Day: August 6, 2024

ಉಮರನ ಒಸಗೆ – ೨೯

ಈ ಗುಲಾಬಿಯ ಕೆಂಚದೆತ್ತಣದೊ! ಇದರ ಬೇ ರೀಂಟಿತೇಂ ಚಲುವೆಯೊರ್‍ವಳ ರಕುತ ಕಣವ? ಈ ನದಿಯನಪ್ಪಿರುವ ಪಸುರೊ! ಪಿಂತಿತ್ತಳಿದ ಬಿರಯಿಯೋರ್‍ವನ ತಲೆಯ ಪಾಗಿದಕೆ ಬೇರೇಂ? *****

ತನ್ನ ತಾನು ಗೆದ್ದವನೇ

ತನ್ನ ತಾನು ಗೆದ್ದವನೇ ನಮ್ಮ ಚೆಲುವ ಗೆದ್ದುದೆಲ್ಲವನೊದ್ದವನೇ ನಮ್ಮ ಚೆಲುವ ಬೆಟ್ಟದೆತ್ತರ ಬೆಳೆದವನೇ ನಮ್ಮ ಚೆಲುವ ದಿಗಂಬರವನುಟ್ಟವನೇ ನಮ್ಮ ಚೆಲುವ ಸೂರ್‍ಯನಿಗೆ ಪ್ರತಿಸೂರ್‍ಯನೇ ನಮ್ಮ ಚೆಲುವ ಚಂದ್ರನಿಗೆ […]

ಇರುಳು-ಚಂದ್ರೋದಯ

ಬುವಿಯ ಚಾಪೆಯ ತೆರದಿ ಸುತ್ತಿ ಹೊತ್ತೊಯ್ವಂತೆ ಕತ್ತಲೆಹಿರಣ್ಯಾಕ್ಷ ಮುತ್ತಿಬಹ ನಕ್ಷತ್ರ- ಮೊತ್ತಮಂ ಧಿಕ್ಕರಿಸಿ ಬರುತಿಹನು ಗೆಲವಾಗಿ ದಿವಕಶಾಂತಿಯ ತಂದು. ಹೊಸರಾಜ್ಯವಾಯ್ತಿಂದು ಇದರ ಸತ್ಯವೆ ಬೇರೆ, ಶಾಸನವೆ ಬೇರೆ. […]