ಜೀವನವು ಹೊರೆಯಾಗಿ
ಬಾಳುವೆಯು ಧಗೆಯಾಗಿ
ರೀತಿಸಿತು ಅವನ ಹಾದಿ,
ಕೂಟದಲಿ ಕಾರ್ಮುಗಿಲು
ತೋರ್ವಂತೆ, ಕಾಣ್ವಂತೆ
ಬಾಳಿನಲಿ ಕೂಡಿತ್ತು ಧಾಳಿ.
ಜೀರ್ಣಶೀರ್ಣದ ಉಡುಗೆ
ಬಾಳುವೆಯ ಬಲುಬೇಗೆ
ಪೀಡನದಿ ಭಾದಿಸುತ ಸಾಗಿ,
ಕಂದುಕೊಂದಿದ ದೇಹ
ಜೊಳ್ಳುತಿರುಕನ ನೋವ
ಅರಿಯಬಲ್ಲದೆ ಜಗವು ಎಲ್ಲ?
ಹಸಿವುಹುಯಿಲಿನ ಮೊರೆ
ವಿಕಟನೋವನು ತೋರೆ
ಸಮ್ಮುಖದ ಗದ್ದಲವು ಜಾರೆ-
ರೌದ್ರರಾಳಿನ ಬೀಳು
ಮೋರೆತಗ್ಗಿನ ಬಾಳು
ರಣದಲ್ಲಿ ಮುಗಿದಿತ್ತು ಸಾರೆ.
ವಿವಿಧ ವಿಲಯದ ಬೀಡು
ರೂಪಕೇಡಿನ ನಾಡು
ಬಾಳುವೆಯ ನೆಲೆಯಾಯ್ತು ಸಾರ್ತಿ,
ಅಖಿಲ ಮೋಹದ ಸ್ಥಾನ
ಪ್ರಸರ ನೋಟದ ತಾನ
ಬಾಳುರಿಗೆ ಮರೆಯಾಗಿ ಪೂರ್ತಿ
*****









