ಸಪ್ಪುಳಾಗುತಿಹುದು ಅಲ್ಲೀ
ಅಪ್ಪ ಬಂದನೇನೊ ನೋಡೂ
ಒಪ್ಪದಿಂದ ಪಾದ ತೊಳೆದು
ಅರ್ಪಿಸುವೆನು ಕಾಣಿಕೆಯನು

ಘಲು ಘಲೆಂಬುದೇನೊ ಓಹೋ
ನಳಿನನಾಭ ಬಂದನೇನೊ
ಒಳಗೆ ಕರೆದು ಕರವ ಮುಗಿದು
ಬೆಳಗಿಸುವೆನು ಧೂಪ ದೀಪ

ಬಂಧುವೆನ್ನ ಭಾಗ್ಯನಿಧಿಯಗೊ
ಬಂದನೇನೊ ನೋಡು ನೋಡು
ತಂದೆ ಸಲಹು ಕರುಣಿಸೆಂದು
ವಂದಿಸುವೆನು ಬಕುತಿಯಿಂದ

ಮಣಿ ಕಿರೀಟ ಬಂದನೇನೋ
ಘನಮಹಿಮನು ಬಂದನೇನೋ
ವನಜನೇತ್ರೆ ಲಕುಮಿಯೊಡನೆ
ಜನಕಜೆಯನು ಪೊರೆಯಲೆಂದು
*****