ಬಾಳಿನಲ್ಲಿ ಪರಿವರ್ತನೆ ಬಯಸಿ ಅವನು ದಿನವೂ ಮನೆಯ ವಸ್ತುಗಳ ಸ್ಥಳಾಂತರ ಮಾಡುತಿದ್ದ. ಮನೆಯಲ್ಲಿದ್ದ ಸೋಫ, ಮಂಚ, ಹೂದಾನಿ, ಪುಸ್ತಕಗಳು, ಚಪ್ಪಲಿ, ಹೂಗಳನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ, ಮೂಲೆ ಮೂಲೆಗೆ ಬದಲಾಯಿಸಿ, ಬಾಳಲ್ಲಿ ಏನು ಪರಿವರ್ತನೆ ಬಂದೀತೆಂದು ಎದರು ನೋಡುತಿದ್ದ. ಸುಸ್ತಾಗಿ ಕೊನೆಗೆ ಕನ್ನಡಿ ಎದರು ನಿಂತು ತನ್ನ ಕೂದಲ ಶೈಲಿ, ಮೀಸೆ ಬದಲಾಸಿದ. ಪರಿವರ್ತನೆಗೆ ಇಷ್ಟೆಲ್ಲಾ ಶ್ರಮವೇಕೆಪಡುವೆ? “ನಿನ್ನ ಒಳಗೆ ಹೋಗು ಅಲ್ಲಿ ಪರಿವರ್ತನೆ ಮಾಡು” ಎಂದು ಮನಸ್ಸು ಗಟ್ಟಿಯಾಗಿ ಒದರಿತು.
*****