ಯಾಕೆ ಮೂಕತೆಯೆನ್ನ ಚಿತ್ತವನು ಮುತ್ತಿಹುದು ? ಯಾಕೆ ಹಾಡಿನ ಹಕ್ಕಿ ಕತ್ತರೆತ್ತದೆ ಇಹುದು ?  ಪ ತೆರೆದೊಲಿದ ಕಣ್ಣಿಂದ ಬಾಳ ನೋಡುತಲಿಹೆನು ಚೆಲುವಿಕೆಯನಂತ-ನವಲೀಲೆಯಲಿ ಮುಳುಗಿಹೆನು ಕಲೆಯ ಕಡಲಿನ ಕನ್ನೆ ಸನ್ನೆಯಲಿ ಕರೆಯುತಿರೆ ಒಲಿಯದೇಕೀ ಕರುಳು, ಉಲಿಯದೇ ಕೀ ಕೊರಳು ?  ೧ ಚಣಚಣಕೆ ಕಣ್ಣಿದಿರು ಕಾಣುವ ಪವಾಡವನು ...

ಕತ್ತಲ ಕಾರ್ಮೋಡವೋ, ನಗುವ ಎಳೆಯ ಬಿಸಿಲೋ ನಮ್ಮ ನಾಳೆ ಹೇಗಿರಬಹುದೋ, ಗೊತ್ತಿಲ್ಲ. ಹೆಜ್ಜೆಗುರುತಿಲ್ಲದ ಕಾಡ ಬಯಲಿಗೆ ಕರೆದೊಯ್ದೀತು ಕಾಲಹಾದಿ- ಯೌವನ ಮರ್ಮರದ ಕಿರುತೊರೆಗೆ, ತಳವಿಲ್ಲದ ಕತ್ತಲ ಕೂಪಕ್ಕೆ, ಹಗಲ ಬಿಂಬವೂ ಮರೆಯಾದ ಎಡೆಗೆ. ಅಪರಿಚಿತ ನಾಡ...

ಪ್ರಿಯತಮನೆ ನಾ ನಿನ್ನ ಪ್ರೇಮದುಮ್ಮಾನದಲಿ ಕಳೆದ ಆ ಸರಿದಿನಗಳ ನೆನೆದು ಬರೆದೆ ನನ್ನೆದೆಯ ಪುಟಪುಟಗಳಲಿ || ನನ್ನ ಅಂದಿನ ಕೆಳೆಯ ಭಾವವ ಅರಿಯಲಿಲ್ಲ ನೀನು ಮರೆತು ದೂರ ಹೋದೆ ಗೆಳೆಯಾ ನನ್ನ ಹೊಂಗನಸುಗಳ ಸೂರೆ ಮಾಡಿಽಽಽ || ನನಪುಗಳ ಸಿರಿ ಸೂರೆಯಲಿ ಗೆಳ...

ನಡುರಾತ್ರಿ ದೆವ್ವಗಳು ಬಾಗಿಲನ್ನು ಬಡಿದವು, ಯಾರೋ ಎಂದು ತೆರೆದೆ. ಕಾಲಮೇಲೆ ಬಿದ್ದು ಮುಳುಮುಳನೆ ಅತ್ತವು, ಪಾಪ! ಒಳಕ್ಕೆ ಕರೆದೆ. ದೀನಮುಖ ಮಾಡಿ ಕೈ ಹಿಡಿದು ಬೇಡಿದವು ಜೊತೆಹೋಗಲೊಪ್ಪಿದೆ. ಅವು ಇಟ್ಟ ಬೀದಿಗಳಲ್ಲಿ ಬೀಗಿ ನಡೆದೆ, ತೆರೆದ ಹಳ್ಳಗಳನ್...

೧ ಶೆರಜಾದೆ ಶೆರಜಾದೆ ಹೇಳೊಂದು ಕತೆಯ ಹೊಗಲಾಡಿಸು ನನ್ನ ಮನಸಿನ ವ್ಯಥೆಯ ಯಾವ ಕತೆ ಹೇಳಲಿ ನಾ ನಿನಗೆ ಇನಿಯ ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ ಯಾರಿಗೂ ತೆರೆಯದ ಮಾಂತ್ರಿಕ ಕೋಟೆ ಆದರೊಳಗೆ ಅವಿತಿಟ್ಟ ಚಿನ್ನದ ಮೂಟೆ ಇಟ್ಟರೆ ಅದರೊಳಗೆ ಚಿನ್ನದ ಮೂಟೆ...

ಎಚ್.ಎಸ್- ಶಿವಪ್ರಕಾಶ್ ಕನ್ನಡದ ಮಹತ್ವದ ಕವಿಗಳಲ್ಲೊಬ್ಬರು. ಕಾವ್ಯ, ರಂಗಭೂಮಿ, ಭಾಷಾಶಾಸ್ತ್ರ ಅಧ್ಯಾತ್ಮ, ದೇಸಿ ಜೀವನಪದ್ಧತಿ ಮುಂತಾದ ಆಸಕ್ತಿಗಳನ್ನು ಹೊಂದಿರುವ ಆವರು, ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ‘ಆರ್‍ಟ್ಸ್ ಅಂಡ್ ಏಸ್ತೆಟಿಕ...

ಜೋಗತಿ ನಾನು ಬೀಗತಿ ಕಾಡತಿ ಯಾಕ ನೋಡತಿ ||ಪ|| ತುರುಬೀನ ಸಿಂಬ್ಯಾಗ ಬಿಂದೀಗಿ ನಾನಿಟ್ಟೆ ತುಂಬೀದ ಮಂದ್ಯಾಗ ಕುಣದೇನ ವಾರೀಗಿ ಗೆಳತೇರು ಛೀಮಾರಿ ಹಾಕ್ಯಾರ ಬೀದೀಯ ಬಸವೆಂದ್ರು ಬಂದೇನ ||೧|| ಇಲಕಲ್ಲ ಸೀರ್‍ಯಾಗ ಬೀಸೀದ ತೋರ್ಮುತ್ತ ಪಕ್ಕಂತ ಹಾರೀತ ಪರ...

ವೃದ್ಧ ದಂಪತಿಗಳಿಗೆ ಆಕೆ ಅಡಿಗೆ ಕೆಲಸ ಮಾಡಿಕೊಡಲು ಬರುತ್ತಿದ್ದಳು. ಎರಡು ಮಕ್ಕಳ ತಾಯಿಯಾದ ಆಕೆ ನೀಟಾಗಿ ಸೀರೆ ಉಟ್ಟು, ಪೋನಿಟೈಲಿಗೆ ಹೂವಿಟ್ಟು, ಕೈ ಪರ್ಸಿನಲ್ಲಿ ಮೊಬೈಲ್ ಇಟ್ಟುಕೊಂಡು ಸ್ಟೈಲಾಗಿ ಬರುತಿದ್ದಳು. ಅವಳಿಗೆ ಅಡುಗೆ ಮಾಡುವಾಗ ಗಂಟೆಗೊಮ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...