್ತಾರೆ ಲಕಲಕ ಅವರು ಬಿಸಿಲು ಬಿದ್ದ ಕನ್ನಡಿ ಈ ದಂಡೆಯಲಿ […]

#ಕವಿತೆ

ಕಲ್ಲು ಬಿದ್ದ ಕೊಳ

0

ಕೂತಲ್ಲಿ ಕೂಡಲಾರದ ನಿಂತಲ್ಲಿ ನಿಲಲಾರದ ಮನವೀಗ ಕಲ್ಲು ಬಿದ್ದ ಕೊಳ ಅವನನ್ನು ಹಾಗೆ ನೋಡಿದ್ದೇ ತಪ್ಪಾಯಿತೆ? ಆ ಕಣ್ಣುಗಳಲ್ಲಿ ಚಾಕು ಚೂರಿಗಳಿದ್ದದ್ದು ನನಗಾದರೂ ಏನು ಗೊತ್ತಿತ್ತು…? ಗೋಡೆಗಳು ಕೇಳಿಸಿಕೊಳ್ಳುವುದು ಹಲ್ಲಿಗಳು ಮಾತನಾಡುವುದು ಅದನ್ನೇ ಸಾಕ್ಷಿಯೆಂದು ನಂಬುವುದು ರಸ್ತೆಗಳೇ ಕಟಕಟೆಗಳಾಗುವುದು ಕಣ್ಣಿದ್ದವರೆಲ್ಲಾ ಜಾಣ ಕುರುಡರಾಗಿರುವುದು ನಟನೆಯೇ ಬದುಕಾಗಿರುವುದು ಎಲ್ಲಾ ಹೆಣ್ಣಿಗೆ ಬರೆದ ಸಂವಿಧಾನ? ಕಟ್ಟಿಕೊಂಡವ ಕಾದ ಹೆಂಚಿನ […]

#ಕವಿತೆ

ಬೆಳಕ ಹೆಜ್ಜೆಯನರಸಿ

0

ಖಾಲಿ ಹಾಳೆಯ ಮೇಲೆ ಬರೆಯುವ ಮುನ್ನ ಚಿತ್ರ ಯೋಚಿಸಬೇಕಿತ್ತು ಯೋಚಿಸಲಿಲ್ಲ ಬರೆದೆ ವಿಧಿ ಬರೆದಂತೆ ಎಲ್ಲಾ ಪಾತ್ರಗಳು ಸುಮ್ಮನಿದ್ದವು ಮೂಕರಂತೆ ಕಾಲ ಕಳೆದಂತೆ ಕೆಲವು ಕೆಮ್ಮಿದವು ಹಲವು ಸೀನಿದವು ರೋಗ ಬಂದಂತೆ ಆಕಳಿಸಿದವು ನಿದ್ದೆ ಹಿಡಿದಂತೆ ಪಿಸುಗುಟ್ಟಿದವು ಗೊಣಗಿಕೊಂಡವು ಬರೆಯುವ ಕೈ ಹಿಡಿದು ನಿಲ್ಲಿಸಲಿಲ್ಲ ಒಂದೂ ಒಂದು ದಿನ ಒಬ್ಬ ಮಸಿ ಹೊದ್ದು ಮಲಗಿದ್ದವನು ಬುದ್ದನಂತೆ […]

#ಕವಿತೆ

ಮೂರು ಲಂಗಗಳ ಮಾತುಕತೆ

0

ಲಂಗ ೧ ‘ಏನೇ ಇಷ್ಟೊಂಽಽಽದು ಘಮ್ ಅಂತೀಯಾ ರಾತ್ರಿಯೆಲ್ಲಾ ಜೋರಾಽಽಽ? ಒಂದಕ್ಕೊಂದು ಗಂಟು ಹಾಕಿ ದ ಗಂಟಿನೊಳಗೇ ಕುಳಿತು ಶುರುವಿಟ್ಟುಕೊಂಡವು ಎಂದಿನಂತೇ ಮಾತಿಗೆ ಗಂಟು ಮೋರೆಯ ಸಡಿಲಿಸುತ ಲಂಗ ೨ ‘ಅದು ಬ್ಯಾರೆ ಕೇಡು ಈ ಜನುಮಕ್ಕೆ ನಾನೇನು ನಿನ್‌ಥರ ಇದ್ದವರ ಮನೆಯ ಮಗಳಾ? ಬೆಳಗೆದ್ರೆ ನೀರು ಬರಲಿಲ್ಲ ತರಕಾರಿ ತರಲಿಲ್ಲ ಹಾಲು ಸಿಗಲಿಲ್ಲ ಕರೆಂಟು […]

