ಮಗಳ ಮನೆಗೆ ಪಕ್ಕದ ಬಡಾವೆಣೆಯಲ್ಲಿ ವಾಸವಾಗಿದ್ದ ತಂದೆ ಬಂದರು. ಕಾಪಿ ಸೇವೆನೆ ಆದನಂತರ ಹೊರಟು ನಿಂತರು. “ಅಪ್ಪಾ, ಒಂದು ನಿಮಿಷ. ಒಳ್ಳೆ ಬೂದುಗುಂಬಳಕಾಯಿ ಮಜ್ಜಿಗೆ ಹುಳಿ ಮಾಡಿದ್ದೀನಿ. ನಿನಗೂ ಮನೆಗೆ ತೆಗೆದುಕೊಂಡು ಹೋಗಲು ಕೊಡುತ್ತೇನೆ. ಸ್ವಲ್ಪ ತಡಿ” ಎಂದೆನ್ನುತ್ತಾ ಅಡಿಗೆ ಮನೆ
ಕಡೆಗೆ ಹೆಜ್ಜೆ ಹಾಕಿದಳು.
ತಂದೆ: “ಯಾರು ಮಾಡಿದ್ದಮ್ಮ, ನೀನು ತಾನೆ?”
ಮಗಳು: “ಅಲ್ಲ ನಮ್ಮ ಅತ್ತೆ ಮಾಡಿರೋದು.”
ತಂದೆ: “ಹಾಗಾದರೆ ಒಂದೆರಡು ಸೌಟು ಜಾಸ್ತಿನೇ ಕೊಡು. ರಾತ್ರಿಗೂ ಆಗುತ್ತೆ!”
***