ಇದು ಏನು ಸೋಜಿಗವೋ ಈ ಜಗದಿ
ಮದೀನದ ರಾಜುಗವೋ || ಪ||

ಕದನ ಕರ್ಬಲಕೋಡಿ ಶರಣರ
ಕುದುರಿ ಕಾಲ್ಕೆದರಲ್ಕೆ ಆದರೊಳು
ಹುದುಗಿದಾನಲೆದ್ದು ಮೆರದಿತು
ಒದಗಿತೊಂದೈಸುರದಲಾವಾ || ಅ. ಪ. ||

ಮೂಲೋಕದೊಳಗೆ ಮೇಲೋ ಕಾಳಗದೊಳು
ಮೂಲಕದೊಳಗೆ ಮೇಲೋ
ಕೋಲಹಾಲಮಾಡಿ ಬಾಲೆರ
ಮೇಲ ಹತ್ತಿ ಯಜೀದನಾಲಯ
ಸಾಲು ಮಾಲುಗಳೆಲ್ಲ ಸುಟ್ಟವೋ
ಹೇಳಲೇನರ್ಭಾಟ ರಣದೊಳು || ೦ ||

ಭೂಮಿಯನಾಳಿದರೋ
ಇಮಾಮಹಸೇನಿ ಹುಸೇನಿಯರೋ
ನೇಮಿಸಿ ನಡದಾರೋ ಸಮರಕೆ
ಈ ಮೊಹೋರುಮ ತಿಂಗಳದಿ ಘನ
ಸ್ವಾಮಿ ಶಿಶುನಾಳೇಶ ಪಾಲಿಸಿ
ನಾಲಶಾ ಎಂದ್ಹೆಸರನಿಟ್ಟರೋ || ೨ ||
*****