
ನಿನ್ನ ಮಿಲನ ಅದೇ ಕವನ ಶಾಂತಿ ವನದ ಕೂಜನಂ ನವಿಲು ನಾನೆ ಉಯಿಲು ನೀನೆ ರಜತರಂಗ ದಿಂಚರಂ ||೧|| ದೂರ ದೂರ ದೂರ ದಾರಿ ನೂರು ತೀರ ತೀರಿತು ಮತ್ತೆ ಮತ್ತೆ ಹತ್ತು ನೂರು ದಾರಿ ತೋರದಾಯಿತು ||೨|| ಕಾಡು ಕಂಟಿ ಕಡಲು ಇತ್ತ ಹುತ್ತ ಕುತ್ತ ನಾಗರಂ ಬೆಂಕಿ ಭು...
ತಂಟೆ ಮಾಡಿದ ಐದು ವರ್ಷದ ಮಗುವಿಗೆ ತಾಯಿ ಬೈದಳು. ಮಗು ಕೋಪದಿಂದ ಬಯಲು ಮಾಳಿಗೆಗೆ ಹೋಗಿ ಗವಾಕ್ಷಿಯಿಂದ ಕೂಗಿತು. “ಅಮ್ಮಾ! ಅಮ್ಮಾ! ಎಂದು.” “ಎಲ್ಲಿದ್ದೀ ಪುಟ್ಟಾ?” ಅಂದಳು ಅಮ್ಮ. ನಾನು ಆಕಾಶದಿಂದ ಹೇಳುತ್ತಾ ಇದ್ದೀನಿ...
ಎಂಜಲು ಮೆತ್ತಿ ಮಲಿನಗೊಳುವ ರೊಟ್ಟಿ ಮೈಲಿಗೆ. ಎಂಜಲೊಳಗೆ ಹಾಡಿ ಕುಣಿದು ಕುಪ್ಪಳಿಸುವ ಹಸಿವು ಮಡಿ ಮಡಿ. ವ್ಯಾಖ್ಯೆಯೂ ಪ್ರಭುತ್ವದ ಮೂಗಿನ ನೇರಕ್ಕೇ. *****...
ನಾನು ಅಂಧಕನಾಗಿ ಜನಿಸಿರಲುಬಹುದು ಅದಕೆ ಕಾರಣಗಳೇನೇ ಇರಲುಬಹುದು| ಆದರೆ ಎನಗೆ ಬದುಕಲು ಅವಕಾಶದ ನೀಡಿ|| ಅನುಕಂಪದ ಅಲೆಗಿಂತ ಸ್ವಾಭಿಮಾನ ಒಳಿತು ಆತ್ಮಾಭಿಮಾನ ಹಿರಿದು ಅದಕೆ ನೀರೆರೆದು ಅಂಧಕಾರವ ಹೊಡೆದೋಡಿಸಿ|| ಭಿಕ್ಷೆ ಬೇಡಲೆನಗೆ ಮನಸಿಲ್ಲಾ ಹಣದ ಭ...
ಮನುಷ್ಯರ ಭಾಷೆಯನ್ನು ಗುರುತಿಸುವ ಹಾಗೂ ಸೂಕ್ತವಾಗಿ ಸಂಭಾಷಿಸುವ ತಂತ್ರವನ್ನು ರೂಪಿಸುವ ಕಾರ್ಯವಿಧಾನಗಳನ್ನು ಕಂಪ್ಯೂಟರಿಕಣಗೊಳಿಸಲಾಗುತ್ತದೆ. ಧ್ವನಿಯನ್ನು ಗುರ್ತಿಸಿ ಮನುಷ್ಯರನ್ನು ಸ್ವಾಗತಿಸುವ ಕಂಪೂಟರ್‌ಗಳು ಮಾರುಕಟ್ಟೆಗೆ ಬರಲಿವೆ. I.B.M. ಮೈ...
ಪರಿಪರಿ ನೆನೆದೊಡಾ ಐದೆನ್ನ ಕಾಯದೇ ? ಪ್ರಕೃತಿಯೊಳೈದಕ್ಕೆ ಉನ್ನತದ ಬೆಲೆಯುಂಟು ಪಂಚಭೂತಂಗಳೆಲ್ಲ ಜೀವದೊಳುಂಟು ಪ್ರಾಣಂಗಳೆಮ್ಮೊಳೈದು ಇಂದ್ರಿಯಂಗಳೈದು ಪಿಡಿವ ನಡೆದ ಬೆರಳೈದು ಅಂತೆನ್ನ ಕವನಕು ಪಂಕ್ತಿಗಳೈದು – ಅದುವೆ ಕಾಯಲಿ ಎಂದೆನುತ ̵...
ನಾನು, ನನ್ನ ನಾಯಿ ಪ್ರಜ್ಞಾ ಕೂಡಿದ್ದೇವೆ. ನಾನು ಕಂಡದ್ದು, ಕೇಳಿದ್ದು, ಅವರು, ಇವರು, ಯಾಕೆ? ಜಗತ್ತಿನ ಒಳ್ಳೆಯದೆಲ್ಲಾ ನನ್ನದಾಗಬೇಕು; ನನ್ನ ಅನುಭವಕ್ಕೆ ದಕ್ಕಬೇಕೆಂಬೊಬ್ಬ ತಾಮಸಿ. ಪ್ರಜ್ಞಾ ಬೆಂಕಿ, ಬೆಳಕು, ಎಚ್ಚರ ನಾನು ಅತ್ತಿತ್ತ ಒಂದೆರಡು ಹ...
ಒಮ್ಮೊಮ್ಮೆ ಕಲ್ಪನೆಗಿಂತಲೂ ನಿಜವು ಆಶ್ಚರ್ಯಕರವಾಗಿರುತ್ತದೆ. ಕೆಲವು ವೇಳೆ ಕಟ್ಟುಕತೆಯೋ ಎನ್ನುವಷ್ಟು ಸ್ವಾಭಾವಿಕವೂ ಆಗಿರುತ್ತದೆ. ಈಗ ನಾನು ಹೇಳುವ ವಿಷಯವೂ ಆ ಜಾತಿಗೆ ಸೇರಿದ್ದು. ಕೇಳಿದವರು ಇದು ಖಂಡಿತ ನನ್ನ ಕಲ್ಪನೆಯ ಪರಿಣಾಮವೆಂದು ಹೇಳದಿರಲಾ...
ಹೆಂಡತಿಯರ ಮುಂದೆ ಗಂಡಂದಿರ ಪ್ರತಾಪ ಗಂಡಂದರ ಹಿಂದೆ ಹೆಂಡತಿಯರ ಪರಿತಾಪ *****...
ಹಸಿವಾಯಿತು ಶರಣಾದೆ ಮರಗಳಿಗೆ ಬಾಯಾರಿತು ತಲೆಬಾಗಿದೆ ನದಿಗಳಿಗೆ ಮನಸೊಪ್ಪಿತು ಸುಲಿಪಲ್ಲ ಗೊರವಂಗೆ ಒಲಿದೆ ಗಿರಿಗಳಿಗೆ ಗವಿಗಳಿಗೆ ಗಿಳಿ ಕೋಗಿಲೆ ನವಿಲುಗಳಿಗೆ ಮಂದ ಮಾರುತಗಳಿಗೆ ಕೈಯ ಮುಗಿದೆ ನಡೆವವಳಿಗೆ ನುಡಿಯ ಹಂಗೇಕೆ? ಕಡೆಯ ನುಡಿಯನೂ ಕೊಡವಿ &#...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...















