ದುಷ್ಟರು

ದುಷ್ಟರನು ಬಹುದೂರವಿರಿಸಯ್ಯ ಹರಿಯೆ
ಇಷ್ಟಾರ್ಥಗಳನೆನಗೆ ಕೊಡದಿರಲು ಸರಿಯೆ

ಎನ್ನ ಒಳಗಡಗಿರುವ ಕಳ್ಳರಿಗೆ ಸೋತಿಹೆನು
ನಿನ್ನ ಧ್ಯಾನವನೆನಗೆ ದಕ್ಕಗೊಡರಿವರು
ಕಣ್ಣು ಬಡಿಯುವ ಕ್ಷಣಕೆ ನಿನ್ನ ಮರೆಸುತಲಿಹರು
ಇನ್ನಾವ ಬಗೆಯೊಳಗೆ ಧನ್ಯಳಾಗುವೆನೊ

ವಿಷಮಯದ ಮೋಹವನು ಸವಿಮಾಡಿ ಉಣಿಸುವರು
ಹಸಿವ ತೀರಿಸುವಂತೆ ನಟನೆ ಮಾಡುವರು
ವಿಷಮಸ್ಥಿತಿಗೆನ್ನೆಳೆದು ಕ್ರೋಧವನು ತುಂಬುವರು
ಮಸೆಯುತಿಹರೆನ್ನೊಳಗೆ ಮಾತ್ಸರ್‍ಯ ಮದವ

ಕಂಡುಕಂಡುದನೆಲ್ಲ ಕೊಂಡು ತಾ ಎಂಬುವರು
ಉಂಡು ತಣಿಯರು ಒಮ್ಮೆ ದುರುಳ ಚಂಚಲರು
ಖಂಡಿಸಲು ಛೀ ಎಂದು ದಳ್ಳುರಿಯನುಗಿಯುವರು
ದಂಡನೆಗೆ ಮೀರಿಹರು ಎನ್ನ ಕಾಡುವರು

ಕಡಿವಾಣವಿಲ್ಲದೆಯೆ ನಡಸುವರು ಅಂಧಳನು
ಎಡವಿದರು ಸರಿ ಎಂದು ಬೆನ್ನ ಚಪ್ಪರಿಸಿ
ತುಡುಗರನು ಸದೆಬಡಿದು ಎತ್ತಿಕೋ ನಿನ್ನೆಡೆಗೆ
ಒಡೆಯ ಸಾರಥಿಯಾಗೊ ನಿನ್ನ ಜನಕಜೆಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಾರಿ
Next post ಮಿಂಚುಳ್ಳಿ ಬೆಳಕಿಂಡಿ – ೬೪

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

cheap jordans|wholesale air max|wholesale jordans|wholesale jewelry|wholesale jerseys