ಹಸಿವಾಯಿತು
ಶರಣಾದೆ ಮರಗಳಿಗೆ

ಬಾಯಾರಿತು
ತಲೆಬಾಗಿದೆ ನದಿಗಳಿಗೆ
ಮನಸೊಪ್ಪಿತು
ಸುಲಿಪಲ್ಲ ಗೊರವಂಗೆ ಒಲಿದೆ

ಗಿರಿಗಳಿಗೆ ಗವಿಗಳಿಗೆ
ಗಿಳಿ ಕೋಗಿಲೆ ನವಿಲುಗಳಿಗೆ
ಮಂದ ಮಾರುತಗಳಿಗೆ
ಕೈಯ ಮುಗಿದೆ

ನಡೆವವಳಿಗೆ ನುಡಿಯ ಹಂಗೇಕೆ?
ಕಡೆಯ ನುಡಿಯನೂ ಕೊಡವಿ
…ಮುನ್ನಡೆದೆ

ಕೂಡಿ ಬಂದಿರಲು ಗಳಿಗೆ
ಕಾಲು ದಾರಿಯೆ ಸಾಕು
ಕರೆದೊಯ್ಯಲು ಕದಳಿಗೆ…

ಇದನರಿಯದಿಹನೆ
ಚೆನ್ನಮಲ್ಲಿಕಾರ್‍ಜುನ?
*****

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)