ಕಾಮನ ಬಿಲ್ಲಿನ ಬೆಳಕನು ಮೂಗಿಲೊಳೆಲ್ಲ ಚೆಲ್ಲಿ
ಸೃಷ್ಟಿಯನು ವಿಚಿತ್ರಮಯವಾಗಿಸಿದೆ ನೋಡು
ಬಡಗಣದ ಬೆಳಕು!
ಉತ್ತರಧುುವದಿಂದ ಪುಟಿದ ಬೆಳಕಿನ ಕಾರಂಜಿಯೊಂದು
ಕೆಂಬೆಳಕಿನ ಮಾಯೆಯನು ಕಟ್ಟಿ
ಅಗಲವಾಗಿ ಮುಗಿಲಲ್ಲಿ ಹರಿದಿದೆ ನೋಡು!
ಬೆಳಗಿನ ಬೆಳ್ಳಿಯಂತೆ, ಸಂಜೆಯ ರಂಜನೆಯಂತೆ
ಅಧ್ರುವವಲ್ಲ ನೋಡು!
ಮುಗಿಲ್ಲಲ್ಲಿ ಬೇಗೆ ಹಬ್ಬಿದಂತೆ
ಕಣವಿಯಲ್ಲಿರುವ ಬಣವಿಗಳೆಲ್ಲ ಸುಟ್ಟಂತೆ,
ಮುಗಿಲೇ ಅಚಲವಾಗಿ ಭುಗಿಲ್ಲೆಂದಂತೆ,-
ಮೇಲಿನಲಾಬಿ ಸೋಗಿನ ಗುಲಾಬಿ ಬಣ್ಣವಿದು
ಸನಾತನವಾಗಿ ಬಿದ್ದುಕೊಂಡಿದೆ ನೋಡು!
ಸೂರ್ಯನ ಮೇಲೆ ಕಲೆಗಳೆದ್ದಾಗ
ಬಡಗಣದ ಬೆಳಕು ಆಲೆಅಲೆಯಾಗೇಳುವದು!
ವಿದ್ಯುತ್ತಂತಿ, ವಿದ್ಯುದ್ದೀಪ, ವಿದ್ಯುದ್ಧೆಂಜಿನು,-
ಒಂದಾಗಿವೆ ತಂತೋತಂತು; ಫಕ್ಕನೆ ನಂದಿವೆಯಲ್ಲ!
ಇದ್ದಬಿದ್ದ ಗವಿಗಳಲ್ಲಿ ಮೊಗವೆತ್ತದೆ ದುಡಿವಾಳ್ಗಳಿಗೆ
ಸೃಷ್ಟಿಯ ಸೊಬಗ ನೋಡಲೆನೆ
ರಜೆಕೊಟ್ಟು ಕಂಗಳ ಕೊಡುವಂತಹದಿದು,-
ಬಡಗಣದ ಬೆಳಕು!
*****