#ಕವಿತೆ

ಸರತಿಯಲಿ ನಿಂತವರು

0

ಸಾವು ಮಾರಾಟಕ್ಕಿದೆ ಇಲ್ಲಿ ಜಗದ ಮಾರುಕಟ್ಟೆಯಲ್ಲಿ ತಕ್ಕಡಿಯ ಒಂದು ಬದಿ ಹಸಿವು ಕಲ್ಲಾಗಿದೆ ಇನ್ನೊಂದು ಬದಿ ಗ್ರೆನೇಡುಗಳು ಹಿಟ್ಟಿನ ಮುದ್ದೆ! ಹೊಟ್ಟೆಯೊಳಗಿಂದಲೇ ಬೆನ್ನು ಕಾಣುವ ಸಣ್ಣ ಕಂದಮ್ಮಗಳ ಎದೆಯ ಗೂಡಲ್ಲಿ ಇನ್ನೂ ಜೀವವಿದೆ ತೂರಿ ಆಟವಾಡುತ್ತಿವೆ ಕೈ ಬಾಂಬುಗಳನ್ನೇ ಚೆಂಡೆಂದು ಬತ್ತಿದ ಮೊಲೆಯ ತಾಯಂದಿರು ಬಂದೂಕುಗಳ ಹಿಡಿದು ಒಲೆ ಹಚ್ಚಿದರೆ ಅನ್ನದ ಡಬರಿಯಲಿ ತಮ್ಮದೇ ಕೂಸುಗಳು […]

#ಕವಿತೆ

ಈ ರಸ್ತೆಗಳೇಕೆ ಹೀಗೆ?

0

ಹಿಂದೆ ನಮ್ಮ ಮುತ್ತಾತನವರ ಕಾಲಕ್ಕೆ ಈ ರಸ್ತೆಗಳು ಕಾಡಿನಲ್ಲಿ ಕಳೆದು ಹೋಗುತ್ತಿದ್ದವು ಬೆಟ್ಟಗಳಲ್ಲಿ ಮರೆಯಾಗುತ್ತಿದ್ದವು ನಕ್ಷತ್ರಗಳಿಗೂ ಕೈ ಚಾಚುತ್ತಿದ್ದವು ನಡೆವವರ ಎಡ ಬಲಕು ಹಸಿರು, ಹೂವು ಗರಿಕೆ ಹುಲ್ಲು ಮಾತನಾಡುತ್ತಿದ್ದವು ದಣಿವು ನೀಗುತ್ತಿದ್ದವು ಮೊನ್ನೆ ನಮ್ಮ ಅಪ್ಪನ ಕಾಲಕ್ಕೆ ಈ ರಸ್ತೆಗಳು ಊರಿಂದ ಊರಿಗೆ ಪೇಟೆಯಿಂದ ಪೇಟೆಗೆ ಮನೆಯಿಂದ ಮನೆಗೆ ಬೀದಿಗಳಿಗೆ ಹಾಗೆ ಹೊಲಗಳಿಗೆ ಗೆರೆ […]

#ಕವಿತೆ

ಹೊಸಿಲಿಲ್ಲದ ಬಾಗಿಲು

0

ಮನೆಗೆ ಹಿರೀಮಗ ಹೊಸಿಲು ಎರಡೂ ಒಂದೇ ಬೊಟ್ಟು ಬಳಿದುಕೊಂಡರೂ ಎಡವುವವರು, ತುಳಿಯುವವರು, ದಾಟುವವರು ಇದ್ದದ್ದೇ ಮನೆಯ ಕಾಯುವ ಭಾರ ಹೊಸಿಲಿಗೂ ಹಿರಿ ಮಗನಿಗೂ ಸಮನಾಗಿ ಹಂಚಿಕೆಯಾಗಿದೆ ಆಕಳಿಸಿದರೆ ತಲಬಾಗಿಲ ಮೇಲೆ ಹಲ್ಲಿ ಲೊಚಗುಟ್ಟಿ ಎಚ್ಚರಿಸುತ್ತದೆ ಭೂಮಿ ತಾಯಿಯ ಚೊಚ್ಚಿಲ ಮಗ ನೇಗಿಲು ಹೆಗಲೇರಿಸಿ ಹುಟ್ಟಿದವನು ಬಂಜೆ ಎದೆಯೊಳಗೆ ಹೆಣವಾಗಿ ಕೊಳೆತರೂ ಉಸಿರಾಡುವವನು ಕಂಡ ಕನಸುಗಳೆಲ್ಲಾ ಸಿದಿಗೆ […]

#ಕವಿತೆ

ಹೂಗಳು ಬಾಡಿಲ್ಲ

0

ಸಾವು ಬೇಡುವ ಭೂಮಿ ಸುಡುಗಾಡು ಇದು ಕೊಟ್ಟದ್ದನ್ನು ಪಡೆದು ಲೆಕ್ಕವಿಡುತ್ತಿದೆ ಬೆಳ್ಳಂಬೆಳಿಗ್ಗೆ ಮೂರು ವರ್ಷದ ಕೆಂಚ ಈರಿಯ ಮಗ ಹೊಲೆಗೇರಿಯಲ್ಲಿ ಊಟವಿಲ್ಲದೆ ಸತ್ತ ಸಮಾಧಿ ಮೇಲೆ ಹೂಗಳು ಬಾಡಿಲ್ಲ ಮಟ ಮಟ ಮಧ್ಯಾಹ್ನ ಇಪತ್ತರ ಹರೆಯದ ಕರಿಯ ಮಾರನ ಮಗ ಕುರುಬಗೇರಿಯಲಿ ಖಾಯಿಲೆ ಬಿದ್ದು ಸತ್ತ ಸಮಾಧಿ ಮೇಲೆ ಹೂಗಳು ಬಾಡಿಲ್ಲ ಗುದ್ದಲಿ ಹೆಗಲೇರಿಸಿ ಗುದ್ದು […]