
ಮರೆಯಲಾರೆ ಎನ್ನರಸ ಮರೆಯದಿರು ಎನ್ನ ಮರೆತಂತೆ ಭಾವನೆಗಳನು|| ಕನಸಿನ ಹಗಲಿರುಳಲ್ಲಿ ಸುಂದರ ನೆನಪುಗಳ ತೀಡಿ ಸೆರೆಯಾದ ಭಾವ ಜೀವವ ಕದಡಿ ಕಾಡುವೆ ಏಕೆ ಹಗಲಿರುಳು|| ಮುಂಜಾನೆಯಂಗಳದೆ ಬಾನಂಚಿನ ಬಣ್ಣ ಧರೆಗೆ ಮುಖ ಚೆಲ್ಲಿದಾಗ ಮನವ ಕದಡಿ ಕಾಡುವೆ ಏಕೆ ಹಗ...
ಚಿತ್ರದುರ್ಗ ಎಂದ ಕೂಡಲೇ ಆಲ್ಲಿನ ಕಲ್ಲಿನ ಕೋಟೆ, ಒನಕೆ ಓಬವ್ವ ಹಾಗೂ ಮದಕರಿ ನಾಯಕ ನೆನಪಾಗುತ್ತಾರೆ. ದುರ್ಗದ ರಾಜಕೀಯದ ಒಳಸುಳಿ ಕಣ್ಣಲ್ಲಿ ಚಿತ್ರಗಳಾಗುತ್ತವೆ. ಆಮೇಲೆ? ಇನ್ನೂ ಇವೆ: ಎಲೆ ಮರೆಯ ಮರದಂತೆ ದುರ್ಗದ ಕೀರ್ತಿ ಪತಾಕೆಯನ್ನು ಸಾಕಷ್ಟು ಮಂ...
ದುಂಬಿಗಳ ಬಾಯಲ್ಲಿ ಕೇಳಬೇಕು ವೇದ ಸಾರ ನಿಸರ್ಗನಾದ. *****...
ನ್ಯಾಯಾಲಯದಲ್ಲಿ ದಡಿಯಲಾಯರ್ ಕುಳ್ಳಗಿನ ಲಾಯರ್ಗೆ ಹೇಳಿದ “ಜಾಸ್ತಿ ಮಾತಾಡಿದರೆ ನಿನ್ನನ್ನು ನನ್ನ ಜೇಬಿನಲ್ಲಿ ಹಾಕಿಕೊಳ್ಳುವೆ.” ಆಗ ಕುಳ್ಳಗಿನ ಲಾಯರ್ ಹೇಳಿದ “ಆಗ ನನ್ನ ತಲೆಗಿಂತ ಜೇಬಿನಲ್ಲಿ ಜಾಸ್ತಿ ಬುದ್ಧಿ ಇರುತ್ತೆR...
“ಅಲೆ! ನೀನು ಸಮುದ್ರವಾಗುವುದು ಯಾವಾಗ?” ಎಂದಿತು ಬೆಟ್ಟ. “ನನ್ನ ತುಮುಲ ಅಡಗಿ ಶಾಂತವಾದಾಗ ನಾನು ಸಮುದ್ರವಾಗುವೆ” ಎಂದಿತು ಅಲೆ. ಮತ್ತೆ ಬೆಟ್ಟ ಸಮುದ್ರವನ್ನು ಕೇಳಿತು “ನೀನು ಅಲೆಯಾಗುವುದು ಏಕೆ?” ಎಂದ...
ಅಮೂರ್ತ ಹಸಿವೆ ಹಿಂಗಿಸಲು ಮೂರ್ತ ರೊಟ್ಟಿ ಸದಾ ಸಿದ್ದ. ಈ ಮೂರ್ತದೊಡಲಿನ ಅಮೂರ್ತ ಹಸಿವು ಜ್ವಲಿಸುವ ಕಾವು ರೊಟ್ಟಿಗೂ ಹಸಿವು. *****...
ಮಳೆ ಎಂದರೆ ಭರ್ರೆಂದು ಎಲ್ಲಾ ಕೊಚ್ಚಿ ರೊಚ್ಚಿ ಸೀಳಿ ಹಾಯ್ದು ಹರಿದು ತಲ್ಲಣಗಳ ಬಂಡಾಟಗಳ ಕಳವಳ ಸೊಂಯ್ಯ ಎಂದು ಸೆಳೆದು ಸಮುದ್ರ ಅಲೆಗಳ ಅಬ್ಬರಿಕೆ ಹೆಚ್ಚುವ ಬಿಂದುಗಳು. ಮಳೆ ಎಂದರೆ ಸಣ್ಣಗೆ ಒಡಲು ಕಂಪಿಸಿ ಬೀಜಗಳ ಮರ್ಮರ ಎದೆಗೆ ಹಾಯಿಸಿ ಒಳಗೊಳಗೆ ಕ...
ಅಧ್ಯಾಯ – ೧೦ ಎಸ್ಸೆಸ್ಸೆಲ್ಸಿ, ಪಿಯುಸಿ, ಕಾಲೇಜಿಗೆ ಬಂದ ವಿದ್ಯಾರ್ಥಿಗಳಲ್ಲಿ ಶೇಕಡಾ ೫೦ ರಷ್ಟು ಮಂದಿ ಧೂಮಪಾನ ಮಾಡಲು, ಮದ್ಯಪಾನ ಮಾಡಲು ಆಸೆ ಪಡುತ್ತಾರೆ. ಸ್ನೇಹಿತರ ಜೊತೆ ಸೇರಿ ಸಿಗರೇಟು ಸೇದುತ್ತಾರೆ. ಬೀರ್, ಬ್ರಾಂದಿ ಕುಡಿಯುತ್ತಾರೆ....
ಬೆಳಿಗ್ಗೆದ್ದು ಬಟನ್ ಒತ್ತಿದಂತೆ ಮಾಮೂಲಿ ಕೆಲಸ, ತಿಂಡಿ ಚಪಾತಿ ತರಕಾರಿ ಅನ್ನಸಾರು ಅಡುಗೆಮನೆಯೊಂದು ಟೇಪ್ರಿಕಾರ್ಡರ್ ಹೊಸದಾದಾಗ ಹೊಸಕ್ಯಾಸೆಟ್ಟು ಅಷ್ಟೆ! *****...
ಮನವ ಮಣ್ಣ ಮಾಡಿ ಭಕ್ತಿಯ ಬೀಜ ಬಿತ್ತಿ ನಂಬುಗೆಯ ಮಳೆಗರೆದರೆ ಮರವಾಗಿ ಫಲಿಸಿತ್ತು ನೋಡಾ ಮುಕ್ತಿ *****...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...















