Home / ಕವನ / ಅನುವಾದ / ಹುಚ್ಚಿ ಜೇನ್ ಪಾದರಿಯ ಜೊತೆ ಮಾತಾಡಿದ್ದು

ಹುಚ್ಚಿ ಜೇನ್ ಪಾದರಿಯ ಜೊತೆ ಮಾತಾಡಿದ್ದು

ಮೂಲ: ವಿಲಿಯಂ ಬಟ್ಲರ್ ಏಟ್ಸ್

ದಾರಿಯಲ್ಲಿ ಎದುರಾದರು ಪಾದ್ರಿ
ಮಾತ ಮಧ್ಯೆ ಎಚ್ಚರಿಸಿದರು.
‘ಚಪ್ಪಟೆ ಮೊಲೆಗಳು ಜೋತಿವೆ ಕೆಳಗೆ,
ಬತ್ತಿ ಹೋಗುತಿವೆ ನಾಳಗಳು;
ವಾಸಿಸು ಹೆಣ್ಣೆ ದೇವಸೌಧದಲಿ,
ತಕ್ಕುವಲ್ಲ ಕೊಳೆರೊಪ್ಪಗಳು’.

ಕೂಗಿ ಹೇಳಿದೆನು ಪಾದ್ರಿಗೆ ನಾನು
‘ಸೊಗಸಿಗು ಹೊಲಸಿಗು ನಂಟು ಇದೆ
ಬೇಕೇ ಬೇಕು ಸೊಗಸಿಗೆ ಹೊಲಸು.
ಗೆಳೆಯರಿಲ್ಲ ನಿಜ, ಆದರದು
ದೇಹದ ದೈನ್ಯದ, ಹೃದಯದ ಹೆಮ್ಮೆಯ ಗರಡಿಯಲ್ಲಿ ಕಲಿತಂಥದ್ದು
ಗೋರಿಯಂತೆಯೇ ಹಾಸಿಗೆ ಕೂಡ ಅಲ್ಲಗಳೆಯದ ಸತ್ಯವದು.

ಎಷ್ಟೆ ಹಮ್ಮಿರಲಿ ಒಲಿದ ಹೆಣ್ಣಿಗೆ
ಎಷ್ಟೇ ಸೆಟೆದಿರಲಿ;
ಪ್ರೇಮ ನಿಲ್ಲಿಸಿದೆ ತನ್ನ ಮಹಲನ್ನ
ಉಚ್ಚೆಯ ಬಚ್ಚಲಲಿ;
ಹರಿಯದೆ ಯಾವುದು ಹೇಗಾದೀತು ತನಗೆ ತಾನೆ ಪೂರ್‍ಣ?
ಹರಿಯದೆ ಹೇಗೆ ಇಡಿಯಾದೀತು ಕರೆಯದೆ ಇನ್ನೊಂದನ್ನ?
*****
ಭೋಗ ಮತ್ತು ವಿರಾಗಪರವಾದ ಎರಡೂ ನಿಲುವುಗಳ ಢಿಕ್ಕಿಯನ್ನು ಕವಿ ಈ ಪದ್ಯದಲ್ಲಿ ಚಿತ್ರಿಸುತ್ತಾನೆ. ತಾನು ಕಂಡಿದ್ದ ಮೇರಿ ಎಂಬ ಹುಚ್ಚಿ ಹೆಣ್ಣೊಬ್ಬಳನ್ನು ಒಂದು ಪಾತ್ರವಾಗಿ ಹೊರಳಿಸಿಕೊಂಡು ಏಟ್ಸ್ ಎಂಟು ಪದ್ಯಗಳನ್ನು ಬರೆದಿದ್ದಾನೆ. ಇದು ಅವುಗಳಲ್ಲಿ ಹೆಚ್ಚು ಪ್ರಸಿದ್ಧವಾದದ್ದು. ‘ಜ್ಞಾನಿ’ಯಾದ ಬಿಷಪ್ಪನಿಗೆ ‘ಹುಚ್ಚಿ’ಯಾದ ಜೇನ್ ಕೊಡುವ ಉತ್ತರ ಮಾರ್‍ಮಿಕವಾಗಿದೆ.

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...