ಅಮೂರ್‍ತ ಹಸಿವೆ ಹಿಂಗಿಸಲು
ಮೂರ್‍ತ ರೊಟ್ಟಿ
ಸದಾ ಸಿದ್ದ.
ಈ ಮೂರ್ತದೊಡಲಿನ
ಅಮೂರ್ತ ಹಸಿವು
ಜ್ವಲಿಸುವ ಕಾವು
ರೊಟ್ಟಿಗೂ ಹಸಿವು.
*****