ದುಷ್ಟರು

ದುಷ್ಟರನು ಬಹುದೂರವಿರಿಸಯ್ಯ ಹರಿಯೆ ಇಷ್ಟಾರ್ಥಗಳನೆನಗೆ ಕೊಡದಿರಲು ಸರಿಯೆ ಎನ್ನ ಒಳಗಡಗಿರುವ ಕಳ್ಳರಿಗೆ ಸೋತಿಹೆನು ನಿನ್ನ ಧ್ಯಾನವನೆನಗೆ ದಕ್ಕಗೊಡರಿವರು ಕಣ್ಣು ಬಡಿಯುವ ಕ್ಷಣಕೆ ನಿನ್ನ ಮರೆಸುತಲಿಹರು ಇನ್ನಾವ ಬಗೆಯೊಳಗೆ ಧನ್ಯಳಾಗುವೆನೊ ವಿಷಮಯದ ಮೋಹವನು ಸವಿಮಾಡಿ ಉಣಿಸುವರು...

ಸಪ್ಪುಳ

ಸಪ್ಪುಳಾಗುತಿಹುದು ಅಲ್ಲೀ ಅಪ್ಪ ಬಂದನೇನೊ ನೋಡೂ ಒಪ್ಪದಿಂದ ಪಾದ ತೊಳೆದು ಅರ್ಪಿಸುವೆನು ಕಾಣಿಕೆಯನು ಘಲು ಘಲೆಂಬುದೇನೊ ಓಹೋ ನಳಿನನಾಭ ಬಂದನೇನೊ ಒಳಗೆ ಕರೆದು ಕರವ ಮುಗಿದು ಬೆಳಗಿಸುವೆನು ಧೂಪ ದೀಪ ಬಂಧುವೆನ್ನ ಭಾಗ್ಯನಿಧಿಯಗೊ ಬಂದನೇನೊ...

ಎಡ ಬಲ

ಎಡಬಲದಿ ನೀನಿರಲು ತೊಡಕುಗಳು ಎನಗುಂಟೆ? ಬಿಡೆ ನಿನ್ನ ನಿಲ್ಲು ದೊರೆಯೇ ಕಡು ಬಾಧೆಗಳು ಬಂದು ಹುಡುಕಿ ತಂದುವು ನಿನ್ನ ಅಡಿಗೆರಗಿ ನುತಿಸುವೆನು ತಾಳು ಶ್ರೀ ಹರಿಯೆ ಎನ್ನ ಒಳ ಹೊರಗೆಲ್ಲಾ ನಿನ್ನ ರಾಜ್ಯವೆ ನೋಡ...

ದೇವಲೋಕದ ಹೂ

ದೇವಲೋಕದ ಹೂವು ಭೂಲೋಕಕಿಳಿದಂತೆ ಭಾವವೆನ್ನೊಳಗೆ ಬಂತು ಸಾವಿಗಂಜಲು ಬೇಡ ಪರರಿಗಳುಕಲು ಬೇಡ ನೋವುಂಟೆ ಬಕುತರಿಗೆ? ಹಸುಳೆ ಕೇಳೆಂದು ಸಾಲು ದೀವಿಗೆಯಂತೆ ತಾರೆ ನೆಲಕಿಳಿದಂತೆ ಪೊಳೆವ ಮಾಣಿಕ್ಯದಂತೆ ಕೋಲು ಮಿಂಚೊಡೆದಂತೆ ಫಕ್ಕನೇ ನಕ್ಕಂತೆ ಬೆಳಕು ನೋಡೆಲೆ...

ಬೃಂದಾವನಪತಿ

ಅಂದಿಗು ಪೂತನೆ ಇಂದಿಗು ಪೂತನೆ ಎಂದೆಂದಿಗೂ ನೀನು ಮಂಗಳನೆ ಮಂದಮತಿಗೆ ನಿನ್ನ ತಿಳಿಯಲು ಸಾಧ್ಯವೆ? ಸುಂದಾರ ಸುಗುಣ ದಯಾಕರನೆ ಒಂದೆಂಬೊ ಅದ್ವೈತ ಮಹಿಮ ನೀನಾದರು ದ್ವಂದ್ವವ ನಿರ್ಮಿಸಿ ತೋರಿರುವೆ ಮಂದರೋದ್ಧಾರನೆ ಚೋದ್ಯಮಿದೆಲ್ಲವು ಬೃಂದಾವನಪತಿ ಗೋವಿಂದನೆ...

