ನನ್ನ ಹೊರಗಿನ ಜೀವಿತದಲ್ಲಿ ಹೆರರ ಮುಖವಾಡಗಳ ನೆರಳು ನನ್ನೊಳಗಿನ ಜೀವಿತದಲ್ಲಿ ನನ್ನದೇ ಮುಖವಾಡಗಳ ನೆರಳು. ಸೋಮವಾರಕ್ಕೆ ಬೂದು ಮುಖವಾಡ ಶನಿವಾರಕ್ಕೆ ಕಪ್ಪು ಮುಖವಾಡ ಆದಿತ್ಯವಾರವೋ ರಂಗು ರಂಗಿನ ಮುಖವಾಡ ಬನ್ನಿ ನಿಮ್ಮ ಮುಖಕ್ಕೂ ಬೇಕು ಒಂದು ಆವರಣ ಕ...
ಮೌನದ ಚಿಪ್ಪೊಳಗೆ ನುಸುಳಿ ಗುಪ್ತಗಾಮಿನಿಯಂತೆ ಹರಿದು ಅಜ್ಞಾನದಲ್ಲಿಯೇ ಅಸ್ತಿತ್ವವಿಲ್ಲದ ಅಗೋಚರಗಳ ನಡುವೆ ನರಳಿ ಬೂದಿಯಾದ ಕನಸುಗಳು ಹೊರಳಿ ಬದುಕ ಬಯಲ ದಾರಿಯಲಿ ಮೇಣದಂತೆ ಕರಗಿ ಕೊರಗಿ ಹುಟ್ಟೇ ಶಾಪ, ತಾರತಮ್ಯ ವಾಸ್ತವ ನಾಳೆಗಳಿಲ್ಲದ ಬದುಕಲಿ ಬಿಂದ...
ಗರದಿ ಗಮ್ಮತ್ತಿನ ಪೆಟ್ಟಿಗೆಯೊಳಗೆ ಎಂಥೆಂತಾ ಚಿತ್ರಗಳು, ವಿಚಿತ್ರಗಳು! ತಾಜಮಹಲು, ಕುತುಬ್‌ಮಿನಾರು ದೊಡ್ಡಾನುದೊಡ್ಡ ಬಾಹುಬಲಿ ಮತ್ತಿನ್ನಿನೇನೇನೋ… ಗರದಿಯವ ಚಕ್ರ ತಿರುಗಿಸಿದಂತೆಲ್ಲಾ ಬದಲಾಗುವ ಬಣ್ಣದೊಂದಿಗೆ ಚಿತ್ರವೂ ಬದಲಾಗುತ್ತದೆ ಒಂದಿ...
ಹಸಿರು ಗದ್ದೆಗಳ ಪುಟ್ಟ ಬದುವಿನ ಮೇಲೆ ಲಂಗ ದಾವಣಿಗಳನ್ನೆತ್ತಿಕೊಂಡು ಒಂಟಿಗಾಲಲ್ಲಿ ನಡೆಯುತ್ತ ನಾನು ಜಾರಿದ್ದು ಅಷ್ಟರಲ್ಲೆ ಅವನು ನನ್ನನ್ನು ಎತ್ತಿ ಹಿಡಿದಿದ್ದು ಅಷ್ಟರಲ್ಲೆ ಏನೇನೋ ನಡೆದುಹೋದದ್ದೇನಿದು? ಸುಮುಹೂರ್ತ ಸುಲಗ್ನ ಯಾವುದಕ್ಕೂ ಬೇಕು ಅ...
ಯತಿವರನೆ ನಿನ್ನ ಹೆಸರಿಂದು ಉಸಿರಾಗಿಹುದು ನಿನ್ನ ತಪೋಬಲದಿ ಬೆಳಗಿರುವೆ ನಾಡನೆಲ್ಲವನು ಸುಖ-ದುಃಖ ಸಮನಾಗಿಸಿದ ಸ್ಥಿತಪ್ರಜ್ಞ ನೀನು! ಕಡುವಿರ ಸಿದ್ಧಯೋಗಿ ಶ್ರೀ ಕಾಡಸಿದ್ದೇಶ್ವರಾ!! ಈ ಪುಣ್ಯ ಭೂಮಿಯಲಿ ಪುಲ್‌ಪೊದರು ಬೆಳೆದು ಹಿಂದೊಮ್ಮೆ, ಪ್ರಕೃತಿ ...
ಜಿಯಾಗ್ರಫಿ ಭಯಾಗ್ರಫಿ ಓದಿದ್ದೇನೆ; ಯಾವುದೀ ವಯಾಗ್ರಫೀ! *****...
ಒಂದು ಧರ್ಮಕೆ ಮೊಳೆತು ಇನ್ನೊಂದರಲಿ ಫಲಿತು ಸಾರ ಒಂದೇ ಎಂದು ಹಾಡಿದಾತ, ಹನಿ ಸೇರಿ ಹೊಳೆಯಾಗಿ ಗುರಿ ಸೇರಿ ಕಡಲಾಗಿ ನಭವೇರಿ ಮುಗಿಲಾಗಿ ಆಡಿದಾತ, ಹತ್ತು ವನಗಳ ಸುತ್ತಿ, ಹೂ ಹೂವನೂ ಮುತ್ತಿ ಒಂದೇ ಜೇನಿನ ಹುಟ್ಟು ಕಟ್ಟಿದಾತ, ಎಲ್ಲಿ ಹೇಳೋ ತಾತ, ಹಿಂ...
ಪ್ರಶ್ನೆ ಎಲ್ಲಾ ದಿಕ್ಕಿನಲ್ಲಿ ‘ಉತ್ತರ’ಕೆ ದಿಕ್ಕೆ ಇಲ್ಲ *****...
ಭೂಮಿ ಮೇಲೆ ಅದೆಷ್ಟು ಜಾತಿ ಮತ ಧರ್ಮಗಳ ಹಗೆತನ ಕೊಲೆ ಭಯೋತ್ಪಾದನೆಗಳ ಅಟ್ಟಹಾಸ. ಆಕಾಶ ಮಾರ್ಗ ಅದೆಷ್ಟು ಹೊಚ್ಚ ಹೊಸತನ ಬಾನಂಗಳ ಅದೆಷ್ಟು ಸುಂದರ ನನ್ನ ಕಿಡಕಿಯಾಚೆ ಅದೇನು ನಯನಮನೋಹರ ಇಲ್ಲೊಂದು ಪುಟ್ಟ ಮನೆ ಕಟ್ಟುವಾಸೆ. ಕಲ್ಲು ಮಣ್ಣಿನ ಇಟ್ಟಿಗೆ ಸ...
ಯಾವುದು ಮೊದಲೊ, ಮೊದಲಿಗ ರಾರೋ, ಭಾವವಿಸಂಗತ, ಅಲೇಖ್ಯ ನಂದನಕೆ, ಕೊನೆ ಎಲ್ಲಿಯದೊ, ಕೊನೆಯಿಸುವವರಾರೋ, ಭೂರಮೆ ಭಾಗ್ಯದ, ಬಾಂದಳದಂಗಳಕೆ, ಅಂಕುರವಾವುದೋ ಅಂದಣದ್ಹೇರಿಗೆ? ಅಂಕುಶವೆಲ್ಲಿಯೊ ಮುಂದಣ ಯಾನೆಗೆ? ನಿಃ ಶಬ್ದದಿ ದನಿಸಿದ ಇನಿದನಿಯಾವುದೊ, ಯುಗ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...





