ಆರನೇ ಕ್ಲಾಸಿನ ಹುಡುಗಿ ಹೋಂ ವರ್ಕ್ ಮಾಡದೇ ಶಾಲೆಗೆ ಬರುತಿದ್ದಳು.

ಮೇಷ್ಟ್ರಿಗೆ ಕೋಪ ಬಂದು “ಶಾಲೆಯ ಗಿಡ ಮರಗಳಿಗೆ ನೀರು ಹಾಕಿ ಬಾ” ಎಂದು ಶಿಕ್ಷೆ ಕೊಟ್ಟರು.

ಹುಡುಗಿಗೆ ಬೇಸರವೂ ಆಗಲಿಲ್ಲ. ಕಣ್ಣೀರು ಬರಲಿಲ್ಲ.

“ಹೋಂವರ್ಕ್ ಕಿಂತ ಇದು ಎಷ್ಟೋ ಚೆನ್ನ” ಎಂದು ಕೊಂಡು ದಿನವೂ ಹೋಂವರ್ಕ್ ಮಾಡದೇ ಬಂದು ಗಿಡ ಮರಗಳಿಗೆ ನೀರು ಹಾಕಿ ನಲಿಯುತಿದ್ದಳು.
*****