ಸತ್ಯನಾರಾಯಣ

ಸತ್ಯನಾರಾಯಣ ನಿತ್ಯಪಾರಾಯಣ ಇತ್ತ ಬಾರೈ ಸ್ವಾಮಿ ನನ ಮನೆಗೆ ಚಿತ್ತಯಿಸು ಎನ್ನ ಪ್ರಾರ್ಥನೆ ಎಲ್ಲವ ವಿಸ್ತರಿಸುವೆ ನಿನ್ನ ಇದಿರೊಳಗೆ ಶ್ರುತಿಯೊಳು ಯಾಮ ಯಾಮದಿ ನಿನ್ನ ಕಥೆಗಳ ಕೇಳಿಹೆನುದ್ಭುತ ಚರಿತೆಗಳ ವ್ರತವನ್ನು ಮಾಡುವೆ ಶಕ್ತ್ಯನುಸಾರದಿ ಪರಿಹರಿಸೋ...

ಸಾಕ್ಷಿ

ನಿರ್ಜೀವಿಯಾಗಿಹೆನು ನೋಡು ಬಂದು ಕಣ್ಣೀರು ಕಾಲುವೆಯ ಹಾಯ್ದು ನಿಂದು ಬಯಲೊಂದೆ ಉಳಿದಿಹುದು ನೋಡು ಬಂದು ಮಧುರಸದ ಬಟ್ಟಲನು ನೀಡು ತಂದು ನಾನೆಂಬ ಸೊಲ್ಲಿಲ್ಲ ಕೇಳು ಬಂದು ಜನಕಜೆಯ ಮನವಿದಕೆ ಸಾಕ್ಷಿ ಇಂದು *****

ಪಂಥ

ನಿನ್ನ ತಿಳಿವುದಕಿಂತ ನನ್ನ ತಿಳಿವುದೇ ಲೇಸು ನೀನೆ ನಾನೆಂದೆಂಬ ಪದವೇ ಲೇಸು ಕಂಡವರು ಕೇಳಿದರೆ ನಗರೆ ಈ ಭಾವವನು? ಅದ್ವೈತ ಸಿದ್ಧಾಂತ ಸುಲಭವೇ ಏನು? ಉನ್ನತದ ಬ್ರಹ್ಮಾಂಡಕಾದಿಬೀಜವು ನೀನು ನಿನ್ನಿಂದ ಬಂದಿರುವ ಜೀವಿ ನಾನು...

ಕೆಣಕದಿರಿ ಕವಿಯ

ಕವಿಗಳನು ಕೆಣಕದಿರಿ ದಮ್ಮಯ್ಯ ನೀವು ಕವಿಯಲ್ಲದವರಿಂಗೆ ಗೊತ್ತೆ ಕವಿತನವು ಭಳಿ ಭಳಿರೆ ಭಳಿರೆಂದು ಹೊಗಳದಿರಿ ಸಾಕು ಹೊಗಳಿಕೆಯು ತೆಗಳಿಕೆಯು ಕವಿಗೇನುಬೇಕು ಆವ ಭಾವಗಳವನ ಮುತ್ತಿಕೊಳುತಿಹುವೊ ಆವ ಕ್ರಾಂತಿಗಳೆದ್ದು ಅಟ್ಟಿಬರುತಿಹುವೊ ಆವ ರಾಜ್ಯವಸುತ್ತಿ ಸುತ್ತಿ ಬಳಲುವನೊ...

ಗಾರುಡಿ

ನಿನ್ನೊಳಗಿರುವುದೆ ಒಂದು ವಿಧ ನಾನರಿತಿರುವುದೆ ಒಂದು ವಿಧ! ಬಟ್ಟೆಯ ಹಾವನು ಬಿಟ್ಟಿಹೆಯಾ? ತಿಳಿದೆನು ಬಿಡು ಬಿಡು ಗಾರುಡಿಯಾ! ಬರಿದೇ ಅಲೆಗಳ ತರಿಸಿಹೆಯಾ? ಪರಿಶುದ್ಧನೆ ಒಳಗಡಗಿಹೆಯಾ! ಎಲ್ಲಿಯು ನೀನೇ ತುಂಬಿಹೆಯಾ? ಸಾಹಸಿಗಲ್ಲದೆ ಕಾಂಬುವೆಯಾ! ಮೂಡಿತು ಮೂಡಿತು...
cheap jordans|wholesale air max|wholesale jordans|wholesale jewelry|wholesale jerseys