ಎಡ ಬಲ
ಎಡಬಲದಿ ನೀನಿರಲು ತೊಡಕುಗಳು ಎನಗುಂಟೆ? ಬಿಡೆ ನಿನ್ನ ನಿಲ್ಲು ದೊರೆಯೇ ಕಡು ಬಾಧೆಗಳು ಬಂದು ಹುಡುಕಿ ತಂದುವು ನಿನ್ನ ಅಡಿಗೆರಗಿ ನುತಿಸುವೆನು ತಾಳು ಶ್ರೀ ಹರಿಯೆ ಎನ್ನ ಒಳ ಹೊರಗೆಲ್ಲಾ ನಿನ್ನ ರಾಜ್ಯವೆ ನೋಡ ಇನ್ನಾವ ಕೊರತೆ ಎನಗೆ ಕಣ್ಣು ಸಾಲವೊ ನಿನ್ನ ಸೊಗಸು ನೋಡಲು ದೇವಾ ಸನ್ನುತಾಂಗನೆ ಇದನು ಬಣ್ಣಿಸಲು ಅಳವೇ ಜನನಿ ಬುವಿಯಾಗಿರಲು […]