ಹುಲ್ಲುಗಾವಲಿನ
ಪುಟ್ಟ ಹೂವಿಗೆ
ಬೆಟ್ಟವ ಹತ್ತುವಾಸೆ
ಮತ್ತೆ ಗಗನಕೇರಿ
ಚುಕ್ಕೆಯಾಗಿ ಥಳಕುವಾಸೆ
ಪುಟ್ಟನಿಗೆ ಬೆಟ್ಟು ಚಪ್ಪರಿಸಿ
ಜಗಜಟ್ಟಿಯಾಗುವಾಸೆ!