ಎಡ ಬಲ

ಎಡಬಲದಿ ನೀನಿರಲು ತೊಡಕುಗಳು ಎನಗುಂಟೆ?
ಬಿಡೆ ನಿನ್ನ ನಿಲ್ಲು ದೊರೆಯೇ
ಕಡು ಬಾಧೆಗಳು ಬಂದು ಹುಡುಕಿ ತಂದುವು ನಿನ್ನ
ಅಡಿಗೆರಗಿ ನುತಿಸುವೆನು ತಾಳು ಶ್ರೀ ಹರಿಯೆ

ಎನ್ನ ಒಳ ಹೊರಗೆಲ್ಲಾ ನಿನ್ನ ರಾಜ್ಯವೆ ನೋಡ
ಇನ್ನಾವ ಕೊರತೆ ಎನಗೆ
ಕಣ್ಣು ಸಾಲವೊ ನಿನ್ನ ಸೊಗಸು ನೋಡಲು ದೇವಾ
ಸನ್ನುತಾಂಗನೆ ಇದನು ಬಣ್ಣಿಸಲು ಅಳವೇ

ಜನನಿ ಬುವಿಯಾಗಿರಲು ಜನಕ ನೀನಿರುತಿರಲು
ಎಣೆಯುಂಟೆ ಈ ಭಾಗ್ಯಕೆ?
ಉಣಿಸಿ ಸಲಹುವಳಮ್ಮ ಜ್ಞಾನವೊಸಗುವೆ ನೀನು
ಜನಿಸುವೆನು ಮರಮರಳಿ ಘನರೂಪು ತಾಳಿ

ಸ್ನಿಗ್ಧಮಯವಾಗಿಹುದು ಮಧುವು ತುಳುಕುತಲಿಹುದು
ಮಧುರಭಾವಗಳು ತುಂಬಿ
ದಿಗ್ದಿಗಂತಕೆ ನುಗ್ಗಿ ಸೂರೆಗೊಂಬೆನು ಫಲವ
ಸಿದ್ಧವಾಗಿಹೆನಿನ್ನು ಜಯವು ಜನಕಜೆಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವಲೋಕದ ಹೂ
Next post ಮಿಂಚುಳ್ಳಿ ಬೆಳಕಿಂಡಿ – ೬೨

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…