ಏಸುದಿನ, ಹಾ! ಏಸುದಿನ ಕೊನೆಯ ಕಾಣದಿಹ
ಈ ಘಾಸಿ ಆತರ್‍ಕಗಳ ಬವಣೆ ನಮಗೆ?
ಕೈಗೆ ಸಿಲುಕದ ಕಹಿಯ ಫಲವನೇನರಸುವುದು,
ಮುದವ ಕಣ್ಗಿಂಬಾದ ದ್ರಾಕ್ಷಿ ಬೀರುತಿರೆ?
*****