Home / ಕವನ / ಕವಿತೆ / ಕೊಳಲ ಕೃಷ್ಣ

ಕೊಳಲ ಕೃಷ್ಣ


ಬಳಿಯ ಮರದ ತಲದಿ ನೀಲ ಕಾಯ ಕೃಷ್ಣನು
ಕೊಳಲ ಕರದಿ ಪಿಡಿದು ನಿಂತು ಸುತ್ತ ನೋಳ್ಪನು
ಪಶ್ಚಿಮದ ದಿಗ೦ತದಲ್ಲಿ,
ರವಿಯು ಕಡಲ ನೀರಿನಲ್ಲಿ
ತನ್ನ ನೆಳಲನಿಣಿಕೆ ನೋಡಿ ಇಳಿಯುತಿದ್ದನು


ರವಿಯು, ತನ್ನ ಶುದ್ಧ ವಾದ ಮಿಸುನಿ ಬಣ್ಣದ
ಕದಿರಿನಿಂದ ಹರಿಯ ಮೈಯೊಳಿರುವ ವಸನದ
ಪೊಳೆವ ಪೀತ ವರ್ಣವನ್ನು
ಹೆಚ್ಚು ಬೆಳಗಿಸುತಲಿ. ಇನ್ನು
ಸರಿಯುತಿದ್ದನಾಗ ತಾಳಿಯಧಿಕ ರಾಗವ


ಕೊಳಲ ಕೃಷ್ಣನಿನಿಸು ಹೊತ್ತು ಹೊಳೆವ ಸೂರ್ಯನ
ಚೆಲುವ ನೋಡಿ, ಮುದವ ತಾಳಿ, ‘ತನ್ನ ಕೊಳಲಿನ
ದನಿಯ ಕೇಳಿ ದೂರದಲ್ಲಿ
ಗುಡ್ಡ-ಬೆಟ್ಟ ತಪ್ಪಲಲ್ಲಿ
ಮೇಯುತಿರುವ ದನಗಳೆಲ್ಲ ಬರಲಿ’ ಎನ್ನುತ,-


ನೆನೆದು ತನ್ನ ಮುರಲಿಯನ್ನು ತುಟಿಯೊಳಿರಿಸುತ,
ಬಾಜಿಸಿದನು. ಒಡನೆ ಕರುವ ಕರೆದು ಕೂಡುತ.
ತುರುಗಳೆಲ್ಲ ಸರಿದು ಬ೦ದು,
ಹರಿಯ ಬಳಸಿ ನೆರೆದುವ೦ದು;
ಗಾನ ಸುಧೆಯ ಸವಿದು, ಶಾಂತಿಸುಖವನಾ೦ತವು


ಪ್ರಕೃತಿ ದೇವಿ ಮೋನದಿಂದ ಕೊಳಲ ಸರವನು
ಆಲಿಸುತ್ತಲಿದ್ದಳಂದು ತಾಳಿಯೊಲವನು
ನಾವು ಕೂಡ ಕೃಷ್ಣನೊರೆದ
‘ಗೀತೆ’ ಯನ್ನು ಕೇಳಿ ಸೊಗದ
ನೆಲೆಯನರಿತು ನಿತ್ಯ ತೃಪ್ತರಾಗಿ ಬಾಳುವ!
*****
೧೯೩೫

Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...