ಎಂಜಲು ಮೆತ್ತಿ
ಮಲಿನಗೊಳುವ
ರೊಟ್ಟಿ ಮೈಲಿಗೆ.
ಎಂಜಲೊಳಗೆ
ಹಾಡಿ ಕುಣಿದು ಕುಪ್ಪಳಿಸುವ
ಹಸಿವು ಮಡಿ ಮಡಿ.
ವ್ಯಾಖ್ಯೆಯೂ ಪ್ರಭುತ್ವದ
ಮೂಗಿನ ನೇರಕ್ಕೇ.
*****