ಕಾಣುವುದೊಂದೇ ನಿಜವೇನು
ಕಣ್ಣಿನಾಚೆಯದು ಸುಳ್ಳೇನು?
ಕರಣವ ಮೀರಿ ಹರಣಕೆ ಹಾಯುವ
ಸತ್ವವೆ ಸೋಜಿಗ ಅಲ್ಲೇನು?

ಕಣ್ಣಿಗೆ ಹಾಯದ ಕಿರಣ ಇವೆ
ಕಿವಿಗೂ ಮೀರಿದ ದನಿಗಳಿವೆ,
ಕಂಡರು ಏನು ಕಾಮನ ಬಿಲ್ಲು
ಸುಳ್ಳು ಎನ್ನುವುದು ತಿಳಿದೆ ಇದೆ,

ಬುದ್ಧಿಯೆ ಅರಿವಿನ ಒರೆಯಲ್ಲ,
ಅರಿವಿಗೆಲ್ಲ ನಿಲುಕುವುದಿಲ್ಲ,
ಸೃಷ್ಟಿಯ ಗೂಢವ ಅಳೆಯುವ ಕೋಲು
ನಮ್ಮ ಇಂದ್ರಿಯದ ಮಿತಿಯಲ್ಲ.

ಬರಿಯ ದೇಹದ ಉಪಕರಣ
ಅದರಾಚೆಗೆ ಕಾಣದು ಕರಣ,
ಕನಸು ಮನಸುಗಳ ಕುಣಿತವ ನಿಲಿಸುವ
ಧ್ಯಾನಕೆ ಮಿಂಚುವ ಸತ್ಯ ಘನ.
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)