ಟಪ ಟಪ ಮಳೆ ಬೀಳಲು ಆರಂಭಿಸಿತು. ಪುಟ್ಟಿ ತನ್ನ ಟೋಪಿ ತೆಗದುಕೊಂಡು ಹೋಗಿ ಹನಿ ಬೀಳದಂತೆ ಒಂದೊಂದು ಗಿಡದ ಮೇಲೂ ಇಡುತಿದ್ದಳು. “ಏನುಪುಟ್ಟಿ, ಗಿಡಕ್ಕೆ ಟೋಪಿ ಹಾಕುತಿದ್ದಿಯಾ?” ಎಂದಳು ಅಮ್ಮ. ಮಳೆ ಬಂದರೆ ನೀನು ನಂಗೆ ಟೋಪಿ ಹಾಕುತ್ತೀಯ, ಅದಕ್ಕೇ ನಾನೂ ಹಾಕಿದೆ. ಸರಿನಾ? ಅಂದಳು ಪುಟ್ಟಿ. “ಅಯ್ಯೋ! ಪುಟ್ಟಿ, ಗಿಡ ಬೆಳಿಯೋಕ್ಕೆ ನೀರು ಬೇಕು” ಎಂದಾಗ “ನಾನು ನನ್ನ ಕೈಯಲ್ಲಿ ಮಳೆ ಹಿಡಿದು ಹಾಕಲಾ, ಅಮ್ಮಾ?” ಅಂದಳು. ಅವಳ ಮುಗ್ಧತೆಗೆ ಮಾರುಹೋದ, ಅಮ್ಮ ಅವಳ ಬರಸೆಳೆದು ಮುತ್ತಿಕ್ಕಿದಳು.
*****