ಮದೀನಪುರದ ಶಹರದೊಳೇನಾದಿತೋ
ಸದರ ಮಹಮ್ಮದ ನೆದರೊಳು ಪೈಗಂಬರ
ಇದರಿಗೆ ತೋರುವ ಚದುರ ಮಕಾನದಿ || ೧ ||

ದಾಮಶಪುರದಿಂದ
ನೇಮಿಸಿ ಯಜೀದ
ಆ ಮಹಾ ಕರ್ಬಲ ಈ ಮಹಿ ಕಲಿಯೊಳು || ೨ ||

ಜಡಿದು ಮುತ್ತಿಗೆ ಹಾಕಿ
ಕಡಿದಾಡಿ ಶರತಾಕಿ
ಮಡಿದಾರ್ರಿ ಭಟರೆಲ್ಲ ಪೊಡವಿ ನಡಗಿತಲ್ಲಾ || ೩ ||

ಕತ್ತಲ ಶಹಾದತ್ತು
ಶಹೀದರಾಗುವದು ಗೊತ್ತು
ಕ್ಷಿತಿಯೊಳು ಶಿಶುನಾಳಪತಿ ಪರಾತ್ಪರವಾದ || ೪ ||
*****